ಬಂಗಾರದ ಮನುಷ್ಯ ನೀರಜ್ ಚೋಪ್ರಾ ಗೆ ಬಹುಮಾನಗಳ ಸುರಿಮಳೆ. ಒಟ್ಟಾರೆ ಎಷ್ಟು ಮೊತ್ತದ ಬಹುಮಾನ ಸಿಕ್ಕಿದೆ?

1,514

ಟೋಕಿಯೋ ಒಲಿಂಪಿಕ್ ಅಲ್ಲಿ ಬಂಗಾರದ ಪದಕ ಗೆದ್ದು ಇತಿಹಾಸ ನಿರ್ಮಿಸಿದ ನೀರಜ್ ಚೋಪ್ರಾ ಗೆ ಎಲ್ಲೆಡೆಯಿಂದ ಪ್ರಶಂಸೆಯ ಸುರಿಮಳೆ ಬರುತ್ತಿದೆ. ಸ್ವಾತಂತ್ರ್ಯ ಸಿಕ್ಕ ನಂತರ ಮೊದಲ ಬಾರಿಗೆ ಅತ್ಲೆಟಿಕ್ ವಿಭಾಗದಲ್ಲಿ ಭಾರತಕ್ಕೆ ಒಲಿಂಪಿಕ್ ಅಲ್ಲಿ ಚಿನ್ನ ದೊರೆತಿದೆ. ೨೩ ವರ್ಷದ ನೀರಜ್ ಚೋಪ್ರಾ ಈ ಸಾಧನೆಗೆ ದೇಶದೆಲ್ಲೆಡೆ ಇಂದ ಬಹುಮಾನಗಳ ಮಹಾಪುರ ಹರಿದು ಬರುತ್ತಿದೆ. ಹರಿಯಾಣ ಸರಕಾರದಿಂದ ಹಿಡಿದು ಬಿಸಿಸಿಐ ವರೆಗೂ ಹಾಗು ಪಂಜಾಬ್ ಸರಕಾರ ಕೂಡ ಚೋಪ್ರಾ ಅವರಿಗೆ ಬಹುಮಾನ ಘೋಷಿಸಿದೆ.

ಒಲಿಂಪಿಕ್ ಶುರು ಆಗುವ ಮೊದಲೇ ಹರಿಯಾಣ ಸರಕಾರ ಆ ರಾಜ್ಯದಿಂದ ಭಾಗವಹಿಸುವ ಆಟಗಾರರಲ್ಲಿ ಯಾರಾದರೂ ಚಿನ್ನದ ಪದಕ ಗೆದ್ದರೆ ೬ ಕೋಟಿ ಬಹುಮಾನ ನೀಡುತ್ತೇವೆ ಎಂದು ಘೋಷಿಸಿತ್ತು. ಅದಲ್ಲದೆ ಹರಿಯಾಣದಲ್ಲಿ ಗ್ರೇಡ್ A ಸರಕಾರಿ ಕೆಲಸ ಹಾಗು ಅಲ್ಲಿನ ಪಂಚಕುಲ ಎಂಬಲ್ಲಿ ಜಾಮೀನು ಖರೀದಿ ಮಾಡುವುದಿದ್ದರೆ ೫೦% ಕಡಿಮೆ ದರದಲ್ಲಿ ನೀಡುವುದಾಗಿ ಘೋಷಿಸಿತ್ತು. ಅದೇ ರೀತಿ ಪಂಚಕುಲದಲ್ಲಿ ಹೊಸದಾಗಿ ನಿರ್ಮಿಸಲಾಗುವ ಸೆಂಟರ್ ಫಾರ್ ಎಕ್ಸೆಲೆನ್ಸಿ ಯಾ ಪ್ರಮುಖರನ್ನಾಗಿಸುವ ಘೋಷಣೆ ಮಾಡಿತ್ತು.

