ದೇಶದೆಲ್ಲೆಡೆ ಜನರ ಮನ ಕದಿಯುತ್ತಿರುವ ಕಾಂತಾರ ಸಿನಿಮಾ ನೋಡಿದ ಕೇರಳ ನಟ ಪೃಥ್ವಿರಾಜ್ ಸುಕುಮಾರನ್ ಹೇಳಿದ್ದೇನು ಗೊತ್ತೇ??

690

ಕಾಂತಾರ ಸಿನಿಮಾ ದಿನದಿಂದ ದಿನಕ್ಕೆ ಹೆಚ್ಚು ಸದ್ದು ಮಾಡುತ್ತಿದೆ. ಸಿನಿಮಾ ನೋಡಿದ ಪ್ರತಿಯೊಬ್ಬರು ಚಿತ್ರವನ್ನು ಹೊಗಳುತ್ತಿದ್ದಾರೆ. ಕಿಚ್ಚ ಸುದೀಪ್, ಪ್ರಭಾಸ್ ಸೇರಿದಂತೆ ದೊಡ್ಡ ದೊಡ್ಡ ನಟರು ಸಿನಿಮಾ ನೋಡಿ ಮೆಚ್ಚುಗೆಯ ಮಾತುಗಳನಾಡಿದ್ದಾರೆ. ಇದೀಗ ಮಾಲಿವುಡ್ ನಟ ಪೃಥ್ವಿರಾಜ್ ಸುಕುಮಾರನ್ ಚಿತ್ರದ ಬಗ್ಗೆ ಪ್ರಶಂಸೆಯ ಮಾತುಗಳನ್ನಾಡಿದ್ದಾರೆ. ಇದಕ್ಕೂ ಮೊದಲು ಚಿತ್ರ ವೀಕ್ಷಿಸಿದ್ದ ನಟ ಕಿಚ್ಚ ಸುದೀಪ್ ಚಿತ್ರವನ್ನು ಮೆಚ್ಚಿ ಒಂದು ಪತ್ರವನ್ನು ಬರೆದಿದ್ದರು. ಪತ್ರದಲ್ಲಿ ನಿರ್ದೇಶಕರ ದೃಷ್ಟಿಕೋನವನ್ನು ಅವರ ಕಲ್ಪನೆಯನ್ನು ಮೆಚ್ಚಿ ಹೊಗಳಿದ್ದರು. ನಟ ಪ್ರಭಾಸ್ ಕೂಡ ಸಿನಿಮಾಗೆ ಮಾರು ಹೋಗಿದ್ದರು. ಬಿಡುಗಡೆಯಾದ ಎರಡನೇ ದಿನಕ್ಕೆ ಚಿತ್ರ ವೀಕ್ಷಿಸಿದ ಅವರು ಚಿತ್ರವನ್ನು ಪ್ರಶಂಸಿದ್ದರು. ವಿಶೇಷವಾಗಿ ಕೊನೆಯ 20 ನಿಮಿಷವನ್ನು ಮೆಚ್ಚಿಕೊಂಡಿದ್ದರು.

ಇದೀಗ ಚಿತ್ರದ ಬಗ್ಗೆ ಮಾಲಿವುಡ್ ನಟ ಪೃಥ್ವಿರಾಜ್ ಕುಮಾರ್ ಟ್ವೀಟ್ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಚಿತ್ರ ವೀಕ್ಷಿಸಿದ ಪ್ರೇಕ್ಷಕ ಪ್ರಭು ಚಿತ್ರವನ್ನು ಮೆಚ್ಚಿ ಹೊಗಳುತ್ತಿದ್ದು ಚಿತ್ರಕ್ಕೆ ಒಳ್ಳೆಯ ರೆಸ್ಪಾನ್ಸ್ ಸಿಗುತ್ತಿದೆ. ಇದರಿಂದ ಹೆಚ್ಚು ಹೆಚ್ಚು ಜನರು ಚಿತ್ರಮಂದಿರಕ್ಕೆ ಬರುತ್ತಿದ್ದಾರೆ. ರಿಷಬ್ ಶೆಟ್ಟಿ ನಿರ್ದೇಶಿಸಿ ಅಭಿನಯಿಸಿರುವ ಈ ಸಿನಿಮಾವನ್ನು ಹೊಂಬಾಳೆ ಫಿಲಂಸ್ ನಿರ್ಮಿಸಿದೆ. ಮುಂಬೈನ ಮರಾಠ ಮಂದಿರ ಚಿತ್ರಮಂದಿರದಲ್ಲಿ ಇದೆ ಮೊದಲ ಬಾರಿಗೆ ಮೂಲ ಭಾಷೆಯಲ್ಲಿ ರಿಲೀಸ್ ಆದ ಮೊದಲ ಸೌತ್ ಸಿನಿಮಾ ಎಂಬ ಹೆಗ್ಗಳಿಕೆಗೆ ಕಾಂತಾರ ಪಾತ್ರವಾಗಿದೆ.

ಇಷ್ಟೆಲ್ಲಾ ಹೊಗಳಿಕೆ ಗಿಟ್ಟಿಸಿಕೊಳ್ಳುತ್ತಿರುವ ಚಿತ್ರಕ್ಕೆ ಚಿತ್ರ ನೋಡಿದ ಬಳಿಕ ಟ್ವೀಟ್ ಮಾಡಿರುವ ಪೃಥ್ವಿರಾಜ್ ಕುಮಾರ್ ನವರು “ಕಾಂತಾರ ಒಂದು ಅದ್ಭುತ ಸಿನಿಮಾ ಸಾಧನೆ. ರಿಷಬ್ ಶೆಟ್ಟಿ ಕ್ಯಾಮೆರಾ ಮುಂದೆ ಹಾಗೂ ಹಿಂದೆ ಎರಡು ಕಡೆ ಅಸಾಧಾರಣ ಪ್ರತಿಭೆಯಾಗಿದ್ದಾರೆ. ಹೊಂಬಾಳೆ ಫಿಲಂಸ್ ನಿರ್ಮಿಸುತ್ತಿರುವ ಪ್ರತಿ ಕಂಟೆಂಟ್ ಮನಸೂರೆಗೊಳ್ಳುತ್ತದೆ. ಹೊಸ ದಾರಿ ತೋರಿಸುತಿರುವುದಕ್ಕಾಗಿ ವಂದನೆಗಳು. ಅದ್ಭುತವನ್ನು ಮೀರಿದ ಕೊನೆಯ 20 ನಿಮಿಷ ರೋಮಾಂಚನಕಾರಿಯಾಗಿತ್ತು” ಎಂದು ಅವರು ಬರೆದುಕೊಂಡಿದ್ದಾರೆ.

Leave A Reply

Your email address will not be published.