ಪ್ರಭಾಸ್ ನಟನೆಯ ಪ್ರಶಾಂತ್ ನೀಲ್ ನಿರ್ದೇಶನದ ಸಾಲಾರ್ ಚಿತ್ರದ ಕ್ಲೈಮಾಕ್ಸ್ ಪ್ರತಿ ಸೀನ್ ಗೆ 10 ಕೋಟಿ ಖರ್ಚಾಗಲಿದೆಯಂತೆ. ಇದರ ಬಗೆಗಿನ ಫ್ರೆಶ್ ಮಾಹಿತಿ ಇಲ್ಲಿದೆ.

272

ಪ್ರಶಾಂತ್ ನೀಲ್ ಯಾರಿಗೆ ಗೊತ್ತಿಲ್ಲ ಹೇಳಿ. ಸ್ವಲ್ಪ ಸಮಯದಲ್ಲೇ ಅತಿ ಹೆಚ್ಚು ಗೌರವ ಪಡೆದ ನಿರ್ದೇಶಕ. ತನ್ನ ವಿಭಿನ್ನವಾದ ನಿರ್ದೇಶನದ ಮೂಲಕ ಇಡೀ ವಿಶ್ವವನ್ನೇ ತನ್ನ ಸಿನೆಮಾ ಜಾಲದಲ್ಲಿ ಕೊಂಡೊಯ್ದು ಮನೋರಂಜನೆ ನೀಡಿದ ನಿರ್ದೇಶಕ ಎಂದರೆ ತಪ್ಪಾಗಲಾರದು. ಉಗ್ರಂ ಎನ್ನುವ ಸಿನೆಮಾ ಮೂಲಕ ಸ್ಯಾಂಡಲ್ವುಡ್ ಗೆ ಎಂಟ್ರಿ ಆಗಿ KGF ನ ಎರಡು ಭಾಗಗಳ ಮೂಲಕ ಇಡೀ ದೇಶವೇ ಕನ್ನಡ ಸಿನೆಮಾ ರಂಗದತ್ತ ಮುಖ ಮಾಡುವತ್ತ ಮಾಡಿದ ನಿರ್ದೇಶ ಎಂದರೆ ಅದು ಪ್ರಶಾಂತ್ ನೀಲ್.

ಇತ್ತೀಚಿನ ವರದಿಗಳ ಪ್ರಕಾರ KGF ಚಾಪ್ಟರ್ ೨ ವಿಶ್ವದಾದ್ಯಂತ ೧೨೦೦ ಕೋಟಿ ಗು ಅಧಿಕ ಕಲೆಕ್ಷನ್ ಮಾಡಿದೆ. ಈ ವರ್ಷದ ಅತಿ ಹೆಚ್ಚು ಗ್ರೋಸ್ ಕಲೆಕ್ಷನ್ ಮಾಡಿದ ಸಿನೆಮಾ ಖ್ಯಾತಿಗೂ ಪಾತ್ರ ವಾಗಿದೆ ಈ ಸಿನೆಮಾ. ಯಶ್ ನಟನೆ ಇದರಲ್ಲಿ ಎಲ್ಲರ ಮೆಚ್ಚುಗೆ ಪಡೆದಿದೆ. ಇದೀಗ KGF ಗ್ರಾಂಡ್ ಯಶಸ್ಸಿನ ನಂತರ ತೆಲುಗಿನ ಪ್ರಭಾಸ್ ಗೆ ನಿರ್ದೇಶನ ಮಾಡಲಿದ್ದಾರೆ ಪ್ರಶಾಂತ್ ನೀಲ್. ಈ ವಿಷಯ ಎಲ್ಲರಿಗು ಗೊತ್ತೇ ಇದೆ. ಇದೀಗ ಪ್ರಭಾಸ್ ಅವರ ಸಾಲಾರ್ ಚಿತ್ರದ ಬಗ್ಗೆ ಹೊಸ ಅಪ್ಡೇಟ್ ಸಿಗುತ್ತಿದೆ. ಪ್ರಭಾಸ್ ಅವರ ರಾಧೆ ಶ್ಯಾಮ್ ಎನ್ನುವ ಪಾನ್ ಇಂಡಿಯಾ ಸಿನೆಮಾ ಸೋತ ಬಳಿಕ ಎಲ್ಲರ ಗಮನ ಸಾಲಾರ್ ಮೇಲೆ ನೆಟ್ಟಿದೆ.

