ಧೋನಿ-ರೈನಾ ಗೆಳೆತನ ಎಷ್ಟು ಬಲವಾದದ್ದು ಎನ್ನುವುದಕ್ಕೆ ರೈನಾ ತೆಗೆದುಕೊಂಡ ಈ ನಿರ್ಧಾರ ಸಾಕ್ಷಿ. ಅಷ್ಟಕ್ಕೂ ರೈನಾ ತೆಗೆದುಕೊಂಡ ನಿರ್ಧಾರವೇನು ಗೊತ್ತೆ?
ಭಾರತದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಅಂತರಾಷ್ಟ್ರೀಯ ಪಂದ್ಯಕ್ಕೆ ವಿದಾಯ ಹೇಳಿ ಕ್ರಿಕೆಟ್ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದರು. ಅದರ ಮೇಲೆ ಅದೇ ದಿನ ಭಾರತ ತಂಡದ ಮಾಜಿ ಮಧ್ಯ ಕ್ರಮಾಂಕದ ಆಟಗಾರ ರೈನಾ ಕೂಡಾ ಅಂತರಾಷ್ಟ್ರೀಯ ಪಂದ್ಯಗಳಿಗೆ ವಿದಾಯ ಹೇಳಿ ಕ್ರಿಕೆಟ್ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದರು. ಧೋನಿ ಹಾಗು ಸುರೇಶ್ ರೈನಾರ ಗೆಳೆತನ ಇಂತಹದ್ದು ಎನ್ನುವುದು ಇದರಲ್ಲಿ ನಮಗೆ ಗೊತ್ತಾಗುತ್ತದೆ.
ಅಂತರಾಷ್ಟ್ರೀಯ ಪಂದ್ಯದಲ್ಲಿ ಧೋನಿ-ರೈನಾ ಆಡುವುದಿಲ್ಲಾ ಎಂದಾದರೂ ದೇಶೀಯ ಐಪಿಎಲ್ ಅಲ್ಲಿ ಆಡುತ್ತಾರೆ ಎನ್ನುವುದು ಎಲ್ಲಾ ಕ್ರಿಕೆಟ್ ಅಭಿಮಾನಿಗಳಿಗೆ ಒಂದು ಸ್ವಲ್ಪ ತೃಪ್ತಿ ತಂದಿತ್ತು. ಧೋನಿ ನಾಯಕತ್ವದಲ್ಲಿ ಚೆನೈ ಸೂಪರ್ ಕಿಂಗ್ಸ್ ಉತ್ತಮ ಪ್ರದರ್ಶನ ನೀಡಿ ಅನೇಕ ಸರಣಿ ಗೆದ್ದಿದೆ. ಹಾಗೆಯೇ ಸುರೇಶ್ ರೈನಾ ಅವರ ಹೊಡಿ ಬಡಿ ಪ್ರದರ್ಶನ ಇದಕ್ಕೆ ಪೂರಕವಾಗಿತ್ತು. ಪ್ರತಿ ಸೀಸನ್ ಅಲ್ಲಿ ಧೋನಿ-ರೈನಾ ಇಬ್ಬರೂ ಒಂದೇ ತಂಡದಲ್ಲಿ ಕಾಣಿಸಿಕೊಂಡದ್ದು ಇವರಿಬ್ಬರ ಗೆಳೆತನ ಎಷ್ಟು ಬಲವಾಗಿತ್ತು ಎನ್ನುವುದಕ್ಕೆ ಉದಾಹರಣೆ.
ಮಾಧ್ಯಮ ಒಂದಕ್ಕೆ ಸಂದರ್ಶನ ನೀಡುವ ಸಂಧರ್ಭದಲ್ಲಿ ಸುರೇಶ್ ರೈನಾ, ನನ್ನಲ್ಲಿ ಇನ್ನೂ ನಾಲ್ಕೈದು ವರ್ಷ ಕ್ರಿಕೆಟ್ ಆಡುವಷ್ಟು ಉತ್ಸಾಹ ಇದೆ. ಈ ಬಾರಿ ನಮಗೆ ಐಪಿಎಲ್ ಅಲ್ಲಿ ಆಡಬೇಕಿದೆ. ಮುಂದಿನ ವರ್ಷ ಎರಡು ಹೊಸ ತಂಡಗಳು ಸೇರ್ಪಡೆಗೊಳ್ಳಲಿದೆ. ಆದರೆ ನಾನು ಆಡುವುದಾದರೆ ಚೆನ್ನೈ ಸೂಪರ್ ಕಿಂಗ್ಸ್ ಅಲ್ಲಿ ಮಾತ್ರ ಆಡುತ್ತೇನೆ ಎಂದು ಹೇಳಿದ್ದಾರೆ. ಅದೇ ಸಂಧರ್ಭದಲ್ಲಿ ಮಹೇಂದ್ರ ಸಿಂಗ್ ಧೋನಿ ಮುಂದಿನ ಸೀಸನ್ ಆಡುವುದಿಲ್ಲಾ ಎಂದಾದರೆ ನಾನು ಕೂಡಾ ಆಡುವುದಿಲ್ಲ ಎಂದು ಹೇಳಿದ್ದಾರೆ.
ಧೋನಿ ಮತ್ತು ನಾನು ೨೦೦೮ ರಿಂದ ಚೆನ್ನೈ ಪರ ಆಡುತ್ತಿದ್ದೇವೆ. ಈ ಬಾರಿ ಐಪಿಎಲ್ ಸೀಸನ್ ಗೆದ್ದರೆ ಮುಂದಿನ ಸರಣಿಯಲ್ಲಿ ಧೋನಿ ಆಡುವಂತೆ ನಾನು ಅವರನ್ನು ಒಪ್ಪಿಸುತ್ತೇನೆ ಎಂದು ಸುರೇಶ್ ರೈನಾ ಹೇಳಿದ್ದಾರೆ.ಧೋನಿ ಐಪಿಎಲ್ ಆಡದಿದ್ದರೆ ನನಗೂ ಬೇರೆ ತಂಡದಲ್ಲಿ ಆಡಲು ಮನಸ್ಸು ಬರುವುದಿಲ್ಲ. ನಾನು ಮುಂದಿನ ಐಪಿಎಲ್ ಆವೃತ್ತಿಯಲ್ಲಿ ಆಡವುದಿಲ್ಲ ಎಂದು ರೈನಾ ಹೇಳಿದ್ದಾರೆ. ಇದರಲ್ಲಿ ಧೋನಿ-ರೈನಾ ಬಾಂಧವ್ಯ ಎಂತದ್ದು ಎಂದು ತಿಳಿಯುತ್ತದೆ. ಏನೇ ಆಗಲಿ ಕ್ರಿಕೆಟ್ ಅಭಿಮಾನಿಗಳು ಇಬ್ಬರೂ ಇನ್ನೂ ಐಪಿಎಲ್ ಅಲ್ಲಿ ಆಡಬೇಕೆಂದು ಇಚ್ಚಿಸಿದ್ದಾರೆ.