ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚಾಗಿ ಸುದ್ದಿಯಾಗುತ್ತಿರುವುದು ನಟಿ ಮಹಾಲಕ್ಷ್ಮಿ ಮತ್ತು ನಿರ್ಮಾಪಕ ರವೀಂದರ್ ಚಂದ್ರಶೇಖರ್ ಮದುವೆ ವಿಚಾರ. ಇವರ ಮದುವೆ ಬಗ್ಗೆ ಸಾಕಷ್ಟು ಮಾತುಗಳು ಕೇಳಿಬಂದವು, ಅದಕ್ಕೆ ಕಾರಣ ಅಷ್ಟು ಸುಂದರವಾಗಿರುವ ನಟಿ ಮಹಾಲಕ್ಷ್ಮಿ ಇಷ್ಟು ದಪ್ಪಗಿರುವ ರವೀಂದರ್ ಅವರನ್ನು ಹೇಗೆ ಒಪ್ಪಿಕೊಂಡರು ಎನ್ನುವುದಾಗಿದೆ. ಇವರಿಬ್ಬರಿಗೂ ಇದು ಎರಡನೇ ಮದುವೆ ಎನ್ನುವುದು ಹಲವರಿಗೆ ಗೊತ್ತಿರದ ವಿಚಾರ. ರವೀಂದರ್ ಅವರು 2013ರಲ್ಲಿ ಶಾಂತಿ ಎನ್ನುವವರ ಜೊತೆಗೆ ಮದುವೆಯಾಗಿ, ಭಿನ್ನಾಭಿಪ್ರಾಯಗಳ ಕಾರಣ ಆಕೆಗೆ ವಿಚ್ಛೇದನ ನೀಡಿದ್ದಾರೆ. ಮಹಾಲಕ್ಷ್ಮಿ ಸಹ ಅನಿಲ್ ಅವರೊಡನೆ ಮದುವೆಯಾಗಿ ನಂತರ ಅವರಿಗೆ ವಿಚ್ಛೇದನ ನೀಡಿದರು. ಇದೀಗ ಈ ಜೋಡಿಯ ಮದುವೆಯಾಗಿ ಆರೇ ದಿನಕ್ಕೆ ಇವರ ಬಗ್ಗೆ ಶಾಕಿಂಗ್ ವಿಚಾರಗಳು ಬೆಳಕಿಗೆ ಬರುತ್ತಿವೆ..
ಮಹಾಲಕ್ಷ್ಮಿ ಅವರು ಇಂತಹ ಹುಡುಗನನ್ನು ಒಪ್ಪಿ ಮದುವೆಯಾಗಲು ಕಾರಣವಾದರು ಏನು ಎನ್ನುವುದೇ ಎಲ್ಲರ ಪ್ರಶ್ನೆ. ಸೋಷಿಯಲ್ ಮೀಡಿಯಾದಲ್ಲಿ ಈ ಮದುವೆ ಬಗ್ಗೆ ಅತಿರೇಖದ ಕಮೆಂಟ್ಸ್ ಗಳು ಸಹ ಬರುತ್ತಿವೆ. ಜೊತೆಗೆ ಈ ರವೀಂದರ್ ಚಂದ್ರಶೇಖರ್ ಯಾರು ಎನ್ನುವ ಚರ್ಚೆ ಸಹ ಶುರುವಾಗಿದೆ. ರವೀಂದರ್ ಚಂದ್ರಶೇಖರ್ 2013ರಲ್ಲಿ ಚಿತ್ರರಂಗಕ್ಕೆ ಬಂದರು. ನಿರ್ಮಾಪಕನಾಗಿ ಐದಾರು ಸಿನಿಮಾಗಳನ್ನು ಮಾಡಿದ್ದಾರೆ, ಲಿಬ್ರಾ ಪ್ರೊಡಕ್ಷನ್ ಸಂಸ್ಥೆ ಇವರದ್ದೇ ಆಗಿದೆ. ರವೀಂದರ್ ಅವರು ಯೂಟ್ಯೂಬ್ ಚಾನೆಲ್ ಸಹ ಹೊಂದಿದ್ದು, social media influencer ಸಹ ಆಗಿದ್ದಾರೆ. ತಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ಆರೋಗ್ಯಕರವಾಗಿ ದೇಹವನ್ನು ಹೇಗೆ ಇಟ್ಟುಕೊಳ್ಳಬೇಕು ಎಂದು ಹೇಳಿಕೊಡುತ್ತಾರೆ ರವೀಂದರ್.
ಅಷ್ಟೇ ಅಲ್ಲದೆ, ರವೀಂದರ್ ಅವರ ಆಸ್ತಿ ಮೊತ್ತ ಸಹ ಸೋಷಿಯಲ್ ಮೀಡಿಯಾದಲ್ಲಿ ಲೀಕ್ ಆಗಿತ್ತು, ರವೀಂದರ್ ಅವರು ಸುಮಾರು 20 ಕೋಟಿ ಆಸ್ತಿ ಹೊಂದಿದ್ದಾರೆ ಎನ್ನಲಾಗುತ್ತಿದೆ. ಜೊತೆಗೆ, ರವೀಂದರ್ ಅವರು ನಿರ್ದೇಶಕ ಹಾಗೂ ನಟ ಸಹ ಹೌದು. ಇವರಿಗೆ ಆರೋಗ್ಯದಲ್ಲಿ ಸಹ ಕೆಲವು ಸಮಸ್ಯೆಗಳಿದ್ದು, ಆಯುಷ್ಯ ಕಡಿಮೆ ಇದೆ ಎನ್ನುವ ಕಾರಣಕ್ಕೆ ಅವರ ಆಸೆಯನ್ನು ಪೂರೈಸಲು ಮಹಾಲಕ್ಷ್ಮಿ ಅವರು ಮದುವೆ ಆಗಿದ್ದಾರೆ ಎನ್ನುವ ಮಾತುಗಳು ಸಹ ಕೇಳಿಬರುತ್ತಿದೆ. ಆದರೆ ಈ ವಿಷಯಗಳಲ್ಲಿ ಎಷ್ಟರ ಮಟ್ಟಿಗೆ ಸತ್ಯಾಂಶ ಇದೆ ಎನ್ನುವುದು ಮಾತ್ರ ಖಚಿತವಾಗಿಲ್ಲ. ಒಟ್ಟಿನಲ್ಲಿ ಇವರಿಬ್ಬರ ಮದುವೆ ಸುದ್ದಿ ಈಗ ಟಾಕ್ ಆಫ್ ದಿ ಟೌನ್ ಆಗಿದೆ.