ದೊಡ್ಮನೆಯನ್ನು ಹತ್ತಾರು ವರ್ಷಗಳ ಕಾದ ಪಾರ್ವತಮ್ಮ ನವರ ಸ್ಥಾನವನ್ನು ತುಂಬುವುದು ಯಾರಂತೆ ಗೊತ್ತೇ?? ಗೀತಕ್ಕ ಹಾಗೂ ಅಶ್ವಿನಿ ರವರಲ್ಲಿ ರಾಘಣ್ಣ ಆಯ್ಕೆ ಮಾಡಿದ್ದು ಯಾರನ್ನು ಗೊತ್ತೇ??

268

ಚಂದನವನದಲ್ಲಿ ಅಣ್ಣಾವ್ರ ಕುಟುಂಬ ದೊಡ್ಮನೆ ಅಂತಲೇ ಪ್ರಸಿದ್ಧಿ. ಡಾ. ರಾಜಕುಮಾರ್ ಅವರ ನಂತರ ಅವರ ಪತ್ನಿ, ದೊಡ್ಮನೆ ತಾಯಿ ಪಾರ್ವತಮ್ಮ ಅವರ ಕೊಡುಗೆ ಬಹಳ ದೊಡ್ಡದು. ಒಬ್ಬರು ಮಹಿಳೆಯಾಗಿ ಅವರು ಮಾಡಿದ ಸಾಧನೆ, ತೋರಿದ ದೈರ್ಯ ಬಹುಶ ಮತ್ತೊಬ್ಬರಲ್ಲಿ ಕಾಣುವುದು ವಿರಳ. ಡಾ. ರಾಜ್ ಚಿತ್ರಗಳು ಗೆಲ್ಲುವುದರ ಬಹುಮುಖ್ಯ ಕಾರಣ ಅವರೇ ಆಗಿದ್ದರು. ಮೇರು ನಟನ ಪತ್ನಿಯಾಗಿ, ಸೂಪರ್ ಸ್ಟಾರ್ ಮಕ್ಕಳ ತಾಯಿಯಾಗಿ, ಕನ್ನಡದ ಹೆಸರಾಂತ ನಿರ್ಮಾಪಕವಾಗಿ ಅವರು ದೊಡ್ಡ ಯಶಸ್ಸು ಕಂಡವರು. ಪಾರ್ವತಮ್ಮ ರಾಜಕುಮಾರ್ ಕನ್ನಡ ಚಿತ್ರರಂಗಕ್ಕೆ ಹೊಸ ಆಯಾಮ ಕೊಟ್ಟ ನಿರ್ಮಾಪಕಿ.

ಮಾಲಾಶ್ರೀ, ಸುಧಾರಾಣಿ ಅವರಿಂದ ಶುರುವಾಗಿ ರಮ್ಯಾ, ರಕ್ಷಿತಾ ಅವರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯ ಮಾಡಿಕೊಟ್ಟ ಶ್ರೇಷ್ಠ ನಿರ್ಮಾಪಕಿ ಪಾರ್ವತಮ್ಮ ಅವರ ನಂತರ ಅವರ ಸ್ಥಾನ ತುಂಬುವುದು ಯಾರು? ಅವರಂತ ಯಶಸ್ವಿ ನಿರ್ಮಾಪಕರಾಗಿ ಮುಂದುವರೆಯುವುದು ಯಾರು ಎಂಬ ಪ್ರಶ್ನೆಗೆ ಇದೀಗ ರಾಘವೇಂದ್ರ ರಾಜಕುಮಾರ್ ಉತ್ತರಿಸಿದ್ದಾರೆ. ಪಾರ್ವತಮ್ಮ ಅವರ ಅಗಲಿಕೆ ನಂತರ ಅಭಿಮಾನಿಗಳು ಅವರ ಸ್ಥಾನದಲ್ಲಿ ಯಾರನ್ನು ಊಹಿಸಿಕೊಂಡಿರಲಿಲ್ಲ. ಆದರೆ ತಾಯಿಯಂತೆ ಪುನೀತ್ ನಿರ್ಮಾಪಕರಾಗಿಯೂ ಮುಂದುವರೆದಿದ್ದರು. ತಾಯಿಯಂತೆ ಅವರಿಗೆ ವ್ಯವಹಾರಿಕ ಜ್ಞಾನವಿತ್ತು. ಆದರೆ ದುರಾದೃಷ್ಟವಶಾತ್ ಅವರು ದಿಢೀರನೆ ಎಲ್ಲರಿಂದಲೂ ದೂರವಾಗಿ ಹೋದರು.

ಮೊದಲು ಪುನೀತ್ ಸಿನಿಮಾಗಳ ಕಥೆ ಕೇಳಿ ಓಕೆ ಮಾಡುತ್ತಿದ್ದದ್ದು ರಾಘಣ್ಣ. ನಂತರ ಪುನೀತ್ ಪತ್ನಿ ಅಶ್ವಿನಿ ಅವರೇ ಚಿತ್ರಗಳ ಕಥೆ ಕೇಳುತ್ತಿದ್ದರು. ಇತ್ತೀಚೆಗೆ ಪುನೀತ್ ಆರಂಭಿಸಿದ್ದ ಪಿ ಆರ್ ಕೆ ಸ್ಟುಡಿಯೋ ಮೇಲ್ವಿಚಾರಣೆಯನ್ನು ಪತ್ನಿಯೊಂದಿಗೆ ಸೇರಿ ನೋಡಿಕೊಳ್ಳುತ್ತಿದ್ದರು. ಅಪ್ಪು ಅವರು ಹೋದ ಬಳಿಕ ಅಶ್ವಿನಿ, ಅಪ್ಪು ಅವರ ಸ್ಥಾನದಲ್ಲಿ ನಿಂತು ವ್ಯವಹಾರ ನೋಡಿಕೊಳ್ಳುತ್ತಿದ್ದಾರೆ. ಈ ನಡುವೆ ಅಭಿಮಾನಿಗಳು ಪಾರ್ವತಮ್ಮ ಅವರನ್ನು ಅಶ್ವಿನಿ ಅವರಲ್ಲಿ ನೋಡಲು ಶುರು ಮಾಡಿದ್ದಾರೆ. ಇದರ ಬಗ್ಗೆ ಉತ್ತರಿಸಿರುವ ರಾಘವೇಂದ್ರ ರಾಜಕುಮಾರ್, ” ಅಶ್ವಿನಿ ಅವರು ನಮ್ಮ ತಾಯಿ ಇದ್ದಂತೆ, ಅವರಲ್ಲಿ ನಮ್ಮ ತಾಯಿಯ ಪ್ರೀತಿ, ಛಲವಿದೆ. ನಮ್ಮ ಮಕ್ಕಳು ಎಲ್ಲರೂ ಅವರ ಅಡಿಯಲ್ಲೇ ಚಿತ್ರರಂಗದಲ್ಲಿ ಮುಂದುವರೆಯುತ್ತಾರೆ. ನಾವೆಲ್ಲ ಅವರ ಆಶ್ರಯದಲ್ಲಿ ಅವರ ಕೆಳಗೆ ಹೋಗುತ್ತೇವೆ ಎಂದು ಉತ್ತರಿಸಿದ್ದಾರೆ.

Leave A Reply

Your email address will not be published.