ಬರೋಬ್ಬರಿ 16 ನಟಿಯಾಗಿ ನಟನೆ ಮಾಡಿದ್ದರೂ ಲಕ್ಷ್ಮಿ ರೈ ರವರ ನಿಜವಾದ ವಯಸ್ಸು ತಿಳಿದರೆ ನೀವು ನಂಬುವುದಿಲ್ಲ. ಇಷ್ಟೊಂದು ಕಡಿಮೇನಾ??

399

ನಮಸ್ಕಾರ ಸ್ನೇಹಿತರೇ ದಕ್ಷಿಣ ಭಾರತದಲ್ಲಿ ಸಾಕಷ್ಟು ನಟಿಯರು ಹಲವಾರು ಭಾಷೆಯ ಸಿನಿಮಾಗಳಲ್ಲಿ ನಟಿಸುವುದರ ಮೂಲಕ ಚಿತ್ರರಂಗದಲ್ಲಿ ಯಶಸ್ಸು ಪಡೆದಿದ್ದಾರೆ. ಇನ್ನು ಅಂತಹ ನಟಿಯರಲ್ಲಿ ಲಕ್ಷ್ಮಿ ರೈ ಕೂಡ ಒಬ್ಬರು. ಹೌದು ಅವರು ಕನ್ನಡ ಸೇರಿದಂತೆ ತೆಲುಗು, ತಮಿಳು, ಮಲಯಾಳಂ ಹಾಗೂ ಇದೀಗ ಬಾಲಿವುಡ್ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಇನ್ನು ಇವರು ನಟಿಸಿದ ಸಾಕಷ್ಟು ಸಿನಿಮಾಗಳು ಯಶಸ್ವಿ ಪ್ರದರ್ಶನಗಳನ್ನು ಕಂಡಿದೆ. ಇನ್ನು ಇವರು ಎಲ್ಲ ಚಿತ್ರರಂಗದ ಸ್ಟಾರ್ ನಟರೊಂದಿಗೆ ಸಿನಿ ಪರದೆಯನ್ನು ಹಂಚಿ ಕೊಂಡಿದ್ದಾರೆ. ಇನ್ನು ಇವರು ಬಾಲನಟಿಯಾಗಿ ಚಿತ್ರರಂಗಕ್ಕೆ ಬಂದವರು. ಬಾಲನಟಿಯಾಗಿ ಬಂದವರು ಇಂದಿನವರೆಗೂ ಕೂಡ ಚಿತ್ರರಂಗದಲ್ಲಿ ಬೇಡಿಕೆಯುಳ್ಳ ನಟಿಯಾಗಿದ್ದಾರೆ.

ಬಾಲನಟಿಯಾಗಿ ಚಿತ್ರರಂಗಕ್ಕೆ ಕಾಲಿಟ್ಟ ಲಕ್ಷ್ಮಿಯವರಿಗೆ ಹೆಸರು ತಂದುಕೊಟ್ಟಿದ್ದು ಕ್ರಿಶ್ಚಿಯನ್ ಬ್ರದರ್ಸ್ ಸಿನಿಮಾ. ನಂತರ ಕಾಂಚನ ಹಾಗೂ ವೆಂಕಟ ಪ್ರಭು ಎಂಬ ಸಿನಿಮಾಗಳು ಕೂಡ ಇವರಿಗೆ ಸಾಕಷ್ಟು ಕೀರ್ತಿಯನ್ನು ತಂದುಕೊಟ್ಟವು. ಹೀಗೆ ತಮಿಳು ಭಾಷೆಯ ಸಿನಿಮಾಗಳಲ್ಲಿ ನಟಿಸಿದ ನಂತರ ತೆಲುಗು ಹಾಗೂ ಕನ್ನಡ ಚಿತ್ರರಂಗದಲ್ಲಿ ಕೂಡ ಗುರುತಿಸಿಕೊಂಡರು. ಕನ್ನಡ ಚಿತ್ರರಂಗದಲ್ಲಿ ಅವರು ರಿಯಲ್ ಸ್ಟಾರ್ ಉಪೇಂದ್ರ ಅವರೊಂದಿಗೆ ಕಲ್ಪನಾ ಎಂಬ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಅವರು ಚಿತ್ರರಂಗಕ್ಕೆ ಕಾಲಿಟ್ಟು ಇದೀಗ 16 ವರ್ಷ ಕಳೆದಿದೆ. ಆದರೂ ಕೂಡ ಇವರು ಚಿತ್ರಂಗದಲ್ಲಿ ಬಹುಬೇಡಿಕೆಯ ನಟಿಯರ ಸಾಲಿನಲ್ಲಿ ಗುರುತಿಸಿಕೊಳ್ಳುತ್ತಾರೆ. ಇನ್ನು 16ವರ್ಷ ಚಿತ್ರರಂಗದಲ್ಲಿ ಕಳೆದಿರುವ ಇವರಿಗೆ ನಿಜವಾದ ವಯಸ್ಸು ಎಷ್ಟು ಗೊತ್ತಾ? ಹಾಗಾದರೆ ಅವರ ನಿಜವಾದ ವಯಸ್ಸನ್ನು ತಿಳಿದುಕೊಳ್ಳಲು ಇದನ್ನು ಓದಿ.

ಹೌದು ಬಹುಭಾಷಾ ತಾರೆಯಾಗಿ ಯಶಸ್ಸನ್ನು ಪಡೆದಿರುವ ನಟಿ ಲಕ್ಷ್ಮಿ ರೈ ಅವರು ಹದಿನೈದನೇ ವಯಸ್ಸಿಗೆ ಚಿತ್ರರಂಗಕ್ಕೆ ಕಾಲಿಟ್ಟರು. ಇನ್ನು ಅವರು 5 ಮೇ 1989ರಲ್ಲಿ ಕರ್ನಾಟಕದ ಬೆಳಗಾವಿ ಜಿಲ್ಲೆಯಲ್ಲಿ ಹುಟ್ಟಿದರು. ಇನ್ನು ಇದೀಗ ಅವರ ನಿಜವಾದ ವಯಸ್ಸು 32 ವರ್ಷ. ಇಷ್ಟು ವಯಸ್ಸಾದರೂ ಕೂಡ ಇನ್ನೂ ಯಂಗ್ ಅಂಡ್ ಎನರ್ಜಿಟಿಕ್ ಆಗಿ ಕಾಣಿಸಿಕೊಳ್ಳುವ ಈ ನಟಿ ಇಂದಿಗೂ ಕೂಡ ಹಲವಾರು ಚಿತ್ರಗಳಲ್ಲಿ ಬ್ಯುಸಿ ಆಗಿದ್ದಾರೆ. ಇನ್ನು ಇವರಿಗೆ ಇನ್ನಷ್ಟು ಸಿನಿಮಾಗಳಲ್ಲಿ ನಟಿಸುವ ಅವಕಾಶಗಳು ಸಿಗಲಿ ಎಂದು ಈ ಮೂಲಕ ನಾವು ಹಾರೈಸೋಣ.

Leave A Reply

Your email address will not be published.