ನಗರದ ಐಷಾರಾಮಿ ಬದುಕು ತೊರೆದು ಹಳ್ಳಿಯಲ್ಲಿ ಮಣ್ಣಿನ ಮನೆ ಮಾಡಿ ಬದುಕುತ್ತಿರುವ ಈ ಜೋಡಿ ಬಗ್ಗೆ ನೀವು ತಿಳಿಯಲೇಬೇಕು. ಈ ಬದಲಾವಣೆ ಏಕೆ ಗೊತ್ತೇ?
ಇಂದಿನ ಕಾಲದಲ್ಲಿ ಎಲ್ಲರು ಹಳ್ಳಿಯನ್ನು ಬಿಟ್ಟು ನಗರಗಳಲ್ಲಿ ಐಷಾರಾಮಿ ಶ್ರೀಮಂತ ಜೀವನ ಬದುಕಲು ಇಷ್ಟ ಪಡುತ್ತಾರೆ. ಅಲ್ಲದೆ ಜೀವನೋಪಾಯಕಾಗಿ ನಗರಕ್ಕೆ ಬಂದವರು ಅಲ್ಲಿನ ಜೀವನ ಶೈಲಿ ನೋಡಿ ತನ್ನ ಊರಲ್ಲಿ ಇದ್ದ ಎಲ್ಲ ಅಸ್ತಿ ಮಾಡಿ ನಗರದಲ್ಲಿ ಜೀವಿಸಲು ಬಯಸುತ್ತಾರೆ. ಆದರೆ ಇಲ್ಲಿ ಒಂದು ದಂಪತಿ ಇದರ ಸಂಪೂರ್ಣ ಉಲ್ಟಾ ಜೀವನ ಶೈಲಿ ಆಯ್ಕೆ ಮಾಡಿದ್ದಾರೆ. ಅಂದರೆ ನಗರ ದಲ್ಲಿ ಹುಟ್ಟಿ ಬೆಳೆದವರು ಇದೀಗ ಹಳ್ಳಿಯಲ್ಲಿ ಜಾಮೀನು ನೋಡಿಕೊಂಡು ಬದುಕುತ್ತಿದ್ದದ್ದಾರೆ.
ಮುಂಬೈ ನಲ್ಲಿ ಬೆಳೆದು ಬೆಂಗಳೂರು ಹಾಗು ಚೆನ್ನೈ ನಂತಹ ನಗರಗಳಲ್ಲಿ ಕೆಲಸ ಮಾಡಿಕೊಂಡು ಇದ್ದ ಸುಧಾಕರ್ ಎನ್ನುವವರು ತಮ್ಮ ಕಾರ್ಪೊರೇಟ್ ವಲಯದ ಉದ್ಯೋಗ ಹಾಗು ನಗರ ಜೀವನ ಬಿಟ್ಟು ಶಾಂತ ಮತ್ತು ಸರಳ ಜೀವನ ನಡೆಸಲು ನಿರ್ಧಾರ ನಡೆಸಿ ೨೦೧೮ ರಲ್ಲಿ ತಮಿಳುನಾಡಿನ ತಿರುನಲ್ವೇಲಿ ಎನ್ನುವಲ್ಲಿ ಸುಮಾರು ೧೧ ಎಕರೆ ಜಾಗ ಖರೀದಿಸಿ ಜೀವನ ನಡೆಸಲು ನಿರ್ಧರಿಸಿದ್ದಾರೆ. ಇದು ಅವರ ಪೂರ್ವಿಕರ ಗ್ರಾಮವು ಕೂಡ ಆಗಿತ್ತು. ಕಳೆದ ಮೂರೂ ವರ್ಷಗಳಿಂದ ತಾನು ಹಾಗು ತನ್ನ ಹೆಂಡತಿ ಹೊಲದ ಮದ್ಯದಲ್ಲಿ ಮಾಡಿದ ಮನೆಯಲ್ಲಿ ಜೀವಿಸುತ್ತಿದ್ದಾರೆ.
