ದೇವರ ಕೋಣೆಯಲ್ಲಿ ಈ ವಸ್ತುಗಳು ಇದ್ದರೆ ಮನೆಯಲ್ಲಿ ಅಶಾಂತಿ ಮತ್ತು ದಾರಿದ್ರ್ಯ ಬರುತ್ತದೆ ಅಂತೆ ? ಹಾಗಾದರೆ ಈಗಲೇ ಅದನ್ನು ತೆಗೆಯಿರಿ?

1,176

ಆರಾಧನೆ ಎಂಬುವುದು ಹಿಂದೂ ಸಂಸ್ಕೃತಿಯ ಒಂದು ಭಾಗ. ಮತ್ತು ಮನುಷ್ಯನ ಮನಸ್ಸಿನ ಮೇಲೆ ಧನಾತ್ಮಕ ಪರಿಣಾಮ ಬೀರುವ ಒಂದು ಅಂಶ ಕೂಡ ಹೌದು. ಎಲ್ಲರ ಮನೆಯಲ್ಲೂ ಕೂಡ ದೇವರು ಎಂಬುವುದು ಇದ್ದೆ ಇರುತ್ತದೆ ಅದಕ್ಕೆ ಪ್ರತಿನಿತ್ಯ ಪೂಜೆ ಮಾಡಿಯೇ ಮಾಡುತ್ತೇವೆ. ಕೆಲವೊಂದು ಮನೆಯಲ್ಲಿ ದೊಡ್ಡ ದೇವರ ಕೊನೆ ಇದ್ದಾರೆ ಕೆಲವು ಮನೆಯಲ್ಲಿ ಚಿಕ್ಕದಾಗಿ ಇರುತ್ತದೆ. ಹಾಗೆ ಕೆಲವರ ಮನೆಯಲ್ಲಿ ಇರುವ ಅಲ್ಪ ಜಾಗದಲ್ಲಿ ಗೋಡೆಯ ಮೇಲೆ ಇಡುತ್ತಾರೆ.

ಹಾಗಾದರೆ ದೇವರ ಮೇಲಿನ ಭಕ್ತಿ ಎಂಬುವುದು ಮನೆಯಲ್ಲಿ ದೇವರನ್ನು ಇರಿಸಿರುವ ರೀತಿಯಲ್ಲಿ ಅಲ್ಲ ಬದಲಾಗಿ ಮನಸಿನ ಭಕ್ತಿಯಲ್ಲಿ ಎಂಬುವುದು ತಿಳಿದಿರಬೇಕು. ಕೆಲವರಿಗೆ ಎಲ್ಲವೂ ಇದ್ದರೂ ನೆಮ್ಮದಿ ದಾರಿದ್ರ್ಯ ಇರುತ್ತದೆ ಹಾಗಾದರೆ ಹಿಂದೂ ಸಂಸ್ಕೃತಿ ಪ್ರಕಾರ ದೇವರ ಕೋಣೆಯಲ್ಲಿ ಅಥವಾ ದೇವರನ್ನು ಇಡುವ ಜಾಗದಲ್ಲಿ ಈ ಎಲ್ಲಾ ವಸ್ತುಗಳು ಇರಬಾರದು ಹೌದು ಇದರಿಂದಾಗಿ ಮನೆಯಲ್ಲಿ ಅಶಾಂತಿ, ದಾರಿದ್ರ್ಯ ನೆಲೆಸುತ್ತದೆ ಎಂದು ಹೇಳಲಾಗುತ್ತದೆ. ಹಾಗಾದರೆ ಯಾವುದೆಲ್ಲ ವಿಚಾರಗಳು ಇವು ಬನ್ನಿ ತಿಳಿಯೋಣ.

