ನೀವು ಕಾಣುವ ಅಳಿಲಿನ ಬೆನ್ನ ಮೇಲೆ ಇರುವ ಮೂರು ಗೆರೆಯ ಹಿಂದಿನ ಪೌರಾಣಿಕ ಕಥಾ ಹಿನ್ನಲೆ ಗೊತ್ತೇ? ಇಲ್ಲಿ ಓದಿರಿ.
ಚಿಕ್ಕ ಪುಟ್ಟ ಪ್ರಾಣಿಗಳು ಎಂದರೆ ಎಲ್ಲರಿಗೂ ಸದಾ ಪ್ರೀತಿ. ಅವು ಮನೆಯ ಸುತ್ತ ಮುತ್ತ ಸ್ವತಂತ್ರವಾಗಿ ಓಡಾಡುತ್ತಾ ಇದ್ದರೆ ಅದನ್ನು ನೋಡುವುದೇ ಒಂದು ಖುಷಿ. ಅಂತಹ ಸಣ್ಣ ಪ್ರಾಣಿಗಳಲ್ಲಿ ಒಂದು ಅಳಿಲು. ಹಾಗಾದರೆ ನಾವು ಇಂದು ನಿಮಗೆ ತಿಳಿಸಲು ಹೋರಾಟ ವಿಷಯ ಅಳಿಲಿನ ಬಗ್ಗೆ ಅಲ್ಲ ಬದಲಾಗಿ ಅದರ ಬೆನ್ನ ಮೇಲೆ ಇರುವ ಮೂರು ಗೆರೆಗಳ ಬಗ್ಗೆ. ಹೌದು ಇದರ ಪೌರಾಣಿಕ ನಂಟು ನೋಡಿದರೆ ನೀವು ರಾಮಾಯಣ ಕಾಲವನ್ನು ಒಮ್ಮೆ ಹಿಂತಿರುಗಿ ನೋಡಬೇಕು. ಅಚ್ಚರಿ ಆದರೂ ಇದು ಸತ್ಯ ಸಂಗತಿ. ಹಾಗಾದರೆ ರಾಮಾಯಣಕ್ಕೂ ಈ ಗೆರೆಗೂ ಏನು ಸಂಬಂಧ ಎಂಬ ಕುತೂಹಲ ಮೂಡಿರಬಹುದು ಬನ್ನಿ ತಿಳಿಯೋಣ.
ರಾಮಾಯಣ ಎಂದರೆ ಹಾಗೆ ಅದು ಜೀವನ ಮೌಲ್ಯಗಳು ಅಡಕ ವಾಗಿರುವ ಪೌರಾಣಿಕ ಗ್ರಂಥ. ಸೀತೆಯನ್ನು ರಾವಣ ಅಪಹರಿಸಿ ಲಂಕಾದಲ್ಲಿ ಕೂಡಿ ಹಾಕಿದ್ದ. ಹನುಮಂತನ ಮುಖಾಂತರ ವಿಷಯ ತಿಳಿದ ರಾಮ ಲಂಕೆಗೆ ಹೋಗಲು ಸಮುದ್ರಕ್ಕೆ ಸೇತುವೆ ಕಟ್ಟುವ ನಿರ್ಧಾರ ಮಾಡುತ್ತಾರೆ. ಹೇಳಿಕೆ ಬಾಲಿಶ ಎನಿಸಿದರೂ ಇದು ನಡೆದ ನೈಜ ಘಟನೆ. ರಾಮಾಯಣ ಸುಳ್ಳು ಎಂದು ಹೇಳುವ ಬುದ್ದಿ ಜೀವಿಗಳಿಗೆ ರಾಮ ಸೇತುವೆ ನಿದರ್ಶನ. ಹೀಗೆ ವಾನರ ಸೇನೆಯ ಜೊತೆ ಸೇರಿ ಸೇತುವೆ ಕೆಲಸ ಮಾಡುತ್ತಿರುವಾಗ ಈ ಪುಣ್ಯ ಕಾರ್ಯದಲ್ಲಿ ಅಳಿಲು ಕೂಡ ಸಹಕರಿಸುತ್ತಾ ಇತ್ತು. ಒದ್ದೆ ಮೈಯಲ್ಲಿ ಮರಳಿನ ಮೇಲೆ ಹೊರಳಾಡಿ ಸೇತುವೆ ಮೇಲೆ ಬಂದು ಮೈ ಕೊಡವುತ್ತಿತ್ತು.
ಹೀಗೆ ಇದನ್ನು ಕಂಡ ಪ್ರಭು ಶ್ರೀರಾಮ ಅಳಿಲನ್ನು ಮೆಲ್ಲಗೆ ಎತ್ತಿ ಅದರ ಬೆನ್ನನ್ನು ಮೂರು ಬೆರಳಿನಿಂದ ಸವರುತ್ತಾರೆ ಆಗ ಮೂಡಿದ್ದೆ ಈ ಮೂರು ಗೆರೆಗಳು. ತನ್ನ ನಿಸ್ವಾರ್ಥ ಸೇವೆಯನ್ನು ಮುಂಬರುವ ಭಾರತ ವರ್ಷದಲ್ಲಿ ಹಾಡಿ ಹೊಗಳುತ್ತಾರೆ ಎಂದು ವರದಾನ ಇತ್ತರು. ಹೀಗೆ ಈಗಲೂ ಅಳಿಲು ಬಹಳ ಪೂಜನೀಯ. ಅಳಿಲು ಸೇವೆ ಎಂದೇ ಈಗ ಚಾಲ್ತಿಯಲ್ಲಿ ಇದೆ. ಅದೇನೇ ಇರಲಿ ನಂಬಿಕೆಗಳ ಮೇಲೆ ನಿಂತ ಈ ಪ್ರಪಂಚದಲ್ಲಿ ನಂಬಿರುವ ಈ ನಂಬಿಕೆಯನ್ನು ಅಲ್ಲ ಗಳೆಯುವಂತೆ ಇಲ್ಲ.