ಪಾಕಿಸ್ಥಾನದಲ್ಲಿದೆ ಹಿಂಗ್ಲಾಜ್ ಮಾತಾ ದೇವಾಲಯ; ಈ ಶಕ್ತಿಪೀಠಕ್ಕೆ ಹೀಗೆ ಹೆಸರು ಬರಲು ಕಾರಣ ಏನು ಗೊತ್ತಾ?

154

ನಮಸ್ಕಾರ ಸ್ನೇಹಿತರೆ, ಪಾಕಿಸ್ತಾನದ ಬಲುಚಿಸ್ತಾನದಲ್ಲಿರುವ ಹಿಂಗ್ಲಾಜ್ ದೇವಿ ಮಂದಿರದ ಬಗ್ಗೆ ಸಾಕಷ್ಟು ಜನರಿಗೆ ಗೊತ್ತಿಲ್ಲದೇ ಇರಬಹುದು. ಈ ದೇವಿ ಇಲ್ಲಿ ಯಾಕೆ ನೆಲೆಸಿದ್ದಾಳೆ. ಈ ಹೆಸರು ಬರಲು ಕಾರಣವೇನು ಎಂಬಿತ್ಯಾದಿ ಮಾಹಿತಿಯನ್ನ ನಾವು ಈ ಲೇಖನದ ಮೂಲಕ ತಿಳಿಸಿಕೊಡ್ತೀವಿ.

ಹಿಂಗ್ಲಾಜ್ ದೇವಿ ೫೫ ಶಕ್ತಿ ಪೀಠಗಳಲ್ಲಿ ಒಂದು ಎಂದು ಹೇಳಲಾಗುತ್ತದೆ. ಶಕ್ತಿ ಪೀಠಗಳು ನಿಜವಾಗಿ ಎಷ್ಟಿವೆ ಎನ್ನುವುದಕ್ಕೆ ಸ್ಪಷ್ಟವಾದ ಮಾಹಿತಿ ಇಲ್ಲ. ಆದರೆ ಇಲ್ಲಿರುವ್ದು ಶಕ್ತಿಪೀಠಗಳಲ್ಲಿ ಒಂದು ಎನ್ನುವುದಂತೂ ಸತ್ಯ. ತಾಯಿ ದುರ್ಗೆ ಇಲ್ಲಿ ಹಿಂಗ್ಲಾಜತಾಯಿಯಾಗಿ ಬಂದು ನೆಲೆಸುಉದಕ್ಕೂ ವಿಭಿನ್ನವಾದ ಕಥೆಗಳಿವೆ.

ಪುರಾಣದ ಕಥೆಯನ್ನ ನೋಡುವುದಾದರೆ, ಶಿವ ಹಾಗೂ ಸತಿ ಪತಿ ಪತ್ನಿಯರು. ಆದರೆ ಸತಿ ಶಿವನನ್ನು ವಿವಾಹವಾಗುವುದು ಆಕೆಯ ತಂದೆ ದಕ್ಷನಿಗೆ ಸ್ವಲ್ಪವೂ ಇಷ್ಟವಿರುವುದಿಲ್ಲ. ಹಾಗಾಗಿ ತಾನು ಮಾಡಿದ ಮಹಾಯಾಗಕ್ಕೆ ಮಗಳು ಅಳಿಯನನ್ನು ಆಹ್ವಾನಿಸುವುದೇ ಇಲ್ಲ ದಕ್ಷ. ಆದರೂ ಸತಿ ಹಾಗೂ ಶಿವ ಆ ಯಜ್ಞಕ್ಕೆ ಆಗಮಿಸುತ್ತಾರೆ. ಕರೆಯದೇ ಬಂದವರು ಎಂದು ಶಿವನನ್ನು ಹಾಗೂ ಸತಿಯನ್ನು ದಕ್ಷ ಅವಮಾನ ಮಾಡುತ್ತಾನೆ. ಇದರಿಂದ ನೊಂದ ಸತಿ ಕೂಡಲೇ ಅಗ್ನಿ ಪ್ರವೇಶ ಮಾಡುತ್ತಾಳೆ. ಶಿವ ಕೋಪದಲ್ಲಿ ಇಡೀ ಯಜ್ಞ ಸ್ಥಳವನ್ನು ನಾಶ ಮಾಡುವನಲ್ಲದೇ ಸತಿಯ ದೇಹವನ್ನು ಹೊತ್ತುಕೊಂಡು ಇಡೀ ವಿಶ್ವವನ್ನೇ ತಿರುಗುತ್ತಾನೆ.

