ಪಂತ್ ಹಾಗು ದಿನೇಶ್ ಕಾರ್ತಿಕ್ ಯಾರನ್ನು ಆಡಿಸಬೇಕು ಎನ್ನುವ ಚರ್ಚೆಗೆ ದುಮುಕಿದ ಡಿ ವಿಲಿಯರ್ಸ್. ಈ ಆಟಗಾರನೇ ಆಡಬೇಕು ಯಾವುದೇ ಅನುಮಾನ ಬೇಡ ಎಂದ ABD.
Team India ಸೆಮಿಫೈನಲ್ ಅಲ್ಲಿ ಬಲಿಷ್ಠ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ. ಸೂಪರ್ ೧೨ ಗ್ರೂಪ್ ಅಲ್ಲಿ ಟಾಪ್ ೧ ತಂಡವಾಗಿ ಸೆಮಿ ಫೈನಲ್ ಗೆ ಟಿಕೆಟ್ ಪಡೆದ ಭಾರತ ತಂಡ 8 ಅಂಕ ಗಳಿಸಿತ್ತು. ಭಾರತ ತಂಡದ ಸ್ಟಾರ್ ಆಟಗಾರರಾದ Virat Kohli ಹಾಗು Surya Kumar Yadav ಲೀಗ್ ಹಂತದಲ್ಲಿ ಮಿಂಚಿದ ಆಟಗಾರರು. ಹಾಗೇನೇ ಟಾಪ್ 5 ಅತಿ ಹೆಚ್ಚು ರನ್ ಕಲೆ ಹಾಕುವವರಲ್ಲೂ ಕೂಡ ವಿರಾಟ್ ಕೊಹ್ಲಿ 246 ರನ್ ಗಳಿಸಿ ಮೊದಲ ಸ್ಥಾನದಲ್ಲಿ ಇದ್ದರೆ, ಸೂರ್ಯ ಕುಮಾರ್ ಯಾದವ್ 225 ರನ್ ಗಳಿಸಿ ೩ ನೇ ಸ್ಥಾನದಲ್ಲಿ ಇದ್ದಾರೆ.
ಹೀಗಿದ್ದರೂ ಕೂಡ ಭಾರತ ತಂಡದಲ್ಲಿ ದೊಡ್ಡ ಚರ್ಚೆಗೆ ಕಾರಣವಾದದ್ದು ಅಡಿಲೇಡ್ ಅಲ್ಲಿ ವಿಕೆಟ್ ಕೀಪರ್ ಯಾರನ್ನು ಕಣಕ್ಕಿಳಿಸಬೇಕು ಎನ್ನುವುದು. ಈ ಸ್ಥಾನಕ್ಕೆ ಈಗಾಗಲೇ ಎರಡು ಆಟಗಾರರು ಪೈಪೋಟಿಯಲ್ಲಿ ಇದ್ದಾರೆ. ಹಿರಿಯ ಆಟಗಾರ ಹಾಗು ವಿಕೆಟ್ ಕೀಪರ್ ಫಿನಿಶರ್ ದಿನೇಶ್ ಕಾರ್ತಿಕ್ ಹಾಗು ಯುವ ಆಟಗಾರ, ವಿಕೆಟ್ ಕೀಪರ್ ಹಾಗು ಎಡಗೈ ಬ್ಯಾಟ್ಸಮನ್ ರಿಷಬ್ ಪಂತ್. ಸೂಪರ್ 12 ಲೀಗ್ ಅಲ್ಲಿ ಎಲ್ಲ ಪಂದ್ಯಗಳಲ್ಲಿ ದಿನೇಶ್ ಕಾರ್ತಿಕ್ ತಂಡದಲ್ಲಿ ಸ್ಥಾನ ಪಡೆದಿದ್ದರೆ, ಜಿಂಬಾಬ್ವೆ ಪಂದ್ಯದಲ್ಲಿ ರಿಷಬ್ ಪಂತ್ ಆಡಿದ್ದಾರೆ.
ಇದೀಗ ಈ ಚರ್ಚೆಗೆ ಸೌತ್ ಆಫ್ರಿಕಾದ ಮಾಜಿ ಆಟಗಾರ ರಿಷಬ್ ಪಂತ್ ದುಮುಕಿದ್ದು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಪ್ರಶ್ನೆಗೆ ಉತ್ತರಿಸುತ್ತಾ, “ಈ ಆಯ್ಕೆ ತುಂಬಾ ಕಠಿಣವಾಗಿದೆ ನನಗೆ, ದಿನೇಶ್ ಕಾರ್ತಿಕ್ ಆಡಬೇಕು ಅನ್ನುವುದು ನನ್ನ ಅಭಿಪ್ರಾಯ. ಅದರಲ್ಲಿ ಯಾವುದೇ ಅನುಮಾನವಿಲ್ಲ. ಸೆಮಿಫೈನಲ್ ಆಟ, DK ಅನುಭವಿ ಆಟಗಾರ, ಆದ್ದರಿಂದ ನಾನು ಕಾರ್ತಿಕ್ ಅವರನ್ನು ತಂಡದಲ್ಲಿ ಬಯಸುತ್ತೇನೆ. ಹಾಗೇನೇ ಇಲ್ಲಿ curveball ಕೂಡ ಇರುವುದರಿಂದ ರಿಷಬ್ ಪಂತ್ ಕೂಡ ತಂಡದಲ್ಲಿ ಇರಬೇಕೆಂದು ಬಯಸುತ್ತೇನೆ. ಇಬ್ಬರು ಕೂಡ ತಂಡದಲ್ಲಿ ಇರಬೇಕು. ರಿಷಬ್ ಪಂತ್ ಗಾಗಿ ಯಾರು ಸ್ಥಾನ ಬಿಟ್ಟುಕೊಡುತ್ತಾರೆ ನಂಗೆ ಗೊತ್ತಿಲ್ಲ” ಎಂದು ಹೇಳಿದ್ದಾರೆ.