ಬಹು ನಿರೀಕ್ಷಿತ ವಿಶ್ವಕಪ್ ಗೆ ಭಾರತ ಕ್ರಿಕೆಟ್ ತಂಡ ಘೋಷಣೆ ಮಾಡುವುದು ಯಾವಾಗ ಗೊತ್ತೇ?? ಯಾರಿಗೆಲ್ಲ ಚಾನ್ಸ್ ಸಿಗಲಿದೆ ಗೊತ್ತೇ?
ಐಸಿಸಿ ಟಿ20 ವಿಶ್ವಕಪ್ ಪಂದ್ಯಗಳು ಅಕ್ಟೋಬರ್ 16ರಂದು ಶುರುವಾಗುತ್ತಿದೆ, ಇನ್ನೇನು ಕೆಲವೇ ದಿನಗಳು ಉಳಿದಿದೆ. ಈಗಾಗಲೇ ಕೆಲವು ತಂಡಗಳು ಸದಸ್ಯರ ಲಿಸ್ಟ್ ಅನ್ನು ಬಿಡುಗಡೆ ಮಾಡಿದೆ. ಇನ್ನೇನು ಭಾರತ ತಂಡ ಸಹ ಸೆಪ್ಟೆಂಬರ್ 16ರಂದು ವಿಶ್ವಕಪ್ ಗೆ 16 ಪ್ಲೇಯರ್ ಗಳ ತಂಡವನ್ನು ಪ್ರಕಟಣೆ ಮಾಡಲಿದೆ. ಭಾರತ ತಂಡದ ಹಲವು ಸದಸ್ಯರು ಇಂಜುರಿ ಗೆ ಒಳಗಾಗಿ ತಂಡದಿಂದ ಹೊರಗುಳಿದಿದ್ದಾರೆ. ಪರಿಸ್ಥಿತಿ ಹೀಗಿರುವಾಗ, ಬಿಸಿಸಿಐ ಪ್ರಕಟಣೆ ಮಾಡುವ ತಂಡದಲ್ಲಿ ಯಾರೆಲ್ಲಾ ಇರಲಿದ್ದಾರೆ ಎನ್ನುವ ಕುತೂಹಲ ಸಹ ಶುರುವಾಗಿದೆ. ಸೆಪ್ಟೆಂಬರ್ 16ರ ಒಳಗೆ, ಅನಾರೋಗ್ಯಕ್ಕೆ ಒಳಗಾಗಿರುವ ಪ್ಲೇಯರ್ ಗಳು ಬೆಂಗಳೂರಿನ ಎನ್.ಸಿ.ಎ ನಲ್ಲಿ ಫಿಟ್ನೆಸ್ ಗೆ ಪರೀಕ್ಷೆ ಮಾಡಿಸಬೇಕಾಗಿದೆ.