ಇದಲ್ಲದೆ ಪಂಜಾಬ್ ಸರಕಾರ ಕೂಡ ದೊಡ್ಡ ಮಟ್ಟದ ಘೋಷಣೆ ಮಾಡಿದೆ. ನೀರಜ್ ಚೋಪ್ರಾ ಚಿನ್ನದ ಪದಕ ಗೆಲ್ಲುವ ಮೂಲಕ ದೇಶದ ಹೆಸರು ಉಜ್ವಲ ಮಾಡಿದ್ದಾರೆ, ಅದಕ್ಕಾಗಿ ಪಂಜಾಬ್ ಸರಕಾರ ನೀರಜ್ ಚೋಪ್ರಾ ಗೆ ೨ ಕೋಟಿ ನಗದು ನೀಡುವ ಭರವಸೆ ನೀಡಿದ್ದಾರೆ. ಪಂಜಾಬ್ ರಾಜ್ಯದ ಮುಖ್ಯಮಂತ್ರಿ ಟ್ವೀಟ್ ಮೂಲಕ ನೀರಜ್ ನೀವು ಒಳುಂಪಿಕ್ ಅಲ್ಲಿ ಚಿನ್ನ ಗೆಲ್ಲುವ ಮೂಲಕ ಇಡೀ ದೇಶಕ್ಕೆ ಗೌರವ ತಂದಿದ್ದೀರಾ ಎಂದು ಹೇಳಿದ್ದಾರೆ.

ಕ್ರಿಕೆಟ್ ದೇಶದ ಅತ್ಯಂತ ಜನಪ್ರಿಯ ಆಟವಾಗಿದೆ ಹಾಗೇನೇ ಅತಿ ಶ್ರೀಮಂತ ಕ್ರಿಕೆಟ್ ಮಂಡಳಿ ಕೂಡ ಆಗಿದೆ. ಇದೆ ಕಾರಣಕ್ಕೆ ಕ್ರಿಕೆಟ್ ಮಂಡಳಿ ಪ್ರತಿ ಸಲ ಇತರ ಆಟಗಳಿಗೆ ಬೆಂಬಲ ನೀಡುತ್ತಾ ಬಂದಿದೆ. ಇದಕ್ಕಾಗಿಯೇ BCCI ನೀರಜ್ ಚೋಪ್ರಾ ಗೆ ೧ ಕೋಟಿ ನೀಡುವ ಘೋಷಣೆ ಮಾಡಿದೆ. ಇದೆ ರೀತಿ ಮಹೇಂದ್ರ ಸಿಂಗ್ ಧೋನಿ ನಾಯಕರಾಗಿರುವ ಚೆನ್ನೈ ಸೂಪರ್ ಕಿಂಗ್ಸ್ ನೀರಜ್ ಗೆ ೧ ಕೋಟಿ ನೀಡುವ ಘೋಷಣೆ ಮಾಡಿದೆ.

ವ್ಯಾಪಾರದಲ್ಲಿ ದೊಡ್ಡ ಹೆಸರು ಮಾಡಿರುವ ಆನಂದ್ ಮಹಿಂದ್ರಾ ಅವರು ನೀರಜ್ ಚೋಪ್ರಾ ಅವರು ಭಾರತಕ್ಕೆ ವಾಪಾಸ್ ಬರುವಾಗ ಅವರಿಗೆ ಮಹಿಂದ್ರಾ SUV ೭೦೦ ಕಾರ್ ಉಡುಗೊರೆಯಾಗಿ ನೀಡಲಿದ್ದಾರೆ ಎಂದು ಘೋಷಣೆ ಮಾಡಿದ್ದಾರೆ. ಅದೇ ರೀತಿ ಭಾರತದ ವಿಮಾನ ಕಂಪನಿ ಇಂಡಿಗೋ ಒಂದು ವರ್ಷ ಉಚಿತ ವಿಮಾನ ಯಾತ್ರೆ ನೀಡುವುದಾಗಿ ಘೋಷಣೆ ಮಾಡಿದೆ. ಭಾರತಕ್ಕೆ ಬಂದ ನಂತರ ಏನೆಲ್ಲಾ ಬಹುಮಾನ ಸಿಗಲಿದೆ ಎನ್ನುವುದು ಕಾಡು ನೋಡ ಬೇಕಾಗಿದೆ. ಏನೇ ಆಗಲಿ ಅವರ ಪ್ರಯತ್ನಕ್ಕೆ ಅವರಿಗೆ ಪ್ರತಿಫಲ ಸಿಕ್ಕಿದೆ.

Leave A Reply

Your email address will not be published.