ದ್ವಿಶತಕ ಮಾಡುವ ಮೂಲಕ ಈ ಹಿರಿಯ ಆಟಗಾರನ ವೃತ್ತಿ ಜೀವನ ಕೊನೆಯಾಗುತ್ತ? ದಿನೇಶ್ ಕಾರ್ತಿಕ್ ಹೌದು ಎನ್ನುತ್ತಿದ್ದಾರೆ.

144

ಭಾರತ ಹಾಗು ಬಾಂಗ್ಲಾದೇಶದ ನಡುವೆ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಇಶಾನ್ ಕಿಶನ್ ಅದ್ಬುತ ಬ್ಯಾಟಿಂಗ್ ಪ್ರದರ್ಶನ ಮಾಡಿ ದ್ವಿಶತಕ ಪೇರಿಸಿದ್ದಾರೆ. ಅದು ಕೂಡ 126 ಬಾಲ್ ಗಳಲ್ಲಿ ದ್ವಿಶತಕ ದಾಖಲಿಸಿ ಅತಿ ವೇಗದ ದ್ವಿಶತಕ ಎನ್ನುವ ಹೊಸ ರೆಕಾರ್ಡ್ ಗೆ ತಮ್ಮ ಹೆಸರು ಬರೆಸಿಕೊಂಡಿದ್ದಾರೆ. ಇವರ ಆಟಕ್ಕೆ ಎಲ್ಲರು ಪ್ರಶಂಸೆ ಮಾಡುತ್ತಿದ್ದಾರೆ ಹಾಗೇನೇ ಹಿರಿಯ ಆಟಗಾರರು ಕೂಡ ಇವರಿಗೆ ಪ್ರಶಂಸುತ್ತಿದ್ದಾರೆ. ಇವರಲ್ಲಿ ದಿನೇಶ್ ಕಾರ್ತಿಕ್ ಕೂಡ ಒಬ್ಬರು.

ದಿನೇಶ್ ಕಾರ್ತಿಕ್ ಅವರ ವೃತ್ತಿ ಜೀವನಕ್ಕೆ ಮುಳುವಾಗಿದ್ದು ಮಹೇಂದ್ರ ಸಿಂಗ್ ಧೋನಿ ಎಂದರೆ ತಪ್ಪಾಗಲಾರದು. ಕಾರ್ತಿಕ್ ಅವರ ಕ್ರಿಕೆಟ್ ಉತ್ತಮವಾಗಿದ್ದರೂ ಕೂಡ ಧೋನಿ ಅವರು ಇದ್ದ ಕಾರಣ ಇವರಿಗೆ ಸಿಗಬೇಕಾದ ಅವಕಾಶ ಸಿಕ್ಕಿರಲಿಲ್ಲ. ಇದೀಗ ಇಂತಹದೇ ಒಂದು ಸನ್ನಿವೇಶ ಬಂದಂತೆ ಕಾಣುತ್ತಿದೆ. ಇಶಾನ್ ಕಿಶನ್ ಅವರ ಉತ್ತಮ ಪ್ರದರ್ಶನ ಶಿಕಾರ ಧವನ್ ಅವರ ಸ್ಥಾನಕ್ಕೆ ಕಂಟಕ ತರುವ ಎಲ್ಲ ಲಕ್ಷಣಗಳು ಕೂಡ ಕಾಣುತ್ತಿದೆ. ಆರಂಭಿಕ ಸ್ಥಾನಕ್ಕೆ ಈಗಾಗಲೇ ಇಶಾನ್ ಕಿಶನ್ ಪೈಪೋಟಿ ನೀಡುತ್ತಿದ್ದಾರೆ. ಆದರೆ ಯಾರ ಬದಲಿಗೆ ಎಂದು ಚರ್ಚೆ ಶುರುವಾಗಿದೆ.

ನೋಡಲು ಹೋದರೆ ಶಿಕಾರ ಧವನ್ ಕೂಡ ನಾಯಕ, ರೋಹಿತ್ ಶರ್ಮ ಕೂಡ ನಾಯಕ. ಶಿಕಾರ ಧವನ್ ಅವರಿಗೆ ಬಾಂಗ್ಲಾದೇಶದ ವಿರುದ್ದ ಸರಣಿಗೆ ಅವಕಾಶ ಸಿಕ್ಕಿದ್ದು ಯಾವುದೇ ಉತ್ತಮ ಪ್ರದರ್ಶನ ಇವರಿಂದ ನೋಡಲು ಸಿಕ್ಕಿಲ್ಲ. ಹಾಗೇನೇ ರೋಹಿತ್ ಶರ್ಮ ಗಾಯದಿಂದಾಗಿ ಅವಕಾಶ ಪಡೆದ ಇಶಾನ್ ಕಿಶನ್ ದ್ವಿಶತಕ ಮಾಡುವ ಮೂಲಕ ತಂಡಕ್ಕೆ ಇವರನ್ನು ಯಾಕೆ ಸೇರಿಸಿಕೊಳ್ಳಬೇಕು ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ರೋಹಿತ್ ಶರ್ಮ ಗಾಯದಿಂದ ಗುಣಮುಖರಾಗಿ ತಂಡಕ್ಕೆ ಬಂದರೆ ಶಿಕಾರ ಧವನ್ ಬದಲು ಇಶಾನ್ ಕಿಶನ್ ಗೆ ಸ್ಥಾನ ಸಿಗುವುದು ಬಹುತೇಕ ಖಚಿತ ಎಂದು ದಿನೇಶ್ ಕಾರ್ತಿಕ್ ಅಭಿಪ್ರಾಯ ಪಟ್ಟಿದ್ದಾರೆ.

Leave A Reply

Your email address will not be published.