ಸತಿಯನ್ನು ಕಳೆದುಕೊಂಡ ದುಃಖದಲ್ಲಿ ಲೋಕಪಾಲನೆಯನ್ನೇ ಮರೆಯುತ್ತಾನೆ ಶಿವ. ಶಿವನ ಈ ಸ್ಥಿತಿಯಿಂದ ಮುಂದಾಗುವ ಅನಾಹುತವನ್ನು ಅರಿತ ಮಹಾವಿಷ್ಣುವು ತನ್ನ ಸುದರ್ಶನ ಚಕ್ರದಿಂದ ಸತಿಯ ದೇಹವನ್ನು ವಿಭಜಿಸುತ್ತಾನೆ. ಹೀಗೆ ಬೇರೆ ಬೇರೆ ಸ್ಥಳದಲ್ಲಿ ಸತಿಯ ದೇಹ ಹೋಗಿ ಬೀಳುತ್ತದೆ ಇದನ್ನೇ ಶಕ್ತಿ ಪೀಠ ಎನ್ನಲಾಗುತ್ತದೆ. ಹೀಗಾದಾಗ ಸತಿಯ ತಲೆ ಬಿದ್ದ ಸ್ಥಳವೇ ಹಿಂಗ್ಲಾಜಾ ಮಾತಾ ಸ್ಥಳವಾಗುತ್ತದೆ. ಇಲ್ಲಿ ದೇವಿಗೆ ಸರಿಯಾದ ರೂಪವಿಲ್ಲ. ಹಿಂಗ್ಲಜಾ ಮಾತಾ ಇಲ್ಲಿ ಕುಂಕುಮದಿಂದ ಶೋಭಿಸುತ್ತಾಳೆ.

ಇನ್ನೊಂದು ಕಥೆಯ ಪ್ರಕಾರ, ತ್ರೇತಾಯುಗದಲ್ಲಿ ಸೂರ್ಯವಂಶದ ರಾಜ ವಿಚಿತ್ರನಿಗೆ ಹಿಂಗೋಳ, ಸುಂದರ ಎಂಬ ಇಬ್ಬರು ಮಕ್ಕಳು ಇರುತ್ತಾರೆ. ಇವರ ರಾಕ್ಷಸ ಪ್ರವೃತ್ತಿಯಿಂದ ಎಲ್ಲರಿಗೂ ಹಿಂಸೆ ಕೊಡಲು ಶುರುಮಾಡುತ್ತಾರೆ. ಇದರಿಂದ ಪ್ರಜೆಗಳು ಶಿವನ ಮೊರೆ ಹೋಗುತ್ತಾರೆ. ಆಗ ಶಿವನ ಆದೇಶದಂತೆ ಗಣಪತಿಯು ಸುಂದರನನ್ನು ಸಂಹಾರ ಮಾಡುತಾನೆ. ಸಹೋದರರನನ್ನು ಕಳೆದುಕೊಂಡು ದುಃಖಿತನಾದ ಹಿಂಗೋಳನು ಮತ್ತಷ್ಟು ಆರ್ಭಟಿಸುತ್ತಾನೆ. ಈ ಬಾರಿ ಶಕ್ತಿ ದೇವತೆ ಹಿಂಗೋಳನ ಸಂಹಾರಕ್ಕೆ ಮುಂದಾಗುತ್ತಾಳೆ. ದೇವಿಯು ತನ್ನ ತ್ರಿಶೂಲದಿಂದ ಹಿಂಗೋಳನನ್ನು ಸಂಹರಿಸುವುದು ಇದೇ ಗುಹೆಯಲ್ಲಿ. ಹಾಗಾಗಿ ದೇವಿಯು ಹಿಂಗೋಳಾ ದೇವಿಯಾಗಿ ಇಲ್ಲಿಯೇ ನೆಲೆಸುತ್ತಾಳೆ.

ಇನ್ನೊಂದು ಐತಿಹಾಸಿಕ ಕಥೆಯ ಪ್ರಕಾರ, ಪರಶುರಾಮನು ಕ್ಷತ್ರಿಯರನ್ನು ಸಂಹಾರ ಮಾಡುವಾಗ ಕೆಲವು ಕ್ಷತ್ರಿಯರನ್ನು ಬ್ರಾಹ್ಮಣರು ರಕ್ಷಿಸುತ್ತಾರೆ. ಅವರನ್ನ ಕ್ಷತ್ರಿಯಬ್ರಾಹ್ಮಣರು ಎಂದೇ ಕರೆಯಲಾಗುತ್ತದೆ. ಅವರ ಕುಲದೇವಿಯೇ ಈ ಹಿಂಗೋಳಾ ದೇವಿ. ಹೀಗೆ ಪಾಕಿಸ್ತಾನದಲ್ಲಿರುವ ಈ ದೇವಿಗೆ ಹಲವಾರು ಜನ್ಮರಹಸ್ಯಗಳಿವೆ.

ಇನ್ನು ಪಾಕಿಸ್ತಾನ ಸರ್ಕಾರ ಈ ದೇವಿಯನ್ನು ಪೂಜಿಸಲು ಅನುವು ಮಾಡಿಕೊಟ್ಟಿದ್ದು, ಹಿಂದುಗಳು ಮಾತ್ರವಲ್ಲದೇ ಇಲ್ಲಿನ ಸ್ಥಳೀಯ ಮುಸ್ಲಿಂರೂ ಕೂಡ ಹಿಂಗ್ಲಾಜ್ ದೇವಿಯನ್ನು ’ನಾನಿ ಕಿ ಮಂದಿರ್’ ಎಂದೇ ಪೂಜಿಸುತ್ತಾರೆ. ಇಂಥ ಕೆಲವು ಸ್ಥಳಗಳು, ಘಟನೆಗಳು ಜಾತಿ ಧರ್ಮ ಬೇಧ ಭಾವಗಳಿಗೆ ನಿಜವಾಗಿಯೂ ಅರ್ಥವೇ ಇಲ್ಲ ಎನ್ನುವುದನ್ನು ಸಾಬೀತುಪಡಿಸುತ್ತವೆ ಅಲ್ಲವೇ?

Leave A Reply

Your email address will not be published.