ಪಂದ್ಯವನ್ನು ಪಾಕಿಸ್ತಾನದ ಕೈಯಿಂದ ಕಸಿದುಕೊಂಡು ಭಾರತಕ್ಕೆ ಕೊಟ್ಟ ಹಾರ್ದಿಕ್ ಪಾಂಡ್ಯ ಕುರಿತು ಪಾಕ್ ನ ವಾಸಿಂ ಅಕ್ರಮ್ ಹೇಳಿದ್ದೇನು ಗೊತ್ತೇ??
ಏಷ್ಯಾಕಪ್ ನಲ್ಲಿ ಭಾರತದ ಮೊದಲ ಪಾಕಿಸ್ತಾನದ ವಿರುದ್ಧ ನಡೆಯಿತು, ಮೊನ್ನೆ ಭಾನುವಾರ ನಡೆದ ಈ ಪಂದ್ಯದಲ್ಲಿ ಭಾರತ ತಂಡ ಭರ್ಜರಿಯಾದ ಗೆಲುವು ಸಾಧಿಸಿತು. ಮೊನ್ನೆಯ ಪಂದ್ಯದಲ್ಲಿ ಭಾರತ ಗೆಲ್ಲಲು ಪ್ರಮುಖ ಪಾತ್ರ ವಹಿಸಿದವರು ಹಾರ್ದಿಕ್ ಪಾಂಡ್ಯ, ಆಲ್ ರೌಂಡರ್ ಆಗಿ ಅದ್ಭುತವಾದ ಪ್ರದರ್ಶನ ನೀಡಿದರು. ಹಾರ್ದಿಕ್ ಪಾಂಡ್ಯ ಅವರು ಮಧ್ಯದ ಓವರ್ ಗಳಲ್ಲಿ ಬೌಲಿಂಗ್ ಮಾಡಿ, ಬೌನ್ಸರ್ ಗಳನ್ನು ಹಾಕಿ, ಮೈದಾನದಲ್ಲಿ ಸೆಟ್ಲ್ ಆಗಿದ್ದ ಮೊಹಮ್ಮದ್ ರಿಜ್ವಾನ್ ಸೇರಿದಂತೆ 3 ವಿಕೆಟ್ಸ್ ಪಡೆದರು. ಇನ್ನು ಬ್ಯಾಟಿಂಗ್ ನಲ್ಲಿ, 17 ಬಾಲ್ ಗಳಲ್ಲಿ 33 ರನ್ ಸಿಡಿಸಿ, ಕೊನೆಯ 6 ಭಾರಿಸಿ ಭಾರತ ತಂಡದ ಗೆಲುವಿಗೆ ಕಾರಣವಾದರು.
ಭಾನುವಾರ ಪಂದ್ಯ ಮುಗಿದ ಬಳಿಕ, ವಾಸಿಂ ಅಕ್ರಂ ಅವರು ಹಾರ್ದಿಕ್ ಪಾಂಡ್ಯ ಅವರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ, “ಈಗಿರುವ ವಿಶ್ವದ ಅತ್ಯುತ್ತಮ ಆಲ್ ರೌಂಡರ್ ಗಳಲ್ಲಿ ಹಾರ್ದಿಕ್ ಪಾಂಡ್ಯ ಸಹ ಒಬ್ಬರು ಎಂದು ನಾನು ನಂಬುತ್ತೇನೆ. ಅದಕ್ಕೆ ತಕ್ಕ ಹಾಗೆ ಅವರು ಶ್ರಮ ಹಾಕುತ್ತಾರೆ, ಅವರ ಮನಸ್ಥಿತಿ ಸಹ ಅದೇ ರೀತಿ ಇದೆ. 140 ಕಿಮೀ ವೇಗದಲ್ಲಿ ಅವರು ಬೌಲಿಂಗ್ ಮಾಡುತ್ತಿದ್ದಾರೆ, ಬ್ಯಾಟಿಂಗ್ ವಿಚಾರದಲ್ಲೂ ಅದ್ಭುತವಾಗಿದ್ದಾರೆ. ಎಲ್ಲಾ ರೂಪದಲ್ಲೂ ಭಾರತ ತಂಡದ ಪ್ರಮುಖ ಆಟಗಾರ ಆಗಿದ್ದಾರೆ ಹಾರ್ದಿಕ್ ಪಾಂಡ್ಯ..” ಎಂದು ಹೇಳಿದ್ದಾರೆ ವಾಸಿಂ ಅಕ್ರಂ.
“ಬ್ಯಾಟಿಂಗ್ ನಲ್ಲಿ ಪಾಂಡ್ಯ ಆಂಡ್ರೆ ರಸಲ್ ಅವರಿಗಿಂತ ಉತ್ತಮವಾಗಿ ಆಡುತ್ತಾರೆ. ಅವರಲ್ಲಿ ಸ್ಥಿರತೆ ಇದೆ. ಪಾಂಡ್ಯ ಎಲೆಕ್ಟ್ರಿಫೈಯಿಂಗ್ ಫೀಲ್ಡರ್ ಸಹ ಹೌದು. ವಿಶ್ವದ ಅಗ್ರ ಕ್ರಿಕೆಟಿಗರಲ್ಲಿ ಪಾಂಡ್ಯ ಸಹ ಒಬ್ಬರು. ವೈಟ್ ಬಾಲ್ ಕ್ರಿಕೆಟ್ ನಲ್ಲಿ ಪಾಂಡ್ಯ ಅದ್ಭುತವಾದ ಆಲ್ ರೌಂಡರ್, ಅವರಿಂದ ನಾನು ಪ್ರಭಾವಿತನಾಗಿದ್ದೇನೆ..” ಎಂದು ಭಾರತದ ಹೆಮ್ಮೆಯ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಬಗ್ಗೆ ಹೇಳಿದ್ದಾರೆ ಪಾಕಿಸ್ತಾನ್ ತಂಡದ ಮಾಜಿ ನಾಯಕ ವಾಸಿಂ ಅಕ್ರಂ.