ಬಿಗ್ ನ್ಯೂಸ್: ಮಾಸ್ಟರ್ ಪ್ಲಾನ್ ಮಾಡಿದ ಕೊಹ್ಲಿ: ಫಾರ್ಮ್ ಗೆ ಮರಳಲು ಅದೊಂದೇ ಅಸ್ತ್ರ: ಏನು ಗೊತ್ತೇ??
ನಮಸ್ಕಾರ ಸ್ನೇಹಿತರೇ ವಿರಾಟ್ ಕೊಹ್ಲಿ ಭಾರತ ಕ್ರಿಕೆಟ್ ತಂಡ ಕಂಡ ಕಿಂಗ್ ಕೊಹ್ಲಿ. ದಶಕಗಳ ಕಾಲ ಭಾರತ ತಂಡದ ಆಧಾರಸ್ತಂಭವಾಗಿ ಹಲವಾರು ಪಂದ್ಯಗಳನ್ನು ಗೆಲ್ಲಿಸಿದ್ದವರು. ಚೇಸಿಂಗ್ ಸಂದರ್ಭದಲ್ಲಿ ಅನೇಕ ದಾಖಲೆಗಳನ್ನು ನಿರ್ಮಿಸಿದವರು. ಮೂರು ಮಾದರಿಯ ಕ್ರಿಕೆಟ್ ನಲ್ಲಿ ಭಾರತ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿ, ನಂಬರ್ ೧ ತಂಡವನ್ನಾಗಿಸಿದ ಕೀರ್ತಿ ವಿರಾಟ್ ಗೆ ಸಲ್ಲುತ್ತದೆ. ಆದರೇ ಕಳೆದ ವರ್ಷ ಏಕಾಏಕಿ ವಿರಾಟ್ ಕೊಹ್ಲಿ ಟಿ 20 ತಂಡದ ನಾಯಕತ್ವಕ್ಕೆ ರಾಜೀನಾಮೆ ನೀಡಿದರು. ಆ ನಂತರ ಬಿಸಿಸಿಐ ಏಕಾಏಕಿ ವಿರಾಟ್ ಕೊಹ್ಲಿಯನ್ನು ಏಕದಿನ ತಂಡದ ನಾಯಕತ್ವದಿಂದ ಕೆಳಗಿಳಿಸಿತು.
ಆ ನಂತರ ಟೆಸ್ಟ್ ತಂಡದ ನಾಯಕತ್ವಕ್ಕೂ ಸಹ ವಿರಾಟ್ ಕೊಹ್ಲಿ ರಾಜೀನಾಮೆ ನೀಡಿದರು. ಆದರೇ ವಿಪರ್ಯಾಸವೆಂಬಂತೆ ನಾಯಕತ್ವದಿಂದ ಇಳಿದ ವಿರಾಟ್ ಕೊಹ್ಲಿಯವರ ಬ್ಯಾಟ್ ಕೂಡ ಸದ್ದು ಮಾಡುತ್ತಿಲ್ಲ. ಹೀಗಾಗಿ ಸದ್ಯ ವಿರಾಟ್ ಕೊಹ್ಲಿ ಕಳಪೆ ಫಾರ್ಮ್ ನಿಂದ ಹೊರಗೆ ಬರಲು ಅದ್ಭುತ ಐಡಿಯಾವೊಂದನ್ನು ಹಾಕಿಕೊಂಡಿದ್ದಾರೆ. ಬನ್ನಿ ಆ ಐಡಿಯಾ ಯಾವುದು ಎಂಬುದನ್ನು ತಿಳಿಯೋಣ. ಕಳೆದ ವರ್ಷ ಹಾರ್ದಿಕ್ ಪಾಂಡ್ಯ ಸಹ ತಮ್ಮ ವೃತ್ತಿ ಜೀವನದ ಅತ್ಯಂತ ಕಳಪೆ ಫಾರ್ಮ್ ನಲ್ಲಿದ್ದರು.
ವೆಂಕಟೇಶ್ ಅಯ್ಯರ್ ತಂಡದೊಳಗೆ ಬಂದ ನಂತರ ಎಲ್ಲರೂ ಪಾಂಡ್ಯ ಕೆರಿಯರ್ ಮುಗಿದೆ ಹೋಯಿತು ಎಂದು ಮಾತನಾಡಿದ್ದರು. ಆದರೇ ಕ್ರಿಕೆಟ್ ನಿಂದ ಐದು ತಿಂಗಳ ಬಿಡುವು ಪಡೆದ ಪಾಂಡ್ಯ ನಂತರ ಅದ್ಭುತ ರೀತಿಯಲ್ಲಿ ಕಮ್ ಬ್ಯಾಕ್ ಮಾಡಿದರು. ಈಗ ವಿರಾಟ್ ಕೊಹ್ಲಿ ಸಹ ಪಾಂಡ್ಯ ರೀತಿಯಲ್ಲಿಯೇ ಪ್ಲಾನ್ ಮಾಡಿದ್ದಾರೆ. ಇಂಗ್ಲೆಂಡ್ ಸರಣಿ ಮುಗಿದ ಬಳಿಕ ಲಂಡನ್ ನಲ್ಲಿಯೇ ಉಳಿಯಲಿರುವ ವಿರಾಟ್ ಪತ್ನಿ ಅನುಷ್ಕಾ ಹಾಗೂ ಮಗಳು ವಮಿಕಾ ಜೊತೆ ಕಾಲ ಕಳೆಯುವ ಮೂಲಕ ತಮ್ಮ ಮನಃಶಾಂತಿಯನ್ನು ಪಡೆದು ಪುನಃ ಏಷ್ಯಾ ಕಪ್ ವೇಳೆ ತಂಡಕ್ಕೆ ವಾಪಸ್ ಆಗುವುದು ಎಂದು ನಿರ್ಧರಿಸಿದ್ದಾರಂತೆ. ಈ ಮೂಲಕವಾದರೂ ತಮ್ಮ ನೆಚ್ಚಿನ ಆಟಗಾರ ವಿರಾಟ್ ಕೊಹ್ಲಿ ಫಾರ್ಮ್ ಗೆ ಮರಳಲಿ ಎಂಬುದು ಅಭಿಮಾನಿಗಳ ಆಸೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ.