ದೃತರಾಷ್ಟ್ರ ಪೂರ್ವ ಜನ್ಮದಲ್ಲಿ ಮಾಡಿದ ಈ ಪಾಪದಿಂದಾಗಿ ದ್ವಾಪರಯುಗದಲ್ಲಿ ಕುರುಡನಾಗಿ ಹುಟ್ಟಿದ. ಏನದು ಕಾರಣ?
ಮಹಾಭಾರತ ಹಲವಾರು ಉಪದೇಶಗಳನ್ನು ಒಳಗೊಂಡ ನಮ್ಮ ಭಾರತದ ಸರ್ವ ಶ್ರೇಷ್ಠ ಗ್ರಂಥಗಳಲ್ಲಿ ಒಂದಾಗಿದೆ. ಇಲ್ಲಿ ಎಲ್ಲ ಪ್ರಶ್ನೆಗಳಿಗೆ ಉತ್ತರ ಅಡಗಿದೆ. ಹಾಗೇನೇ ಹಲವಾರು ಪಾತ್ರಗಳು ಬರುತ್ತವೆ ಅಲ್ಲದೆ ಪ್ರತಿಯೊಂದಕ್ಕೂ ಅದರದೇ ಅದ ಉಪಕಥೆಗಳು ಅಡಗಿದೆ. ಅಂತಹ ಪಾತ್ರಗಳಲ್ಲಿ ದೃತರಾಷ್ಟ್ರ ಪಾತ್ರವು ಒಂದು. ಹುಟ್ಟಿನಿಂದಲೇ ಕುರುಡನಾಗಿದ್ದು ತಾನು ಪೂರ್ವ ಜನ್ಮದಲ್ಲಿ ಮಾಡಿದ ಈ ಒಂದು ತಪ್ಪಿಗಾಗಿ. ಅದೇನು ತಪ್ಪು ಇಲ್ಲಿದೆ ಮಾಹಿತಿ.
ಮಹಾಭಾರತದ ಪ್ರಕಾರ ಶಂತನು ಹಾಗು ಸತ್ಯವತಿಗೆ ಇಬ್ಬರು ಪುತ್ರರಿದ್ದರು ಅವರ ಹೆಸರು ವಿಚಿತ್ರವೀರ್ಯ ಹಾಗು ಚಿತ್ರಾಂಗದ ಆಗಿತ್ತು. ಚಿತ್ರಾಂಗದ ಅಲ್ಪಾಯುಷಿ ಆಗಿದ್ದ ಒಂದು ಯುದ್ಧದಲ್ಲಿ ಹೋರಾಡುತ್ತಿರುವಾಗ ವೀರ ಮರಣವಪ್ಪಿದ. ನಂತರ ಭೀಷ್ಮ ಪಿತಾಮಹ ತಮ್ಮ ಶಕ್ತಿಯಿಂದ ಕಾಶಿ ರಾಜನ ಪುತ್ರಿಯರಾದ ಅಂಬಿಕೆ ಮತ್ತು ಅಂಬಾಲಿಕೆ ಯಾರನ್ನು ವಿಚಿತ್ರವೀರ್ಯನಿಗೆ ಕೊಟ್ಟು ಮಾಡುವೆ ಮಾಡಿಸಿದರು. ಆದರೆ ಮಾಡುವೆ ಅದ ಸ್ವಲ್ಪ ಸಮಯದ ನಂತರದಲ್ಲೇ ವಿಚಿತ್ರವೀರ್ಯನಿಗೆ ಒಂದು ಕಾಯಿಲೆ ಬಂದು ವಿಧಿವಶನಾದನು. ಅಂಬಿಕೆ ಹಾಗು ಅಂಬಾಲಿಕೆ ಇಬ್ಬರಿಗೂ ಸಂತಾನ ವಿರಲಿಲ್ಲ.
