ಬಡತನದಿಂದ ಪಾರಾಗಲು ಸಹಾಯ ಮಾಡಿತು ಈ ಐಡಿಯಾ. ಆರ್ಥಿಕ ಸಂಕಷ್ಟದ ನಡುವೆಯೂ‌ ಉದ್ಯಮವನ್ನು ಉತ್ತುಂಗಕ್ಕೆ ಕೊಂಡೊಯ್ದ ಕರ್ನಾಟಕದ ಈ ವ್ಯಕ್ತಿ.

1,366

ಪ್ರತೀಯೊಬ್ಬರು ಕೂಡಾ ಶ್ರೀಮಂತರಾಗಬೇಕು ಒಂದು ಸ್ವಂತ ಉದ್ಯಮವಿರಬೇಕು ಎಂದು ಕನಸು ಕಾಣುತ್ತಾರೆ. ಕೆಲವರು ತಮ್ಮ ಕನಸನ್ನು ಸಾಕಾರಗೊಳೊಸಿದರೆ ಕೆಲವರು ಅದನ್ನು ನನಸಾಗಿಸುವಲ್ಲಿ‌ ವಿಫಲರಾಗುತ್ತಾರೆ. ಇದಕ್ಕೆ ಮುಖ್ಯವಾಗಿ‌ ಬೇಕಾಗಿರುವಮನತದ್ದು ಒಂದು ಉತ್ತಮ ಉದ್ಯಮ ಐಡಿಯಾ ಹಾಗೂ‌ ಮಾಡಲೇ ಬೇಕು ಎನ್ನುವ ದೃಢವಾದ ನಿರ್ಧಾರ. ಇಂದಿನ ಈ ಪೋಸ್ಟ್ ಒಬ್ಬ ಬಡ ವ್ಯಕ್ತಿಯ ತನ್ನ ಬಡತನದಿಂದ ಸಾವಿರಾರು‌ ಕೋಟಿ ಕಂಪೆನಿಯ ಮಾಲಿಕನಾದ ಕಥೆ. ಎಲ್ಲಾ ಧರ್ಮ, ಜಾತಿ ಹಾಗು ದೇಶದ ಜನರಿಗೆ ಇಷ್ಟವಾಗುತ್ತೆ? ಐಸ್ ಕ್ರೀಂ. ಈ ಉದ್ಯಮ ಲಕ್ಷಾಂತರ ರೂಪಾಯಿ ಹಣ ಸಂಪಾದಿಸಿ ನಮಗೆ ಕೊಡುತ್ತದೆ.

ಮಕ್ಕಳಿಂದ ಹಿಡಿದು ಹಲ್ಲಿಲ್ಲದ ಮುದುಕರವರೆಗೂ ಐಸ್ ಕ್ರೀಂ ತಿನ್ನದ ಜನರಿಲ್ಲ. ಹಾಗಾಗಿ ಈ‌ ಉದ್ಯಮದಿಂದ ಹಣ ಮಾಡಬಹುದು. ಈ ಐಸ್ ಕ್ರೀಂ ಹಲವು ಬ್ರಾಂಡ್, ಕಂಪೆನಿ ಹೆಸರಲ್ಲಿ ನಾವು ನೋಡುತ್ತೇವೆ. ಕೆಲವು ನಮಗೆ ನೆನಪಿರುತ್ತದೆ. ಇಂದಿನ ದಿನಗಳಲ್ಲಿ ಶೆಕೆ ಗೆ ಈ ಐಸ್ ಕ್ರೀಂ ಬಿಟ್ಟು ಬೇರೆ ಯಾವುದಯ ಬೇಡ ಎಂದಾಗುತ್ತದೆ. ಈ ಉದ್ಯಮದಿಂದ ಎಷ್ಟು ಹಣಗಳಿಸಬುದು ಎಂದು ನಿಮಗೆ ಗೊತ್ತೆ? ಇಂದು ಮುಂಬಯಿಯಲ್ಲಿ ಒಂದು ಸಣ್ಣ ಐಸ್ ಕ್ರೀಂ ಪಾರ್ಲರ್ ತೆರೆದು ಇಂದು ದೊಡ್ಡ ಕಂಪೆನಿ ಕಟ್ಟಿದವರ ಸಕ್ಸಸ್ ಸ್ಟೋರಿ ನಿಮಗೆ ಹೇಳುತ್ತೇವೆ. ಈ ಐಸ್ ಕ್ರೀಂ ಇಂದು ಅನೇಕ ಜನರ ನೆಚ್ಚಿನ ಬ್ರಾಂಡ್ ಕೂಡಾ ಆಗಿದೆ.

