ಬಿಗ್ ನ್ಯೂಸ್: ಇನ್ನು ಮುಂದೆ ಅಡುಗೆ ಎಣ್ಣೆ ಬೆಲೆ ಆಗಲಿದೆ ಕಡಿಮೆ: ಈ ಬಾರಿ ದೊಡ್ಡದಾಗಿಯೇ ಬೆಲೆ ಕಡಿಮೆ: ಎಷ್ಟು ಆಗುತ್ತದೆ ಗೊತ್ತೇ??
ಪ್ರಪಂಚದಲ್ಲಿ ಕರೊನಾ ಮತ್ತು ರಷ್ಯಾ ಉಕ್ರೇನ್ ಸಮಸ್ಯೆಗಳಿಂದ ಎಲ್ಲಾ ಅಗತ್ಯ ವಸ್ತುಗಳ ಬೆಲೆ ಹೆಚ್ಚಾಗಿತ್ತು. ಭಾರತದಲ್ಲಿ ಅಡುಗೆ ಎಣ್ಣೆಯ ಬೆಲೆ ಬಹಳ ಹೆಚ್ಚಾಗಿ, ಜನಸಾಮಾನ್ಯರು ಅಡುಗೆ ಎಣ್ಣೆ ಖರೀದಿ ಮಾಡಿ ಬಳಸುವುದು ಕಷ್ಟವೆ ಆಗಿತ್ತು. ಆದರೆ ಇದೀಗ ಸಿಕ್ಕಿರುವ ಮಾಹಿತಿಯ ಪ್ರಕಾರ ವಿಶ್ವದಲ್ಲಿ ಆಮದು ಬೆಲೆಯ ಟ್ಯಾಕ್ಸ್ ಕಡಿಮೆ ಮಾಡಿ, ಬೆಲೆಯಲ್ಲಿ ಇಳಿಕೆ ಕಂಡುಬಂದಿರುವುದರಿಂದ ಭಾರತದಲ್ಲಿ ತೈಲದ ಬೆಲೆಯಲ್ಲಿ ಇಳಿಕೆ ಕಂಡಿದೆ. ಜಾಗತಿಕವಾಗಿ ಬೆಲೆಯಲ್ಲಿ ಇಳಿಕೆ ಆಗಿರುವ ಲಾಭವನ್ನು ದೇಶದ ಜನರಿಗೆ ನೀಡಬೇಕೆಂದು ಆಹಾರ ಸಚಿವಾಲಯ ಎಲ್ಲಾ ಕಂಪನಿಗಳಿಗೆ ನಿರ್ದೇಶನ ನೀಡಿದೆ
ಅಡುಗೆ ಎಣ್ಣೆಯ ಬೆಲೆ ಕಡಿಮೆ ಮಾಡಲು, ಕೇಂದ್ರ ಸರ್ಕಾರ ಅಡುಗೆ ಎಣ್ಣೆ ಮೇಲೆ ವಿಧಿಸಿದ್ದ ಕಸ್ಟಮ್ ಶುಲ್ಕವನ್ನು ಕಡಿತಗೊಳಿಸಲು ನಿರ್ದೇಶನ ನೀಡಿದ್ದು, ಈ ವಿನಾಯಿತಿಗಳನ್ನು ಇನ್ನು 6 ತಿಂಗಳವರೆಗೂ ವಿಸ್ತರಿಸಿದೆ ಎಂಡಿ ಹಣಕಾಸು ಸಚಿವಾಲಯದಿಂದ ತಿಳಿದುಬಂದಿದೆ. ಈಗಿರುವ ವಿನಾಯಿತಿ ಮಾರ್ಚ್ 31, 2023ರ ವರೆಗೂ ಇರಲಿದೆ. ದೇಶೀಯ ಪೂರೈಕೆ ಹೆಚ್ಚಿಸಿ, ಬೆಲೆ ನಿಯಂತ್ರಣ ಮಾಡಲು ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಸ್ಪಷ್ಟನೆ ಸಿಕ್ಕಿದೆ. 20121ರ ಆಕ್ಟೊಬರ್ ತಿಂಗಳಿನಲ್ಲಿ ನಮ್ಮ ದೇಶದಿಂದ ಆಮದು ಮಾಡುವ ಅಡುಗೆ ತೈಲದ ಕಸ್ಟಮ್ ಶುಲ್ಕ ಹಾಗೂ ಅಭಿವೃದ್ಧಿ ಸೆಸ್ ಗಳನ್ನು ಮನ್ನಾ ಮಾಡಲಾಗುತ್ತದೆ ಎಂದು ಕೇಂದ್ರ ಸರ್ಕಾರ ತಿಳಿಸಿತ್ತು. ನಂತರ 2022ರ ಮಾರ್ಚ್ ವರೆಗೂ ವಿನಾಯಿತಿ ವಿಸ್ತರಿಸಿತು, ಬಳಿಕ 2022ರ ಸೆಪ್ಟೆಂಬರ್ ವರೆಗೂ ವಿನಾಯಿತಿಯನ್ನು ವಿಸ್ತರಿಸಿತು, ಈಗ 6 ತಿಂಗಳವರೆಗೂ ಕಸ್ಟಮ್ ಡ್ಯೂಟಿ ಕಡಿತಗೊಳಿಸುವುದಾಗಿ ಹೇಳಿದೆ.