ಸತ್ಯವತಿ ಗೆ ತಮ್ಮ ವಂಶ ಹೇಗೆ ಮುಂದುವರಿಯುವುದು ಎನ್ನುವ ಚಿಂತೆ ಕಾಡತೊಡಗಿತು. ಅದೇ ಕಾರಣಕ್ಕೆ ಸತ್ಯವತಿ ವೇದವ್ಯಾಸ ಮುನಿ ಬಳಿ ತಮ್ಮ ಚಿಂತೆ ತೋಡಿಕೊಂಡರು. ಇದಕ್ಕೆ ವೇದವ್ಯಾಸ ಮುನಿಗಳು ಸತ್ಯವತಿಗೆ ಚಿಂತೆ ಮಾಡದಿರಲು ಹೇಳಿ ಅಂಬಿಕೆ ಹಾಗು ಅಂಬಾಲಿಕೆ ಗೆ ತಮ್ಮ ದಿವ್ಯಶಕ್ತಿ ಇಂದ ಸಂತಾನ ಕರುಣಿಸುತ್ತೇವೆ ಎಂದು ಆಶ್ವಾಸನೆ ಕೊಟ್ಟರು. ಅಂಬಿಕೆಗೆ ತಮ್ಮ ದಿವ್ಯಶಕ್ತಿ ನೀಡುವ ಸಮಯದಲ್ಲಿ ಅದರ ಪ್ರಕಾಶವನ್ನು ನೋಡಲಾಗದೆ ತನ್ನ ಕಣ್ಣನ್ನು ಮುಚ್ಚಿಕೊಂಡಳು. ಇದೆ ಕಾರಣಕ್ಕೆ ದೃತರಾಷ್ಟ್ರ ಕುರುಡನಾಗಿ ಹುಟ್ಟಿದ.
ಇದಲ್ಲದೆ ದೃತರಾಷ್ಟ್ರ ಕುರುಡನಾಗಲು ಆತನ ಪೂರ್ವ ಜನ್ಮದ ಶಾಪದ ಕತೆಯು ಇದೆ. ಇದನ್ನು ಬಹಳ ಕಡಿಮೆ ಜನರಿಗೆ ಗೊತ್ತಿದೆ. ದೃತರಾಷ್ಟ್ರ ತನ್ನ ಹಿಂದಿನ ಜನ್ಮದಲ್ಲಿ ನಿರ್ದಯಿ ರಾಜನಾಗಿದ್ದ. ಒಂದು ದಿನ ತನ್ನ ರಾಜ್ಯ ಸುತ್ತಾಡಲು ಹೊರಟಿದ್ದ. ಹೀಗೆ ಸುತ್ತಾಡುತ್ತ ಕಾಡಿನ ಒಳಗೆ ಪ್ರವೇಶ ಮಾಡಿದ್ದರು. ಅಲ್ಲಿ ಅವರಿಗೆ ಒಂದು ಕೆರೆ ಸಿಕ್ಕಿತು ಅದರಲ್ಲಿ ಒಂದು ಜೋಡಿ ಹಂಸ ಪಕ್ಷಿಗಳಿದ್ದವು. ಅವುಗಳ ಮರಿಗಳ ಜೊತೆ ತೇಲಾಡುತಿತ್ತು. ನಿರ್ದಯಿ ದೃತರಾಷ್ಟ್ರ ತನ್ನ ಸೈನಿಕರ ಬಳಿ ಈ ಹಂಸಗಳ ಕಣ್ಣನ್ನು ತೆಗೆಯಲು ಆಜ್ಞಾಪಿಸಿದ.
ಹಾಗೇನೇ ಅವುಗಳ ಮರಿಗಳನ್ನು ಸಾಯಿಸಲು ಹೇಳಿದ. ತನ್ನ ಕಣ್ಣೆದುರಿಗೆ ತನ್ನ ಮರಿಗಳ ಸ್ಥಿತಿ ನೋಡಿ ಹಂಸ ದೃತರಾಷ್ಟ್ರನಿಗೆ ಶಾಪ ನೀಡಿತು. ಯಾವ ರೀತಿ ನಾನು ಪುತ್ರ ವಿಯೋಗದಿಂದ ದುಃಖಿತ ನಾಗಿದ್ದೇನೋ ಅದೇ ರೀತಿ ಬರುವ ಜನ್ಮದಲ್ಲಿ ನೀನು ಕೂಡ ಇದೆ ಪರಿಸ್ಥಿತಿ ಅನುಭವಿಸು ಎಂದು ಶಾಪ ನೀಡಿತು. ಅಷ್ಟಲ್ಲದೇ ನನ್ನ ಮಕ್ಕಳ ಕಣ್ಣನ್ನು ತೆಗೆದ ನೀನು ಮುಂದಿನ ಜನ್ಮದಲ್ಲಿ ಕುರುಡನಾಗಿ ಹುಟ್ಟು ಎಂದು ಕೂಡ ಶಾಪ ನೀಡಿತು. ಇದೆ ಕಾರಣಕ್ಕೆ ದೃತರಾಷ್ಟ್ರ ದ್ವಾಪರಯುಗದಲ್ಲಿ ಕುರುಡನಾಗಿ ಹುಟ್ಟಿದ.