ಬಿಡುಗಡೆಗೂ ಮುನ್ನ KGF Chapter 2 ಗಳಿಸಿರುವ ಹಣವೆಷ್ಟು? ಹೊರ ದೇಶದಲ್ಲಿ ದಾಖಲೆ ಮಾಡಿದ ಯಶ್ ರ ಕನ್ನಡ ಸಿನಿಮಾ.

306

ಈ ವರ್ಷದ ಅತ್ಯಂತ ನಿರೀಕ್ಷೆಯ ಚಿತ್ರಗಳಲ್ಲಿ ಒಂದು KGF ಚಾಪ್ಟರ್. 2. ಈ ಸಿನಿಮಾಗಾಗಿ ಅದೆಷ್ಟೋ ವರ್ಷಗಳಿಂದ ಜನರು ಕಾಯುತ್ತಾ ಇದ್ದಾರೆ. ಇದೀಗ ಟ್ರೇಲರ್ ಸೂಪರ್ ಹಿಟ್ ಆಗಿದ್ದು ಹೊಸ ಮೈಲಿಗಲ್ಲನ್ನು ಸ್ಥಾಪಿಸಿದೆ. ಆದರೆ ಈಗ ಸಿನೆಮಾ ಕೂಡ 14ನೇ ತಾರೀಖಿನ ದಿನದಂದು ಬಿಡುಗಡೆಗೆ ಸಿದ್ಧತೆ ಮಾಡಿಕೊಂಡಿದೆ. ಕೇವಲ ಭಾರತ ಅಲ್ಲದೇ ವಿದೇಶಗಳಲ್ಲಿ ಕೂಡ ಸಿನೆಮಾ ಬಿಡುಗಡೆ ಆಗುತ್ತಿದ್ದು ಎಲ್ಲಾ ಸಿನಿ ರಂಗದ ದಾಖಲೆ ಮುರಿದು ಬೀಳುವುದರಲ್ಲಿ ಯಾವುದೇ ಅನುಮಾನ ಇಲ್ಲ.

ಇದೀಗ ಪ್ರಿರಿಲಿಸ್ ನ ಎಲ್ಲಾ ವಹಿವಾಟು ಮುಗಿದಿದ್ದು ಎಲ್ಲಾ ರೀತಿಯ ಡಿಸ್ಟ್ರಿಬ್ಯೂಟರ್ ಹಕ್ಕು , ಸ್ಯಾಟಲೈಟ್ ಹಕ್ಕುಗಳು ಮಾರಾಟ ಮುಗಿದಿದೆ. ಭಾರತದ ಚಿತ್ರ ರಂಗದಲ್ಲಿ ಮಾಡದೆ ಇರುವ ರೆಕಾರ್ಡ್ ಮಾಡಿದೆ ಈ ಚಿತ್ರ. ಬಾಲಿವುಡ್ ನಂತಹ ದಿಗ್ಗಜ ಸಿನಿ ರಂಗವನ್ನು ಮಣಿಸಿ ಇದೀಗ ಮೊದಲ ಸ್ಥಾನದಲ್ಲಿದೆ. ಚಿತ್ರ ಪ್ರಿ ರಿಲೀಸ್ ನಲ್ಲಿ ಒಟ್ಟು 500ಕೋಟಿಗೂ ಹೆಚ್ಚು ಮೊತ್ತ ಸಂಪಾದನೆ ಮಾಡಿದೆ ಎಂದು ಹೇಳಲಾಗುತ್ತಿದೆ. ಇದು ಇತ್ತೀಚೆಗೆ ಬಿಡುಗಡೆ ಆದ RRR ಚಿತ್ರಕ್ಕಿಂತಲೂ ಹೆಚ್ಚು ಎಂಬುವುದು ವಿಶೇಷ. ಅತೀ ಹೆಚ್ಚು ಕಲೆಕ್ಷನ್ ಮಾಡಿರುವ RRR ಚಿತ್ರ ಪ್ರೀ ರಿಲೀಸ್ ನಲ್ಲಿ 450ಕೋಟಿ ಹಣ ಸಂಪಾದನೆ ಮಾಡಿತ್ತು.

ಆದರೆ ಇದೀಗ 500ಕೋಟಿಗೂ ಹೆಚ್ಚು ಸಂಪಾದನೆ ಮಾಡಿ RRR ಚಿತ್ರದ ದಾಖಲೆ ಕೂಡ ಮು-ರಿದು ಬಿಟ್ಟಿದೆ. ಬಿಡುಗಡೆ ಆಗಲಿರುವ KGF ಚಾಪ್ಟರ್ 2 ಚಿತ್ರ 1000ಕೋಟಿ ಕಲೆಕ್ಷನ್ ನಿರೀಕ್ಷೆ ಹೊಂದಿದ್ದು ಚಿತ್ರ ದೊಡ್ಡ ಮಟ್ಟದಲ್ಲಿ ಯಶಸ್ಸು ಕಾಣುವುದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಸಿನಿ ದಿಗ್ಗಜರು ಹೇಳಿದ್ದಾರೆ. ಚಿತ್ರ ಯಶಸ್ಸು ಕಾಣಲಿ ಹೊಸ ಮೈಲಿಗಲ್ಲು ಸ್ಥಾಪಿಸಲು ಎಂದು ನಾವು ನಮ್ಮ ಕಡೆ ಇಂದ ಚಿತ್ರ ರಂಗಕ್ಕೆ ಶುಭ ಹಾರೈಸೋಣ.

Leave A Reply

Your email address will not be published.