ಈಗ ಎಲ್ಲರ ಗಮನ ಇರುವುದು ಬಲಿಷ್ಠ ಬೌಲರ್ ಗಳಾದ ಜಸ್ಪ್ರೀತ್ ಬುಮ್ರ ಮತ್ತು ಹರ್ಷಲ್ ಪಟೇಲ್ ಅವರ ಮೇಲೆ, ಬುಮ್ರ ಅವರಿಗೆ ಬೆನ್ನು ನೋವಾಗಿದ್ದು, ಹರ್ಷಲ್ ಪಟೇಲ್ ಅವರಿಗೆ ಪಕ್ಕೆಲುಬು ಗಾಯವಾಗಿದ್ದು, ಸೆಪ್ಟೆಂಬರ್ 16ರ ಒಳಗೆ ಇವರಿಬ್ಬರು ಚೇತರಿಸಿಕೊಂಡು ಐಸಿಸಿ ವಿಶ್ವಕಪ್ ಗೆ ಆಯ್ಕೆಯಾಗುತ್ತಾರಾ ಎಂದು ಕಾದು ನೋಡಬೇಕಿದೆ. ಆಯ್ಕೆಯ ಬಗ್ಗೆ ಮಾತನಾಡಿರುವ ಬಿಸಿಸಿಐ ಸದಸ್ಯರಲ್ಲಿ ಒಬ್ಬರು, ಶೀಘ್ರದಲ್ಲೇ ಭಾರತ ತಂಡದ ಸದಸ್ಯರ ಪಟ್ಟಿಯನ್ನು ಬಿಡುಗಡೆ ಮಾಡಲಿದೆ, ಮೊದಲು ನಮಗೆ ಹರ್ಷಲ್ ಪಟೇಲ್ ಹಾಗೂ ಜಸ್ಪ್ರೀತ್ ಬುಮ್ರ ಅವರ ಫಿಟ್ನೆಸ್ ಬಗ್ಗೆ ಅಪ್ಡೇಟ್ ಸಿಗಬೇಕು. ಜಸ್ಪ್ರೀತ್ ಬುಮ್ರ ಈ ವಾರವೇ ಫಿಟ್ನೆಸ್ ಟೆಸ್ಟ್ ಮಾಡಿಸಲಿದ್ದಾರೆ..ಎಂದು ಹೇಳಿದ್ದಾರೆ.
ಸಧ್ಯಕ್ಕೆ ಸಿಕ್ಕಿರುವ ಮಾಹಿತಿಯ ಪ್ರಕಾರ, ಹರ್ಷಲ್ ಪಟೇಲ್ ಅವರು ಫಿಟ್ ಆಗಿದ್ದು, ವಿಶ್ವಕಪ್ ಗೆ ಆಯ್ಕೆಯಾಗುತ್ತಾರೆ ಎನ್ನಲಾಗಿದ್ದು, ಹರ್ಷಲ್ ಅವರು ಈಗಾಗಲೇ ಪ್ರಾಕ್ಟೀಸ್ ಸಹ ಶುರುಮಾಡಿದ್ದಾರೆ. ಆದರೆ ಬುಮ್ರ ಅವರ ಬಗ್ಗೆ ಇನ್ನೂ ಸರಿಯಾದ ಮಾಹಿತಿ ಸಿಕ್ಕಿಲ್ಲ. ಇತ್ತ ರವೀಂದ್ರ ಜಡೇಜಾ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಕಾರಣ, ವಿಶ್ವಕಪ್ ಇಂದ ಹೊರಬಿದ್ದಿದ್ದಾರೆ, ಇದರಿಂದಾಗಿ ಮಾಜಿ ಆಟಗಾರ ಮೊಹಮ್ಮದ್ ಶಮಿ ಅವರು ಅವಕಾಶ ಸಿಗುವ ಸಂಭವ ಹೆಚ್ಚಿದೆ. ಟಿ20 ವಿಶ್ವಕಪ್ ಗೆ ತಂಡಗಳ ಹೆಸರು ನೀಡಲು ಸೆಪ್ಟೆಂಬರ್ 16 ಕೊನೆಯ ದಿನಾಂಕ ಆಗಿದ್ದು, ಅದಕ್ಕಿಂತ ಮೊದಲು ಬಿಸಿಸಿಐ ಆಫೀಸರ್ ಗಳು ಕ್ಯಾಪ್ಟನ್ ರೋಹಿತ್ ಶರ್ಮಾ ಹಾಗೂ ಕೋಚ್ ರಾಹುಲ್ ದ್ರಾವಿಡ್ ಅವರೊಡನೆ ಚರ್ಚೆ ನಡೆಸಬೇಕಿದೆ. ಈಗ ಇಂಗ್ಲೆಂಡ್, ದಕ್ಷಿಣ ಆಫ್ರಿಕಾ ಹಾಗೂ ಆಸ್ಟ್ರೇಲಿಯಾ ತಂಡವನ್ನು ಪ್ರಕಟಣೆ ಮಾಡಿದೆ.