ಸುಧಾಕರ್ ಅವರ ಪತ್ನಿ ಹೆಸರು ನೌಶದ್ಯ ಎಂದು. ಇವರಿಬ್ಬರು ಸಾಮಾಜಿಕ ಸಂಸ್ಥೆಯೊಂದಿಗೆ ಕಾಣಿಸಿಕೊಂಡವರಾಗಿದ್ದು ಇದೆ ಕಾರಣಕ್ಕೆ ಇವರಿಗೆ ಹಳ್ಳಿಯಲ್ಲಿ ನಿಸರ್ಗದ ಜೊತೆಗೆ ಜೀವನ ಸಾಗಿಸುವ ಕನಸು ಬಂದಿದ್ದು. ನೌಶದ್ಯ ಅವರಿಗೆ ಹಳ್ಳಿ ಜೀವನ ನಡೆಸುವುದು ಸಾದ್ಯವಿರಲಿಲ್ಲ ಅದಕ್ಕೆ ಮೊದಲು ಮೂರೂ ತಿಂಗಳು ಇಬ್ಬರು ಹಳ್ಳಿ ಶೈಲಿಯಲ್ಲಿ ಜೀವನ ನಡೆಸಿದರು. ಪ್ರಕೃತಿಯೊಂದಿಗೆ ಇದ್ದು ಹೇಗೆ ಸಾಮರಸ್ಯದ ಜೀವನ ನಡೆಸಬಹುದು ಎನ್ನುವುದು ಕಲಿತುಕೊಂಡರು. ನಂತರ ಇದೀಗ ಮೂರೂ ವರ್ಷಗಳಿಂದ ಅದೇ ಹಳ್ಳಿ ಮನೆಯಲ್ಲಿ ಸರಳ ಜೀವನ ನಡೆಸುತ್ತಿದ್ದಾರೆ.
೧೧ ಎಕರೆ ಜಮೀನಿನಲ್ಲಿ ಕೃಷಿ ಮಾಡಲು ನಿರ್ಧರಿಸಿದ ದಂಪತಿಗಳು. ಖರೀದಿಸುವಾಗ ಇದು ರಾಸಾಯನಿಕ ಕೃಷಿ ಮಾಡಲು ಇದ್ದಂತಹ ಜಮೀನಾಗಿತ್ತು. ಹಾಗೇನೇ ಎರಡು ಮೂರೂ ತೆಂಗಿನ ಮರ ಮಾವಿನ ಮರಗಳಿದ್ದವು. ಸುಧಾಕರ್ ಇಲ್ಲಿ ಕಾಡು ಪ್ರಾಣಿಗಳನ್ನು ತಪ್ಪಿಸಲು ಸೋಲಾರ್ ಇಂದ ವಿದ್ಯುತ್ತು ಫೆನ್ಸಿಂಗ್ ತಯಾರು ಮಾಡಿದರು. ಅದೇ ರೀತಿ ಅದೇ ಜಮೀನಿನಲ್ಲೂ ಒಂದು ನೈಸರ್ಗಿಕ ಮನೆ ನಿರ್ಮಾಣ ಮಾಡಲು ನಿರ್ಧರಿಸಿದರು. ಅದೇ ರೀತಿ ಜೇಡಿ ಮಣ್ಣು ಹಾಗು ಬಿದಿರು ಬಳಸಿ ಸುಂದರವಾದ ಮನೆ ನಿರ್ಮಿಸಿದ್ದಾರೆ. ಈ ಮನೆ ನಿರ್ಮಾಣಕ್ಕೆ ಯಾವುದೇ ಸಿಮೆಂಟ್ ಬಳಸಲಾಗಿಲ್ಲ. ಅದೇ ಅಲ್ಲದೆ ವಿದ್ಯುತ್ ಚ್ಛಕ್ತಿ ಗಾಗಿ ಸೋಲಾರ್ ಅನ್ನು ಬಳಸುತ್ತಿದ್ದು ಪ್ಲಾಸ್ಟಿಕ್ ಕೂಡ ದೈನಂದಿನ ಬಳಕೆಯಲ್ಲಿ ಬಹಳ ಕಡಿಮೆ ಮಾಡಿದ್ದಾರೆ. ಪರಿಸರ ಪ್ರೇಮ ನಮ್ಮ ದೇಶದ ಪ್ರತಿಯೋರ್ವ ನಾಗರಿಕರಿಗೂ ಸ್ಫೂರ್ತಿ. ಪರಿಸರ ರಕ್ಷಣೆಯತ್ತ ನಾವೆಲ್ಲರೂ ಇಂದು ಸುಧಾಕರ್ ಹಾಗು ನೌಶದ್ಯ ತರಹ ಜೀವನ ಸಾಗಿಸಬೇಕು.