ಪಾಕಿಸ್ತಾನದ ವಿರುದ್ದದ ಪಂದ್ಯಕ್ಕೆ ಭಾರತದ ಪ್ಲೇಯಿಂಗ್ 11 ತಂಡ ರಚಿಸಿದ ಹರ್ಭಜನ್ ಸಿಂಗ್. ಯಾರು ಸೇರ್ಪಡೆ? ಯಾರಿಗೆ ಗೇಟ್ ಪಾಸ್?

179

ವಿಶ್ವಕಪ್ ೨೦೨೨ ರಲ್ಲಿ ಮೊದಲ ಪಂದ್ಯ ಪಾಕಿಸ್ತಾನದ ಎದುರು ಆಡಬೇಕಿದೆ ಭಾರತ. ಈ ಪಂದ್ಯ ನೋಡಲು ಕ್ರಿಕೆಟ್ ಅಭಿಮಾನಿಗಳಲ್ಲದೆ ಕ್ರಿಕೆಟ್ ದಿಗ್ಗಜರು ಕೂಡ ಕಾತುರರಾಗಿ ಕಾಯುತ್ತಿದ್ದಾರೆ. ವಿಹ್ವಾಕಪ್ ಗೆ ಭಾರತದ ಪ್ಲೇಯಿಂಗ್ ೧೧ ಹೇಗಿರಬೇಕು ಎಂದು ದಿಗ್ಗಜರು ತಮ್ಮ ಅಭಿಪ್ರಾಯಗಳನ್ನು ನೀಡುತ್ತಲೇ ಬಂದಿದ್ದಾರೆ. ಇದರ ನಡುವೆ ಭಾರತದ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ ಕೂಡ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಅವರು ತಮ್ಮ ನೆಚ್ಚಿನ ಪ್ಲೇಯಿಂಗ್ ೧೧ ತಂಡ ರಚಿಸಿ ಯಾರೆಲ್ಲ ಆಡಬೇಕೆಂದು ಹೇಳಿದ್ದಾರೆ.

ಹರ್ಭಜನ್ ಸಿಂಗ್ ಅವರ ಪ್ಲೇಯಿಂಗ್ ೧೧ ತಂಡದಲ್ಲಿ ಹೆಚಿನು ಬದಲಾವಣೆ ಮಾಡಲಾಗಿಲ್ಲ. ಕೊನೆ ಪಂದ್ಯ ನೋಡುತ್ತಾ ಕೆಲವು ಆಟಗಾರರ ಸ್ಥಾನ ದಲ್ಲಿ ಬದಲಾವಣೆ ಮಾಡಿದ್ದಾರೆ. ಯಾವ ಕ್ರಮಾಂಕದಲ್ಲಿ ಆಟಗಾರರು ಆಡಬೇಕೆಂದು ಸಿಂಗ್ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಸಿಂಗ್ ಅವರ ತಂಡದಲ್ಲಿ ರೋಹಿತ್ ಶರ್ಮ, ರಾಹುಲ್ ಸೂರ್ಯಕುಮಾರ್ ಯಾದವ್, ವಿರಾಟ್ ಕೊಹ್ಲಿ, ಹಾರ್ಧಿಕ್ ಪಂದ್ಯ ದಿನೇಶ್ ಕಾರ್ತಿಕ್ ಹಾಗು ಅಕ್ಸಾರ್ ಪಟೇಲ್ ಜೊತೆಗೆ ಯುಜುವೇಂದ್ರ ಚಾಹಲ್, ಮೊಹಮ್ಮದ್ ಶಮಿ ಅರ್ಶದೀಪ್ ಸಿಂಗ್, ಭುವನೇಶ್ವರ್ ಕುಮಾರ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಹರ್ಷಲ್ ಪಟೇಲ್ ರವಿಚಂದ್ರನ್ ಅಶ್ವಿನ್ ಹಾಗು ರಿಷಬ್ ಪಂತ್ ಗೆ ತಂಡದಲ್ಲಿ ಸ್ಥಾನ ಸಿಗಲಿಲ್ಲ. ಇದಕ್ಕೆ ಕಾರಣ ಅಕ್ಸಾರ್ ಪಟೇಲ್ ಗೆ ಮುಂಚೆ ಅವಕಾಶ ಸಿಕ್ಕಿರಲಿಲ್ಲ, ಅಶ್ವಿನ್ ಹಾಗು ಪಂತ್ ಗೆ ಅವಕಾಶಗಳು ಸಿಕ್ಕಿತ್ತು. ಅದೇ ಕಾರಣಕ್ಕೆ ಅಕ್ಸಾರ್ ಅಶ್ವಿನ್ ಬದಲಿಗೆ ಹಾಗೇನೇ ಉತ್ತಮ ಪ್ರದರ್ಶನ ನೀಡುತ್ತಿರುವ ದಿನೇಶ್ ಕಾರ್ತಿಕ್ ರಿಷಬ್ ಪಂತ್ ಬದಲಿಗೆ ತಂಡದಲ್ಲಿ ಸ್ಥಾನ ನೀಡಿದ್ದೇನೆ ಎಂದು ಹರ್ಭಜನ್ ಸಿಂಗ್ ಹೇಳಿದ್ದಾರೆ. ಇದೆ ರೀತಿ ದೀಪಕ್ ಹೂಡಾ ಕೂಡ ತಂಡದಲ್ಲಿ ಸ್ಥಾನ ಪಡೆದಿಲ್ಲ.

Leave A Reply

Your email address will not be published.