ನಾನು ನನ್ನ ಹೆಂಡತಿ ಮಕ್ಕಳ ಜೊತೆ ಕೂತು ಮೂವಿ ನೋಡುವಾಗ ಅಸಹ್ಯ ಭಾವನೆ ಬರುವಂತಹ ಯಾವುದೇ ಚಿತ್ರಗಳನ್ನು ಎಂದಿಗೂ ಮಾಡುವುದಿಲ್ಲ ಎಂದ ಸೌತ್ ನ ಈ ಸೂಪರ್ ಸ್ಟಾರ್ ಯಾರು?
ಇತ್ತೀಚಿನ ದಿನಗಳಲ್ಲಿ ಸಿನೆಮಾ ರಂಗ ತನ್ನ ದಿಕ್ಕನ್ನೇ ಬದಲಿಸಿದ. ಹೀಗೆ ಇದ್ದ ಸಿನೆಮಾ ರಂಗ ಈಗ ಹೇಗೆ ಆಗಿದೆ ಎಂಬುವುದು ನಮ್ಮ ಕಣ್ಣ ಮುಂದೆಯೇ ಇದೆ. ಬರೀ ಕಂಟೆಂಟ್ ಕಂಟೆಂಟ್ ಎಂದು ಎಲ್ಲವನ್ನೂ ಬಿಚ್ಚಿ ತೋರಿಸುವುದೇ ಸಿನೆಮಾ ಆಗಿ ಹೋಗಿದೆ. ಒಂದು ಕಥೆ ಇಲ್ಲ ಸರಿಯಾದ ನಿರ್ದೇಶನ ಇಲ್ಲ ಬರಿ ಅದರಿಂದಲೇ ಸಿನೆಮಾ ನಡೆಯುತ್ತಿದೆ. ಒಂದೊಮ್ಮೆ ಅಸಹ್ಯ ಎನಿಸಿದರೂ ಈಗಿನ ಜನರೇಷನ್ ಕೂಡ ಅದಕ್ಕೆ ಒಗ್ಗಿ ಹೋಗಿದೆ ಎಂದರೂ ತಪ್ಪಾಗಲಾರದು. ಆದರೆ ಅಂತಹವರ ಮಧ್ಯೆ ತೆಲುಗು ಸೂಪರ್ ಸ್ಟಾರ್ ಒಬ್ಬರು ತಾನು ತನ್ನ ಹೆಂಡತಿ ಮಕ್ಕಳ ಜೊತೆ ಕೂತು ಸಿನೆಮಾ ನೋಡುವಾಗ ಅಸಹ್ಯ ಭಾವನೆ ಬರುವಂತಹ ಯಾವುದೇ ಸಿನೆಮಾ ಮಾಡುವುದಿಲ್ಲ ಎಂದಿದ್ದಾರೆ.
ಹೌದು ಅವರು ಮತ್ಯಾರು ಅಲ್ಲ ಐಕೊನಿಕ್ ಸ್ಟಾರ್ ಅಲ್ಲು ಅರ್ಜುನ್. ಇವರ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ ಇಡೀ ಸೌತ್ ಇಂಡಸ್ಟ್ರಿ ಅಲ್ಲೇ ದೊಡ್ಡ ಹೆಸರು ಮಾಡಿದ ನಟ. ಇತ್ತೀಚೆಗೆ ಅಂತೂ ಪುಷ್ಪ ಸಿನೆಮಾ ಮೂಲಕ ಮತ್ತಷ್ಟು ಹೆಸರು ಗಳಿಸಿದ್ದಾರೆ. ಎಲ್ಲೇ ನೋಡಿದರೂ ಪುಷ್ಪ ಸಿನೆಮಾದ ಹವಾ ಜೋರಾಗೆ ನಡೆಯುತ್ತಿದೆ. ಸಿನೆಮಾ ಎಂಬುವುದು ಎಲ್ಲರೂ ನೋಡುವ ಹಾಗೆ ಇರಬೇಕು ಎಲ್ಲರೂ ಒಟ್ಟಿಗೆ ಕೂತು ನೋಡುವಾಗ ಯಾವ ಭಾವನೆ ಅವರಲ್ಲಿ ಬರ ಬಾರದು ಎನ್ನುತ್ತಾರೆ ಅವರು. ಇತ್ತೀಚೆಗೆ ನಡೆದ ಪ್ರೆಸ್ ಮೀಟ್ ನಲ್ಲಿ ಪತ್ರಕರ್ತೆ ಒಬ್ಬರು ಮುಂದಕ್ಕೆ ಯಾವ ರೀತಿಯ ಸಿನೆಮಾ ಮಾಡುತ್ತೀರಿ ಎಂದು ಕೇಳಿದಾಗ.
ಸದಾ ನಾನು ಕಮರ್ಷಿಯಲ್ ಸಿನೆಮಾಗಳನ್ನು ಮಾಡಲು ಬಯಸುತ್ತೇನೆ. ಆದರೆ ಸಿನೆಮಾ ಹೆಸರಿನಲ್ಲಿ ನಾನು ಮಾಡಿದ ಸಿನೆಮಾ ನನ್ನ ಹೆಂಡತಿ ಮಕ್ಕಳ ಜೊತೆ ಕೂತು ನೋಡುವಾಗ ನನ್ನ ಹೆಂಡತಿ ಮತ್ತು ಮಗಳು ಅಸಹ್ಯ ಪಟ್ಟುಕೊಳ್ಳಬಾರದು, ಅಂತಹ ಸಿನೆಮಾಗಳನ್ನು ನಾನು ಎಂದಿಗೂ ಮಾಡುವುದಿಲ್ಲ ಎಂದು ಹೇಳಿದರು. ಇದು ವೈರಲ್ ಆಗಿದೆ, ಪ್ರಸ್ತುತ ಸಮಯದಲ್ಲಿ ಇಂತಹ ಹೇಳಿಕೆ ಕೊಟ್ಟಿರುವುದು ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ.