ದೈವದ ಪಾತ್ರ ಮಾಡುವ ಮುನ್ನ, ರಿಷಬ್ ಶೆಟ್ಟಿ ಮಾಡಿದ ಕೆಲಸ ಏನು ಗೊತ್ತೆ?? ಇದು ನಿಜವಾದ ಶ್ರದ್ದೆ. ಅದೆಂತಹ ನಿರ್ಧಾರ ತೆಗೆದುಕೊಂಡಿದ್ದರು ಗೊತ್ತೇ??
ಪ್ರಸ್ತುತ ಕನ್ನಡ ಸಿನಿಪ್ರಿಯರು ನಮ್ಮ ಕನ್ನಡ ಸಿನಿಮಾಗಳ ಬಗ್ಗೆ ಹೆಮ್ಮೆ ಪಡುವಂಥ ಬಂದಾಗಿದೆ. ಹೆಚ್ಚಿನ ಕ್ವಾಲಿಟಿ ಕಂಟೆಂಟ್ ಗಳು ಕನ್ನಡದಲ್ಲಿ ಮೂಡಿಬರುತ್ತಿರುವುದು ಬಹಳ ಹೆಮ್ಮೆಯ ವಿಚಾರ. ಕೆಜಿಎಫ್, ಚಾರ್ಲಿ, ವಿಕ್ರಾಂತ್ ರೋಣ ಸಾಲಿಗೆ ಸೇರುವ ಮತ್ತೊಂದು ಕನ್ನಡದ ಹೆಮ್ಮೆಯ ಸಿನಿಮಾ ಕಾಂತಾರ. ಇನ್ನುಳಿದ ಸಿನಿಮಾಗಳು ಪ್ಯಾನ್ ಇಂಡಿಯಾ ಆದರೆ, ಕಾಂತಾರ ಕನ್ನಡ ಭಾಷೆಯಲ್ಲಿ ಮಾತ್ರ ಬಿಡುಗಡೆಯಾಗಿ ಸದ್ದು ಮಾಡುತ್ತಿದೆ. ಕರ್ನಾಟಕದ ಎಲ್ಲೆಡೆ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ ಕಾಂತಾರ ಸಿನಿಮಾ.
ಈ ಸಿನಿಮಾದಲ್ಲಿ ರಿಷಬ್ ಅವರು ಅದ್ಭುತವಾಗಿ ಅಭಿನಯಿಸಿದ್ದಾರೆ ಎನ್ನುವುದು ಎಲ್ಲರ ಅಭಿಪ್ರಾಯ ಆಗಿದೆ. ವಿಶೇಷವಾಗಿ ರಿಷಬ್ ಅವರ ದೈವ ಪಾತ್ರ ಅಭಿನಯ ಪ್ರೇಕ್ಷಕರಿಗೆ ಬಹಳ ಇಷ್ಟವಾಗಿದೆ, ದೈವ ಕಾರಣಿಕ ಪಾತ್ರದಲ್ಲಿ ರಿಷಬ್ ಶೆಟ್ಟಿ ಅವರು ಅದ್ಭುತ ಎನ್ನುತ್ತಿದ್ದಾರೆ ಸಿನಿಪ್ರಿಯರು. ಈ ರೀತಿ ದೈವದ ಪಾತ್ರಗಳನ್ನು ಹೇಗೆಂದರೆ ಹಾಗೆ ಮಾಡಲು ಸಾಧ್ಯವಿಲ್ಲ. ಅದಕ್ಕಾಗಿ ಕೆಲವು ವಿಚಾರಗಳಿವೆ, ರೀತಿ ರಿವಾಜುಗಳಿವೆ, ಅದರ ಬಗ್ಗೆ ರಿಷಬ್ ಶೆಟ್ಟಿ ಅವರು ಕಾಂತಾರ ಸಕ್ಸಸ್ ಮೀಟ್ ನಲ್ಲಿ ಹೇಳಿದ್ದಾರೆ, ರಿಷಬ್ ಅವರು ಹೇಳಿದ್ದು ಕೇಳಿದರೆ, ನಿಜಕ್ಕೂ ಗ್ರೇಟ್ ಎನ್ನಿಸುತ್ತದೆ.
ರಿಷಬ್ ಅವರು ಹೇಳಿರುವ ಪ್ರಕಾರ, ಚಿತ್ರೀಕರಣ ಶುರುವಾಗುವ 1 ತಿಂಗಳು ಮೊದಲೇ ರಿಷಬ್ ಶೆಟ್ಟಿ ಅವರು ಮಾಂಸಾಹಾರ ಸೇವನೆ ಬಿಟ್ಟಿದ್ದರಂತೆ. ಜೊತೆಗೆ ಚಿತ್ರೀಕರಣದಲ್ಲಿ ದೈವವನ್ನು ಇಟ್ಟಿದ್ದ ಜಾಗದಲ್ಲಿ ಚಪ್ಪಲಿ ಹಾಕಿ ಓಡಾಡುತ್ತಾ ಇರಲಿಲ್ಲ, ಚಿತ್ರೀಕರಣ ಸಮಯದಲ್ಲಿ ಮಾಂಸಾಹಾರ ಅಡುಗೆ ಮಾಡುತ್ತಾ ಇರಲಿಲ್ಲ ಎಂದು ತಿಳಿಸಿದ್ದಾರೆ. ಜೊತೆಗೆ ದೈವ ಅವರಿಗೆ ಬಹಳ ಪವಿತ್ರವಾದ ಅಂಶ, ಹಾಗಾಗಿ ಚಿಕ್ಕ ವಯಸ್ಸಿನಿಂದ ಪಾಲಿಸಿಕೊಂಡು ಬಂದ ರೀತಿಯಲ್ಲೇ ಈಗಲೂ ಪಾಲಿಸಿರುವುದಾಗಿ ತಿಳಿಸಿದ್ದಾರೆ ರಿಶಬ್. ದೈವ ಪಾತ್ರಕ್ಕಾಗಿ ಇಷ್ಟೆಲ್ಲಾ ತಯಾರಿ ಮಾಡಿಕೊಂಡಿರುವುದು ನಿಜಕ್ಕು ಗ್ರೇಟ್ ಎನ್ನುತ್ತಿದ್ದಾರೆ ಸಿನಿಪ್ರಿಯರು.