ಬಿಗ್ ನ್ಯೂಸ್: ಸಮಂತಾ ವಿಚಾರಕ್ಕೆ ಮೊದಲ ಬಾರಿಗೆ ಎಂಟ್ರಿ ಕೊಟ್ಟ ಸಮಂತಾ ತಂದೆ: ಕೊನೆಗೂ ಹೊಸ ಅಧ್ಯಾಯದ ಸಮಯ ಬಂತೆ ಬಿಡ್ತೆ?? ತಂದೆ ಹೇಳಿದ್ದೇನು ಗೊತ್ತೇ??
ನಟಿ ಸಮಂತಾ ಮತ್ತು ನಟ ನಾಗಚೈತನ್ಯ ಅವರ ಸುಂದರ ಸಂಸಾರ ಈಗ ಕನಸು. ಇವರಿಬ್ಬರು ಲವ್ ಬರ್ಡ್ಸ್ ಗಳ ಹಾಗೆ ಇದ್ದ ಜೋಡಿ, ಐದಾರು ವರ್ಷಗಳು ಪ್ರೀತಿಸಿ, ಎರಡು ಕುಟುಂಬದವರನ್ನು ಒಪ್ಪಿಸಿ ಬಹಳ ಅನ್ಯೋನ್ಯವಾಗಿದ್ದ ಜೋಡಿ ಇದ್ದಕ್ಕಿದ್ದ ವಿಚ್ಛೇದನ ತೆಗೆದುಕೊಳ್ಳುವ ನಿರ್ಧಾರ ಮಾಡಿದ್ದು ಅವರಿಬ್ಬರ ಕುಟುಂಬದವರಿಗೆ ಮಾತ್ರವಲ್ಲದೆ, ಅಭಿಮಾನಿಗಳಿಗೂ ಸಹ ದೊಡ್ಡ ಶಾಕ್ ನೀಡಿತ್ತು. ಈಗಲೂ ಸಹ ಇವರಿಬ್ಬರು ದೂರ ಆಗಿದ್ದಕ್ಕೆ ಕಾರಣ ಏನು ಎಂದು ಸ್ಪಷ್ಟವಾಗಿ ತಿಳಿದುಬಂದಿಲ್ಲ. ಆಗಾಗ ಈ ಜೋಡಿಯ ಜೀವನದ ಬಗ್ಗೆ ಚರ್ಚೆ ಆಗುತ್ತಲೇ ಇರುತ್ತದೆ.
ಇವರಿಬ್ಬರ ತಂದೆ ತಾಯಿ ಹಾಗೂ ಕುಟುಂಬಕ್ಕೆ ಈ ವಿಚಾರ ಶಾಕ್ ಹಾಗೂ ನೋವು ನೀಡಿತ್ತು. ಸಮಂತಾ ಅವರ ತಂದೆ ಜೋಸೆಫ್ ಪ್ರಭು ಅವರು ಮಗಳ ವಿಚ್ಛೇದನದ ಬಗ್ಗೆ ಮಾತನಾಡಿ, ಬೇಸರ ವ್ಯಕ್ತಪಡಿಸಿದ್ದರು, ಅವರಿಬ್ಬರ ಸಂಬಂಧ ಮುಂದೆ ಸರಿಹೋಗಬಹುದು ಎಂದು ಭರವಸೆ ಇಟ್ಟುಕೊಂಡಿದ್ದರು, ಜೊತೆಗೆ ಚೈತನ್ಯ ತಮ್ಮ ಕುಟುಂಬಕ್ಕೆ ಬಹಳ ಹತ್ತಿರವಾಗಿರುವುದಾಗಿ ತಿಳಿಸಿದ್ದರು. ಆದರೆ ಈಗ ಇದ್ದಕ್ಕಿದ್ದ ಹಾಗೆ ಫೇಸ್ ಬುಕ್ ನಲ್ಲಿ ಸಮಂತಾ ಅವರ ತಂದೆ ಒಂದು ಪೋಸ್ಟ್ ಹಾಕಿದ್ದು, ಅದೀಗ ಎಲ್ಲೆಡೆ ಚರ್ಚೆಯಾಗುತ್ತಿದೆ. ಸಮಂತಾ ಅವರ ತಂದೆ ಕೆಲವು ಸಾಲುಗಳನ್ನು ಬರೆದುಕೊಂಡಿದ್ದಾರೆ.
“ಬಹಳ ಹಿಂದೆ ಒಂದು ಕಥೆ ಇತ್ತು..ಆ ಕಥೆ ಈಗ ಅಸ್ತಿತ್ವದಲ್ಲಿಲ್ಲ.. ಇದು ಹೊಸ ಅಧ್ಯಾಯ ಶುರುಮಾಡುವ ಸಮಯ..ಹೊಸ ಜೀವನ ಶುರು ಮಾಡುವ ಸಮಯ..” ಎಂದು ಬರೆದುಕೊಂಡಿದ್ದಾರೆ. ದಿಢೀರ್ ಎಂದು ಸಮಂತಾ ಅವರ ತಂದೆ ಈ ರೀತಿ ಪೋಸ್ಟ್ ಮಾಡಲು ಕಾರಣ ಏನಿರಬಹುದು ಎಂದು ಅಭಿಮಾನಿಗಳು ಹಾಗೂ ನೆಟ್ಟಿಗರು ತಲೆಕೆಡಿಸಿಕೊಂಡಿದ್ದಾರೆ.. ಸಮಂತಾ ಹಾಗೂ ನಾಗಚೈತನ್ಯ ವಿಚ್ಛೇದನ ಘೋಷಿಸಿ ಇನ್ನೇನು ಒಂದು ವರ್ಷ ಆಗುತ್ತಿದೆ. ಈ ಸಮಯದಲ್ಲಿ ಇಂತಹ ಪೋಸ್ಟ್ ಶೇರ್ ಮಾಡಲು ಕಾರಣ ಆದರು, ನಾಗಚೈತನ್ಯ ಅವರನ್ನು ಸಮಂತಾ ತಂದೆ ಇನ್ನು ಮರೆತಿಲ್ಲವಾ? ಅಥವಾ ಸಮಂತಾ ಮತ್ತೊಂದು ಮದುವೆ ಆಗುತ್ತಿದ್ದಾರಾ? ಹೀಗೆ ಅನೇಕ ಪ್ರಶ್ನೆಗಳು ಸೋಷಿಯಲ್ ಮೀಡಿಯಾದಲ್ಲಿ ಕೇಳಿ ಬರುತ್ತಿದೆ. ಆದರೆ ಯಾವುದಕ್ಕೂ ಉತ್ತರವಂತು ಸಿಕಿಲ್ಲ.