ಮನೆಯಲ್ಲಿ ಗಣಪತಿಯ ವಿಗ್ರಹ ಅಥವಾ ಫೋಟೋ ಇದ್ದರೆ ಗಣಪತಿಯ ಮೂರು ವಿಗ್ರಹ ಅಥವಾ ಫೋಟೋ ಇಟ್ಟುಕೊಳ್ಳಬಾರದು. ಎರಡಕ್ಕಿಂತ ಹೆಚ್ಚು ಫೋಟೋ ಅಥವಾ ವಿಗ್ರಹ ಇದ್ದಾರೆ ಅದು ಮನೆಗೆ ಒಳಿತಲ್ಲ. ಹಾಗೆಯೇ ಮನೆಯಲ್ಲಿ ಅತೀ ದೊಡ್ಡದಾದ ವಿಗ್ರಹಗಳ ಸ್ಥಾಪನೆ ಮನೆಗೆ ಒಳಿತಲ್ಲ ಯಾಕಂದರೆ ಅದಕ್ಕೆ ಆದ ನೇಮ ನಿಷ್ಠೆ ಇದೆ ಅದು ದೇವಸ್ಥಾನದಲ್ಲಿ ಮಾತ್ರ ನಡೆಸಲು ಸಾಧ್ಯ. ಮನೆಯಲ್ಲಿ ಶಿವಲಿಂಗವನ್ನು ಪೂಜಿಸುತ್ತಾ ಇದ್ದರೆ ನೀವು ನಿಮ್ಮ ಹೆಬ್ಬೆರಳಿನ ಎತ್ತರಕ್ಕಿಂತ ದೊಡ್ಡದಾದ ಶಿವಲಿಂಗವನ್ನು ಎಂದಿಗೂ ಸ್ಥಾಪಿಸಬೇಡಿ. ಅದು ಮನೆಯಲ್ಲಿ ಅಶಾಂತಿ ಮತ್ತು ದಾರಿದ್ರ್ಯ ಬರಲು ಕಾರಣ ಆಗುತ್ತದೆ.

ಮನೆಯಲ್ಲಿ ಪೂಜೆ ಕೋಣೆಯಲ್ಲಿ ಶಂಕವನ್ನು ಇತ್ತು ಪೂಜೆ ಮಾಡುತ್ತೇವೆ ಆದರೆ ಒಂದಕ್ಕಿಂತ ಹೆಚ್ಚಿನ ಶಂಖ ಇದ್ದರೆ ಅದನ್ನು ಇಂದೆ ನೀರಿಗೆ ಹಾಕಿ ಒಂದೇ ಶಂಖ ಇಟ್ಟು ಪೂಜೆ ಮಾಡಬೇಕು. ದೇವರ ಕೋಣೆಯಲ್ಲಿ ಒಡೆದ ಫೋಟೋ ಅಥವಾ ತುಂಡಾದ ಮೂರ್ತಿಗಳು ಇದ್ದರೆ ಅದನ್ನು ನೀರಿನಲ್ಲಿ ಬಿಟ್ಟು ಬಿಡಿ ಅದನ್ನು ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ಶ್ರೇಯಸ್ಸು ಇರುವುದಿಲ್ಲ. ಹಾಗೆಯೇ ದೇವರಿಗೆ ಹಾಕುವ ಹೂವುಗಳು ಆದಷ್ಟು ತಾಜಾ ಇರಲಿ ಆದಷ್ಟು ತುಳಸಿ ಎಲೆಗಳನ್ನ ಬಳಸಿಯೇ ಪೂಜೆ ಮಾಡುವುದು ಒಳಿತು. ಇದೆಲ್ಲಾ ವಿಚಾರಗಳು ನಿಮ್ಮ ತಲೆಯಲ್ಲಿ ಇರಲಿ. ಹಾಗೆ ಇದು ನಿಮ್ಮ ಮನೆಯಲ್ಲಿ ಏನಾದರೂ ನಡೆಯುತ್ತಾ ಇದ್ದರೆ ಇಂದೆ ಸರಿಪಡಿಸಿಕೊಳ್ಳಿ. ಮನೆಯಲ್ಲಿ ಅಶಾಂತಿ ನೆಲೆಸಲು ನಾವೇ ಕಾರಣರಾಗುವುದು ಬೇಡ.

Leave A Reply

Your email address will not be published.