ಪ್ರಶಾಂತ್ ನೀಲ್ ಅವರ ಸಿನೆಮಾ ಇರುವುದು ಮಾಸ್ ಶೈಲಿಯಲ್ಲಿ ಎನ್ನುವುದು ಉಗ್ರಂ ಹಾಗು KGF ನಂತರ ಎಲ್ಲರಿಗು ಗೊತ್ತಾಗಿದೆ. ಇದೀಗ ಸಾಲಾರ್ ಕೂಡ ಅದೇ ಶೈಲಿಯಲ್ಲಿ ಇರಲಿದೆ ಎನ್ನವುದು ಪ್ರಶಾಂತ್ ನೀಲ್ ಅವರೇ ಹೇಳಿದ್ದಾರೆ. ಈಗಾಗಲೇ ಬಿಡುಗಡೆ ಮಾಡಿರುವ ಪೋಸ್ಟರ್ ನೋಡಿದರೆ ಇದು ಕೂಡ ಮಾಸ್ ಮೂವಿ ಆಗಿರಲಿದೆ. ಅದೇ ರೀತಿ ಈ ಸಿನೆಮಾದಲ್ಲಿ ಆಕ್ಷನ್ ಸೀನ್ ಕೂಡ ಅಷ್ಟೇ ಇರಲಿದೆ. ಅದೇ ಈ ಸಿನೆಮಾದ ಮುಖ್ಯ ಹೈಲೈಟ್ ಆಗಿರಲಿದೆ. ಇದೀಗ ಆ ಸಿನೆಮಾದ ಹೊಸ ರಿಪೋರ್ಟ್ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಈಗಾಗಲೇ KGF ಭಾರತಾದ್ಯಂತ ಯಶಸ್ಸು ಕಂಡಿದ್ದರಿಂದ ಸಿನೆಮಾ ತಂಡದವರು ಈ ಸಿನೆಮಾದ ಕ್ಲೈಮಾಕ್ಸ್ ಅನ್ನು ತುಂಬಾ ವಿಭಿನ್ನವಾಗಿ ನಿರ್ಮಿಸಲು ಹೊರಟಿದ್ದಾರೆ. ಪ್ರಭಾಸ್ ಅವರ ವೃತ್ತಿ ಜೀವನದಲ್ಲೇ ಇದೊಂದು ಉತ್ತಮ ಕ್ಲೈಮಾಕ್ಸ್ ಆಗಿರಲಿದೆ ಎನ್ನುತ್ತಿದ್ದಾರೆ ಅನೇಕ ವಿಶ್ಲೇಷಕರು. ಈಗಾಗಲೇ ಒಂದು ಸೀನ್ ಸಮುದ್ರದ ದಡದಲ್ಲಿ ಪೂರ್ತಿಗೊಳಿಸಲಾಗಿದೆ. ಈ ಆಕ್ಷನ್ ಟೈಮಿಂಗ್ ಸುಮಾರು ೨೦ ನಿಮಿಷಗಳದ್ದಾಗಿರಲಿದೆ. ಈ ಸೀನ್ ಗೆ ಬರೋಬ್ಬರಿ ಖರ್ಚು ಮಾಡಿದ್ದೂ 10 ಕೋಟಿ ರೂಪಾಯಿಗಳಂತೆ. ಈ ಸಿನೆಮಾ ಶೂಟಿಂಗ್ ಈ ವರ್ಷದೊಳಗೆ ಮುಗಿಸಲು ಪ್ಲಾನ್ ಮಾಡಿದ್ದರಂತೆ.

Leave A Reply

Your email address will not be published.