ಪಂಕ್ಚರ್ ಗಾರ್ಡ್ ಟೈಯರ್ ಬಗ್ಗೆ ನಿಮಗೆಷ್ಟು ಗೊತ್ತು? ಇನ್ನು ಮುಂದೆ ವಾಹನಗಳ ಟೈಯರ್ ಪಂಕ್ಚರ್ ಆದರೂ ಪಂಕ್ಚರ್ ಹಾಕಿಸಬೇಕು ಎಂದಿಲ್ಲ?

1,110

ಇತ್ತೀಚಿನ ದಿನಗಳಲ್ಲಿ ವಾಹನಗಳ ಬಳಕೆ ಅತ್ಯಂತ ಹೆಚ್ಚಾಗುತ್ತಾ ಇದೆ. ದಿನ ನಿತ್ಯ ಆಗುವ ಟ್ರಾಫಿಕ್ ಜಾಮ್ ನಿಂದಲೆ ನಾವು ಅಂದಾಜಿಸಬಹುದು ಯಾವ ಮಟ್ಟಕ್ಕೆ ಈ ವಾಹನ ಖರೀದಿ ಬೆಳೆದು ನಿಂತಿದೆ ಎಂದು. ವಾಹನ ಖರೀದಿ ಮಾಡಿದರು ಆಗಾಗ್ಗೆ ಪಂಕ್ಚರ್ ಹಾಕುವ ತಲೆಬಿಸಿ. ಟ್ಯೂಬ್ ಲೆಸ್ ಟೈಯರ್ ಬಂದಿದ್ದರು ಕೆಲವೊಮ್ಮೆ ಅರ್ಜೆಂಟ್ ಟೈಮ್ ಗಳಲ್ಲಿ ಕೈಕೊಟ್ಟ ಅದೆಷ್ಟೋ ಅನುಭವ ಎಲ್ಲರಿಗೂ ಆಗಿದೆ. ಆದರೆ ಇದರ ತಲೆಬಿಸಿ ಮುಂದಕ್ಕೆ ಇಲ್ಲ. ಯಾಕೆ ದಾರೆ ಅಂತಹ ಒಂದು ತಂತ್ರಾಂಶ ಹೊಂದಿರುವ ಹೊಸ ಟೈಯರ್ ಮಾರುಕಟ್ಟೆಗೆ ಬಿಡುಗಡೆ ಆಗಿದೆ . ಹೌದು ಏನಿದರ ವಿಶೇಷತೆ ಬನ್ನಿ ತಿಳಿಯೋಣ.

ಜೆಕೆ ಟೈಯರ್ ಎಂದರೆ ಎಲ್ಲರಿಗೂ ಗೊತ್ತು ಅತೀ ಹೆಚ್ಚಾಗಿ ಜನರು ಇದನ್ನು ಬಳಸುತ್ತಾರೆ. ಇವರು ಇದೀಗ ಹೊಸ ಮಾದರಿಯ ಪಂಕ್ಚರ್ ಗಾರ್ಡ್ ಟೈಯರ್ ಗಳನ್ನ ಮಾರುಕಟ್ಟೆಗೆ ಬಿಟ್ಟಿದ್ದಾರೆ. ಹೌದು ಇದರ ಒಳಗೆ ಎಲಾಸ್ಟೋಮರ್ ಕೋಟಿಂಗ್ ಒಳಗಡೆ ಹಾಕಲಾಗಿದ್ದು. ಒಂದು ವೇಳೆ ವಾಹನ ಪಂಕ್ಚರ್ ಆದ್ರೂ ಕೂಡ ಅದು ಅದರಲ್ಲಿನ ತಂತ್ರಾಂಶ ಬಳಸಿಕೊಂಡು ಅಲ್ಲಿಗೆ ಸರಿ ಮಾಡುತ್ತದೆ. ಇದೆ ಈ ಎಲಾಸ್ಟೋಮರ್ ಕೋಟಿಂಗ್ ನ ವಿಶೇಷತೆ.

ಕಂಪನಿ ಹೇಳುವ ಪ್ರಕಾರ 6 ಮಿಮಿ ಅಳತೆ ಹೊಂದಿರುವ ಯಾವುದೇ ಚೂಪಾದ ವಸ್ತು ಚುಚ್ಚಿದರು ಇದು ಸರಿಪಡಿಸುವ ಸಾಮರ್ಥ್ಯ ಹೊಂದಿದೆ. ಮತ್ತು ಇದನ್ನು ಅನ್ ರೋಡ್ ಮತ್ತು ಆಫ್ ರೋಡ್ ಎರಡರಲ್ಲೂ ಪರೀಕ್ಷೆ ಮಾಡಲಾಗಿದೆ ಮತ್ತು ಇದು ಯಶಸ್ವಿ ಆಗಿ ಕಾರ್ಯ ನಿರ್ವಹಿಸುತ್ತದೆ ಎಂದು ಕಂಪನಿ ಹೇಳಿಕೆ ನೀಡಿದೆ. ಇನ್ನು ಮುಂದಕ್ಕೆ ಯಾವುದೇ ರೀತಿಯ ಪಂಕ್ಚರ್ ತಲೆಬಿಸಿ ಇಲ್ಲದೆ ಗಾಡಿ ಓಡಿಸಬಹುದು ಎಂದು ಕಂಪನಿ ಹೇಳಿದೆ. ಪ್ರಯೋಗವಾಗಿದೆ 4 ಚಕ್ರದ ವಾಹನಗಳಿಗೆ ಈ ಟೈರ್ ಬಿಡುಗಡೆ ಮಾಡಿದ್ದು ಮುಂದಕ್ಕೆ ದ್ವಿಚಕ್ರ ವಾಹನಗಳಿಗೂ ತರುವ ಯೋಚನೆ ಇದೆ ಎಂದಿದೆ.

Leave A Reply

Your email address will not be published.