ಬಾಕ್ಸ್ ಆಫೀಸ್ ನಲ್ಲಿ ದೂಳೆಬ್ಬಿಸುತ್ತಿರುವ ಕಾಂತಾರ ಸಿನೆಮಾ ಕಲೆಕ್ಷನ್ ಬಗ್ಗೆ ಅಸಲಿ ಸತ್ಯ ಬಾಯ್ಬಿಟ್ಟ ಕಾರ್ತಿಕ್ ಗೌಡ. ಹೇಳಿದ್ದೇನು ಗೊತ್ತೇ??
ರಿಷಬ್ ಶೆಟ್ಟಿ ಅವರು ರಚಿಸಿ, ನಿರ್ದೇಶಿಸಿ, ನಾಯಕನಾಗಿ ನಟನೆ ಮಾಡಿ, ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ನಿರ್ಮಾಣ ಮಾಡಿರುವ ಕಾಂತಾರ ಸಿನಿಮಾ ಸೆಪ್ಟೆಂಬರ್ 30ರಂದು ಬಿಡುಗಡೆಯಾಗಿ, ವಿಶ್ವಮಟ್ಟದಲ್ಲಿ ಒಳ್ಳೆಯ ಪ್ರದರ್ಶನ ಕಾಣುತ್ತಿದೆ, ಕರ್ನಾಟಕದ ಹಲವೆಡೆ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಕರಾವಳಿ ವಿಭಾಗದ ಭೂತಕೋಲ ಮತ್ತು ದೈವ ನರ್ತನದ ಬಗ್ಗೆ ಮಾಡಿರುವ ಕಥೆ ಕಾಂತಾರ ಸಿನಿಮಾ ಸಿನಿಪ್ರಿಯರಿಗೆ ಬಹಳ ಇಷ್ಟವಾಗಿದೆ. ಕನ್ನಡದಲ್ಲಿ ಇಂತಹ ಅದ್ಭುತ ಸಿನಿಮಾಗಳು ಬರಬೇಕು ಎಂದು ಸಿನಿಪ್ರಿಯರು ಹೇಳುತ್ತಿದ್ದಾರೆ.
ಸಿನಿಮಾ ಬಿಡುಗಡೆಯಾದ ಮೊದಲ ದಿನಕ್ಕಿಂತ ಎರಡನೇ ದಿನಕ್ಕೆ ಹೆಚ್ಚು ಶೋಗಳು ಹೌಸ್ ಫುಲ್ ಬೋರ್ಡ್ ಗಳು ಕಾಣುತ್ತಿದೆ. ಕರ್ನಾಟಕದಲ್ಲಿ ಮಾತ್ರವಲ್ಲದೆ ಓವರ್ ಸೀಸ್ ನಲ್ಲಿ ಒಳ್ಳೆಯ ಪ್ರದರ್ಶನ ಕಾಣುತ್ತಿದೆ. ಸಿನಿಪ್ರಿಯರು, ಸಿನಿಮಾ ಮುಗಿದ ಬಳಿಕ ಕಾಂತಾರ ಗುಂಗಿನಿಂದ ಹೊರಬರಲು ಆಗುತ್ತಿಲ್ಲ ಎಂದು ಹೇಳುತ್ತಿದ್ದಾರೆ. ಸಿನಿಮಾ ಬಿಡುಗಡೆಯಾದ ಮರುದಿನ ಚಿತ್ರತಂಡ ಸಕ್ಸಸ್ ಮೀಟ್ ಏರ್ಪಡಿಸಿತ್ತು. ಅದರಲ್ಲಿ ನಾಯಕ ರಿಷಬ್ ಶೆಟ್ಟಿ, ನಾಯಕಿ ಸಪ್ತಮಿ ಗೌಡ, ಪ್ರಮೋದ್ ಶೆಟ್ಟಿ, ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಗೌಡ ಹಾಗು ಇನ್ನಿತರರು ಬಂದಿದ್ದರು. ಆಗ ಕಾರ್ತಿಕ್ ಗೌಡ ಅವರು ಮಾತನಾಡಿ, ಸಿನಿಮಾದ ಕಲೆಕ್ಷನ್ ಬಗ್ಗೆ ಮಾತನಾಡಿದ್ದಾರೆ..
ವಿಜಯ್ ಕಿರಗಂದೂರ್ ಅವರ ಪರವಾಗಿ ನಾನು ಇಲ್ಲಿಗೆ ಬಂದಿರುವುದಾಗಿ ಹೇಳಿದ ಕಾರ್ತಿಕ್ ಅವರು ಇಡೀ ಚಿತ್ರತಂಡಕ್ಕೆ ಧನ್ಯವಾದ ತಿಳಿಸಿದರು. ಬಳಿಕ ಕಲೆಕ್ಷನ್ ಬಗ್ಗೆ ಮಾತನಾಡಿ, “ನಾವು ನಿರೀಕ್ಷೆ ಮಾಡಿದ್ದಕ್ಕಿಂತ ಹೆಚ್ಚಾಗಿ ಬುಕಿಂಗ್ ಮತ್ತು ರನ್ ನಡೆಯುತ್ತಿದೆ. ರಿಷಬ್ ಶೆಟ್ಟಿ ಅವರ ಕೆರಿಯರ್ ನಲ್ಲಿ ಇದು ಅತಿ ಹೆಚ್ಚು ಕಲೆಕ್ಷನ್ ಮಾಡಿರುವ ಸಿನಿಮಾ, ನಂಬರ್ ಹೇಳುವುದಿಲ್ಲ..” ಎಂದು ನಗುತ್ತಾ ಹೇಳಿದ್ದಾರೆ ಕಾರ್ತಿಕ್. ಇನ್ನು ಸಿನಿಮಾ ಕಲೆಕ್ಷನ್ ಬಗ್ಗೆ ಮಾಹಿತಿ ಸಿಕ್ಕಿತ್ತು, ಎರಡನೆಯ ದಿನ ಸುಮಾರು 10 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ, ಭಾನುವಾರದ ದಿನ ಇನ್ನು ಹೆಚ್ಚು ಕಲೆಕ್ಷನ್ ಮಾಡಿದೆ ಎಂದು ಮಾಹಿತಿ ಸಿಕ್ಕಿದೆ.