ಕರ್ನಾಟಕದ ಕರಾವಳಿ ಭಾಗದ ಪುತ್ತೂರಿನ ರಘುನಂದನ್ ಶ್ರೀನಿವಾಸ್ ಕಾಮತ್ ಈ ನಾಚುರಲ್ ಐಸ್ ಕ್ರೀಂ ನ ಉತ್ಪಾದಕರು. ಈ ಕಂಪೆನಿ, ಬ್ರಾಂಡ್ ಅನ್ನು ಶುರು ಮಾಡಿದವರೂ ಇವರೆ. ರಘುನಂದನ್ ಬಡಕುಟುಂಬದವರು. ಒಂದು ಹಣ್ಣು ಮಾರುವ ಅಂಗಡಿ ಇಟ್ಟುಕೊಂಡಿದ್ದರು. ಇದರಿಂದ ಬರುವ ಹಣ ಯಾವುದಕ್ಕೂ ಸಾಲುತ್ತಿರಲಿಲ್ಲ. ಇದಲ್ಲದೆ ಇವರ ತಂದೆಗೆ ೭ ಜನ ಸಹೋದರ ಸಹೋದರಿಯರು. ಇವರ ಪೋಷಣೆ ಮಾಡುವುದೆ ಒಂದು ದೊಡ್ಡ ತಲೆಬಿಸಿಯಾಗಿತ್ತು ಇವರ ತಂದೆಗೆ. ೧೫ ನೇ ವರ್ಷದ ವಯಸ್ಸಿಗೆ ಮುಂಬಯಿಗೆ ಹೋಗಿದ್ದರು ರಘುನಂದನ್. ಅಲ್ಲಿ ಕುಟುಂಬಿಕರ ಕ್ಯಾಟರಿಂಗ್ ಉದ್ಯಮದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು. ಅಲ್ಲಿಯೇ ಒಂದು ಸಣ್ಣ ಕೋಣೆಯಲ್ಲಿ ತಮ್ಮ ಜೀವನ ಸಾಗಿಸುತ್ತಿದ್ದರು.

ತಾನು ಹೀಗೆಯೇ ಜೀವಿಸಲು ಸಾಧ್ಯವಿಲ್ಲ, ಏನಾದರೂ ವ್ಯವಹಾರ ಶುರು ಮಾಡಬೇಕು ಎಂದು ಅಂದೇ ಯೋಚಿಸಿದ್ದರು. ಅದಕ್ಕಾಗಿ ತಮ್ಮ ಕೆಲಸದಿಂದ ಬಂದ ಹಣವನ್ನು ಕೂಡಿ ಇಡುತ್ತಿದ್ದರು. ಅದೇ ರೀತಿ ಉದ್ಯಮದ ಬಗ್ಗೆ ಐಡಿಯಾ ಕೂಡಾ ಯೋಚಿಸುತ್ತಿದ್ದರು. ಒಂದು ದಿನ ಹೀಗೆ ಯೋಚಿಸುತ್ತಿರುವಾಗ, ಹಣ್ಣು ಗಳ ಪರಿಮಳ ಇರುವ ಐಸ್ ಕ್ರೀಮ್ ಸಿಗುತ್ತದೆ ಎಂದಾದರೇ, ಹಣ್ಣುಗಳಿಂದಾನೆ ಐಅ್ ಕ್ರೀಂ ಯಾಕೆ ತಯಾರಿಸಬಾರದು ಎನ್ನುವ ಕುತೂಹಲ ಹುಟ್ಟಿತು. ಈ ಐಡಿಯಾ ಇಂದ ಇವತ್ತು ದೇಶದ ದೊಡ್ಡ ಬಿಲಿಯನ್ ಡಾಲರ್ ಬಿಸಿನೆಸ್ ಆಗಿ ಮಾರ್ಪಟ್ಟಿದೆ.

೧೯೮೪ ರಲ್ಲಿ ಸ್ಟ್ರಾಬೆರಿ, ಮಾವು, ಸೇಬು ಹಾಗು ಇನ್ನಿತರ ಹಣ್ಣುಗಳಿಂದ ಒಟ್ಟು ೧೦ ಮಾದರಿಯ ಐಸ್ ಕ್ರೀಂ ತಯಾರಿಸಿದರು.‌ಇದಕ್ಕೆ ನಾಲ್ಕು ಜನರ ಸಹಾಯ ಕೂಡಾ ಪಡೆದಿದ್ದರು. ಈ ಐಸ್ ಕ್ರೀಮ್ ಜನರಿಗೆ ಬಹಳ ಇಷ್ಟವಾಯಿತು. ಇದಕ್ಕೆ ಬೇಡಿಕೆ ಕೂಡಾ ಬರಲಾರಂಭಿಸಿತು. ಇದು ರಘುನಂದನ್ ಅವರಿಗೆ ಒಂದು ಮೋಟಿವೇಶನ್ ರೀತಿ ಸಿಕ್ಕಿತು. ಆಮೇಲೆ ಇವರು ಒಂದೊಂದೆ ಹಣ್ಣಿನ ಐಸ್ ಕ್ರೀಂ ಮಾಡತೊಡಿಗಿದರು. ಒಟ್ಟಾರೆ ೧೫೦ ಪ್ಲೇವರ್ ಐಸ್ ಕ್ರೀಂ ಜನರಿಗೆ ಪರಿಚಯಿಸಿದರು. ಇಂದು ದೇಶದ ದೊಡ್ಡ ಬ್ರಮಡ್ ನ್ಯಾಚುರಲ್ ಐಸ್ ಕ್ರೀಮ್ ನ ಮಾಲಿಕರಾಗಿದ್ದಾರೆ. ಇಂದು ಇವರ ಬಳಿ ದೇಶಾದ್ಯಂತ ೧೨೫ ಸ್ಟೋರ್ ಇದೆ. ಇದರಲ್ಲಿ ೫ ಸ್ಟೋರ್ ಗಳು ಇವರದೇ ಆಗಿದೆ. ಬಾಕಿ ಉಳಿದ ಸ್ಟೋರ್‌ಗಳು ಫ್ರಾಂಚೈಸಿ ರೂಪದಲ್ಲಿ ಜನರು ನಡೆಸುತ್ತಿದ್ದಾರೆ. ಇಂದು ಇವರ ಕಂಪೆನಿ ವಾಲ್ಯುವೇಶನ್ ೩೦೦೦ ಕೋಟಿ ಗೂ ಅಧಿಕವಾಗಿದೆ.

Leave A Reply

Your email address will not be published.