ಬಳ್ಳಾರಿಯಲ್ಲಿ ಪುನೀತ್ ರಾಜಕುಮಾರ್ ಹೆಸರಿನಲ್ಲಿ ಬಡವರಿಗೆ ಒಳಿತಾಗುವ ಯೋಜನೆ ತರಲಿದ್ದಾರೆ ಬಿಜೆಪಿ ಮಾಜಿ ಸಚಿವ?
ಅಪ್ಪು ಅಂದರೆ ಪುನೀತ್ ರಾಜಕುಮಾರ್ ದೊಡ್ಮನೆ ಹುಡುಗ ನಮ್ಮನ್ನಗಲಿ ಈಗಾಗಲೇ ೧೧ ದಿನಗಳು ಕಳೆದಿವೆ. ರಾಜ್ಯದಲ್ಲಿ ಪುನೀತ್ ರಾಜುಕುಮಾರ್ ಹಾಗು ದೊಡ್ಮನೆ ಅಭಿಮಾನಿಗಳ ದುಃಖ ಇನ್ನು ಮುಗಿದಿಲ್ಲ. ಅಪ್ಪು ಅವರ ಹೆಸರಿನಲ್ಲಿ ಅವರ ಅಭಿಮಾನಿಗಳು ಈಗಾಗಲೇ ಸಮಾಜಕ್ಕೆ ಉತ್ತಮ ಆಗುವಂತಹ ಅನೇಕ ಯೋಜನೆಗಳನ್ನು ಮಾಡಿ ಅಪ್ಪು ಅವರಿಗೆ ಶೃದಾಂಜಲಿ ಸಲ್ಲಿಸುತ್ತಿದ್ದಾರೆ. ಆದರೆ ಬಿಜೆಪಿ ಮಾಜಿ ಸಚಿವ ಜನಾರ್ಧನ ರೆಡ್ಡಿ ಅಪ್ಪು ಅವರ ಹೆಸರಲ್ಲಿ ವಿನೂತನ ಯೋಜನೆ ಜಾರಿ ಮಾಡುವ ಕನಸನ್ನು ವ್ಯಕ್ತ ಪಡಿಸಿದ್ದಾರೆ.
ಕೆಲವು ವರ್ಷಗಳ ಹಿಂದೆ ಭ್ರಷ್ಟಾಚಾರ ಆರೋಪದಡಿ ಶಿಕ್ಷೆ ಅನುಭವಿಸಿ ತಮ್ಮ ಜೈಲು ಸೇರಿ ನಂತರ ಜಾಮೀನಿನ ಮೇಲೆ ಬಿಡುಗಡೆ ಹೊಂದಿರುವ ಜನಾರ್ಧನ ರೆಡ್ಡಿ ಅವರು ಸುಮಾರು ವರ್ಷಗಳ ಕಾಲ ತಮ್ಮ ಮನೆಗೆ ಹೋಗದೆ ಬೆಂಗಳೂರಲ್ಲೇ ಉಳಿದಿದ್ದರು. ಕೊನೆಗೂ ಸುಪ್ರೀಂ ಕೋರ್ಟ್ ಜನಾರ್ಧನ ರೆಡ್ಡಿ ಗೆ ತಮ್ಮ ಊರಾದ ಬಳ್ಳಾರಿಯ ತಮ್ಮ ಮನೆಯಲ್ಲಿ ಉಳಿಯಲು ಅನುಮತಿ ನೀಡಿದೆ. ನಟ ಅಪ್ಪು ಅವರ ಪುಣ್ಯಸ್ಮರಣೆಯ ಹಿನ್ನಲೆಯಲ್ಲಿ ಜನಾರ್ಧನ ರೆಡ್ಡಿ ಬಳ್ಳಾರಿ ಅಲ್ಲಿ ಶೀಘ್ರದಲ್ಲಿಯೇ ವಸತಿ ಶಾಲೆ ನಿರ್ಮಾಣ ಮಾಡುತ್ತೇನೆ ಎಂದು ಹೇಳಿದ್ದಾರೆ. ಅದೇ ರೀತಿ ಅರೋಗ್ಯ ಕ್ಷೇತ್ರದಲ್ಲೂ ಸೇವೆ ಸಲ್ಲಿಸುವ ಆಸೆಯನ್ನು ವ್ಯಕ್ತ ಪಡಿಸಿದ್ದಾರೆ.
ಪುನೀತ ರಾಜಕುಮಾರ್ ಕರ್ನಾಟಕದ ಅತ್ಯಂತ ದೊಡ್ಡ ಕಲಾವಿದರು. ಅವರು ಮಾಡಿದ ಸಾಮಾಜಿಕ ಸೇವೆ ಅನನ್ಯ.ರಾಜಕುಮಾರ್ ಅವರ ಚಲನಚಿತ್ರದಿಂದ ನಾವೆಲ್ಲ ನಾವೆಲ್ಲ ಸಂಸ್ಕಾರ ಕಲಿತಿದ್ದೇವೆ. ರಾಜಕುಮಾರ್ ಅವರಂತೆ ಅಪ್ಪು ಕೂಡ ಉತ್ತಮ ಚಿತ್ರ ನೀಡಿದ್ದಾರೆ. ಅವರ ಸೌಜನ್ಯ ನಡೆ ಇಡೀ ಸಮಾಜಕ್ಕೆ ಮಾದರಿ ಎಂದು ಹೇಳಿದ್ದಾರೆ.