ದೇವಲೋಕದ ಅಪ್ಸರೆ ಎಂದೇ ಹೆಸರಾಗಿರುವ ಶ್ರೀ ದೇವೀರವನ್ನು ಮದುವೆಯಾಗು ಎಂದರೆ, ತಂಗಿ ಸಮಾನ ಎಂದಿದ್ದ ನಟ ಯಾರು ಗೊತ್ತೇ??
ಅತಿಲೋಕ ಸುಂದರಿ ನಟಿ ಶ್ರೀದೇವಿ ಅವರ ಮೇಲಿನ ಕ್ರೇಜ್ ಹೇಗಿತ್ತು ಎಂದು ಎಲ್ಲರಿಗೂ ಗೊತ್ತಿದೆ. ಶ್ರೀದೇವಿ ಅವರಿಗೆ ದೇಶಾದ್ಯಂತ ದೊಡ್ಡ ಮಟ್ಟದಲ್ಲಿ ಅಭಿಮಾನಿ ಬಳಗ ಇದೆ, ಶ್ರೀದೇವಿ ಅವರ ಅಭಿನಯ ಮತ್ತು ಅಂದ ಎರಡನ್ನು ಆರಾಧಿಸುವ ಕೋಟ್ಯಾಂತರ ಜನರಿದ್ದಾರೆ. ಶ್ರೀದೇವಿ ಅವರ ಸಿನಿಮಾ ಅಂದ್ರೆ ಸ್ಟಾರ್ ಹೀರೋಗಳ ಸಿನಿಮಾ ರೀತಿ ಕ್ರೇಜ್ ಇರುತ್ತಿತ್ತು. ಶ್ರೀದೇವಿ ಅವರು ಯಾವುದೇ ನಟಿಸಿದರು ಸಹ ಸಹ ಅವರಿಗಾಗಿ ಪ್ರತ್ಯೇಕವಾದ ದೊಡ್ಡ ಅಭಿಮಾನಿ ಬಳಗ ಇದ್ದ ಕಾರಣ ಸಿನಿಮಾ ಯಶಸ್ಸಿನಲ್ಲಿ ಬಹುಪಾಲು ಅವರದ್ದಾಗಿರುತ್ತಿತ್ತು.
ತೆಲುಗು, ತಮಿಳು, ಹಿಂದಿ ಹೀಗೆ ಎಲ್ಲಾ ಭಾಷೆಗಳಲ್ಲೂ ನಟಿಸಿ ಸ್ಟಾರ್ ಆಗಿದ್ದ ಶ್ರೀದೇವಿ ಅವರನ್ನು ನಟ ಕಮಲ್ ಹಾಸನ್ ಅವರೊಡನೆ ಮದುವೆ ಮಾಡಬೇಕು ಎಂದು ಶ್ರೀದೇವಿ ಅವರ ತಾಯಿ ಭಾವಿಸಿದ್ದರು. ಕಮಲ್ ಹಾಸನ್ ಅವರಿಗೂ ಸಹ ಶ್ರೀದೇವಿ ಅಬರ ಕುಟುಂಬ ಆತ್ಮೀಯರಾಗಿದ್ದ ಕಾರಣ, ಸ್ವತಃ ಶ್ರೀದೇವಿ ಅವರ ತಾಯಿ ಕಮಲ್ ಹಾಸನ್ ಅವರ ಬಳಿ ಹೋಗಿ, ಶ್ರೀದೇವಿ ಅವರನ್ನು ಮದುವೆ ಮಾಡಿಕೊಳ್ಳುವಂತೆ ಪ್ರಸ್ತಾಪ ಮಾಡಿದರಂತೆ. ಆದರೆ ಕಮಲ್ ಹಾಸನ್ ಅವರು ಅದನ್ನು ನಯವಾಗಿ ನಿರಾಕರಿಸಿ, ಶ್ರೀದೇವಿ ಅವರನ್ನು ಮದುವೆ ಆಗುವುದಿಲ್ಲ ಎಂದು ಹೇಳಿದ್ದರಂತೆ. ಅಷ್ಟೇ ಅಲ್ಲದೆ, ಶ್ರೀದೇವಿಯನ್ನು ತಾನು ಒಬ್ಬ ತಂಗಿಯ ರೀತಿಯಲ್ಲಿ ನೋಡುವುದಾಗಿ, ಆ ರೀತಿಯ ಭಾವನೆ ತನಗೆ ಇಲ್ಲ ಎಂದರಂತೆ ಕಮಲ್.
ಶ್ರೀದೇವಿ ಅವರನ್ನು ತಂಗಿಯಾಗಿ ನೋಡಿದರು ಸಹ, ಕಮಲ್ ಶ್ರೀದೇವಿ ಹಲವು ಸಿನಿಮಾಗಳಲ್ಲಿ ಜೊತೆಯಾಗಿ ನಟಿಸಿದ್ದಾರೆ. ಆ ಸಮಯದಲ್ಲಿ ಶ್ರೀದೇವಿ ಅವರನ್ನು ಮದುವೆಯಾಗುವುದಿಲ್ಲ ಎಂದು ಕಮಲ್ ಹಾಸನ್ ಅವರು ನೀಡಿದ ಕಾರಣ ನಿಜವೆ ಎನ್ನುವ ಚರ್ಚೆ ನಡೆದಿತ್ತು. ಇದೀಗ ಮತ್ತೊಮ್ಮೆ ಈ ವಿಚಾರ ಮುನ್ನಲೆಗೆ ಬಂದಿದೆ, ತಾವು ಶ್ರೀದೇವಿ ಅವರನ್ನು ಯಾಕೆ ಮದುವೆ ಆಗಲಿಲ್ಲ ಎಂದು ನಟ ಕಮಲ್ ಹಾಸನ್ ಅವರು ತಮ್ಮ ಡೈರಿಯಲ್ಲಿ ಬರೆದಿದ್ದಾರೆ. ಕಮಲ್ ಹಾಸನ್ ಮತ್ತು ಶ್ರೀದೇವಿ ಮದುವೆಯಾಗಿದ್ದರೆ ಅವರಿಬ್ಬರ ರೇಂಜ್ ಬೇರೆ ರೀತಿಯಕ್ಕೆ ಇರುತ್ತಿತ್ತು ಎನ್ನುವುದು ಕೆಲವರ ಅಭಿಪ್ರಾಯ. ಆದರೆ ಕಮಲ್ ಹಾಸನ್ ಶ್ರೀದೇವಿ ಅವರಲ್ಲಿ ತಂಗಿಯನ್ನು ನೋಡಿದ್ದರಿಂದ ಮದುವೆಯ ಬಗ್ಗೆ ಪ್ರಸ್ತಾಪ ಬರಲಿಲ್ಲ.