ಸಾಲ್ವೆಂಟ್ ಎಕ್ಸ್ಟ್ರಾಕಟರ್ಸ್ ಅಸೋಸಿಯೇಶನ್ ಆಫ್ ಇಂಡಿಯಾ ಈ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದೆ, ಕಚ್ಚಾ ತಾಳೆ ಎಣ್ಣೆ, ಆರ್.ಬಿ.ಡಿ ಪಾಮೊಲಿನ್, ಆರ್.ಬಿ.ಡಿ ಪಾಮ್ ಎಣ್ಣೆ, ಕಚ್ಚಾ ಸೋಯಾಬೀನ್ ಎಣ್ಣೆ, ಸಂಸ್ಕರಿಸಿದ ಸೋಯಾಬೀನ್ ಎಣ್ಣೆ, ಕಚ್ಚಾ ಸೂರ್ಯಕಾಂತಿ ಎಣ್ಣೆ ಮತ್ತು ಸಂಸ್ಕರಿಸಿದ ಸೂರ್ಯಕಾಂತಿ ಎಣ್ಣೆಯ ಮೇಲಿನ ಸುಂಕ ಮಾರ್ಚ್ 2023ರ ವರೆಗೂ ಇರುತ್ತದೆ ಎಂದು ತಿಳಿಸಿದೆ. ಭಾರತ ದೇಶವು ಶೇ.60 ರಷ್ಟು ಖಾದ್ಯ ತೈಲವನ್ನು ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳುತ್ತದೆ, ಮಲೇಷಿಯಾ, ಇಂಡೋನೇಷಿಯಾ, ಅರ್ಜೆಂಟಿನ ಹಾಗೂ ಉಕ್ರೇನ್ ದೇಶಗಳಿಂದ ಆಮದು ಮಾಡಿಕೊಳ್ಳುತ್ತದೆ.
ಕೆಲ ಸಮಯದಿಂದ ಆಮದು ಬೆಲೆ ಹೆಚ್ಚಾಗಿದ್ದ ಕಾರಣ, ಚಿಲ್ಲರೆಯ ಬೆಲೆಗಳು ಸಹ ಒತ್ತಡಕ್ಕೆ ಒಳಗಾಗಿದೆ. ಆದರೆ ಈಗ ಬೆಲೆಯಲ್ಲಿ ಇಳಿಕೆಯಾಗಿದೆ. ಇಷ್ಟೆಲ್ಲಾ ಕ್ರಮಗಳನ್ನು ತೆಗೆದುಕೊಂಡಿದ್ದರು ಸಹ, ಬೆಲೆ ಇನ್ನು ಜಾಸ್ತಿಯೇ ಇದೆ, ಸೆಪ್ಟೆಂಬರ್ 1ರಂದು, ಕಡಲೆಕಾಯಿ ಎಣ್ಣೆಯ ಬೆಲೆ 1ಕೆಜಿಗೆ ₹188.04 ರೂಪಾಯಿಗಳು, ಸಾಸಿವೆ ಎಣ್ಣೆ 1ಕೆಜಿ ಬೆಲೆ ₹172.66 ರೂಪಾಯಿ ಆಗಿದೆ, ಡಾಲ್ಡಾ 1ಕೆಜಿ ಬೆಲೆ ₹152.2 ರೂಪಾಯಿ, ಸೋಯಾಬೀನ್ ಎಣ್ಣೆ 1ಕೆಜಿಗೆ ₹156 ರೂಪಾಯಿ, ಸೂರ್ಯಕಾಂತಿ ಎಣ್ಣೆಯ ಬೆಲೆ 1ಕೆಜಿಗೆ ₹176.45 ರೂಪಾಯಿಗಳು, ತಾಳೆ ಎಣ್ಣೆ 1ಕೆಜಿಗೆ ₹132.94 ರೂಪಾಯಿಗಳು ಆಗಿದೆ.