ಬೆಳಗಾವಿ, ಕಾರವಾರ, ನಿಪ್ಪಾಣಿ ಹಾಗು ಭಾಲ್ಕಿಯ ಪ್ರತಿ ಇಂಚನ್ನು ಮಹಾರಾಷ್ಟ್ರಕ್ಕೆ ಸೇರಿಸುತ್ತೇವೆ ಮಹಾರಾಷ್ಟ್ರ ಮುಖ್ಯಮಂತ್ರಿ.

101

ಜಾಗದ ವಿಚಾರದಲ್ಲಿ ಮಹಾರಾಷ್ಟ್ರ ಹಾಗು ಕರ್ನಾಟಕದ ವಿವಾದ ದಿನ ಕಳೆದಂತೆ ಇನ್ನೊಂದು ಹೆಜ್ಜೆ ಮೇಲಕ್ಕೆ ಹೋಗುತ್ತಿದೆ. ಇದಕ್ಕೆ ತುಪ್ಪ ಸುರಿಸುವಂತೆ ಕೆಲವು ಸಂಘಟನೆಗಳು ಹಾಗು ರಾಜಕೀಯ ನಾಯಕರು ಗಳು ಕೂಡ ಬಾಯಿಗೆ ಬಂದಂತೆ ಮಾತಾಡುತ್ತಿದ್ದಾರೆ. ಎರಡು ಕಡೆಯಿಂದ ಬಸ್ ಗಳಿಗೆ ಮಸಿ ಬಳಿಯುವ ಕೆಲಸ ನಡೆಯುತ್ತಿದೆ. ಎರಡು ಕಡೆ ಮೇಲ್ಮನೆ ಹಾಗು ಕೆಳಮನೆಯಲ್ಲಿ ಕನ್ನಡ ಮಾತಾಡುವ ಮಹಾರಾಷ್ಟ್ರದ ಭಾಗ ಹಾಗು ಮರಾಠಿ ಮಾತಾಡುವ ಕರ್ನಾಟಕದ ಭಾಗ ಮಹಾರಾಷ್ಟ್ರ ಹಾಗು ಕರ್ನಾಟಕಕ್ಕೆ ಸೇರಿಸುತ್ತೇವೆ ಎನ್ನುವ ನಿರ್ಣಾಯಕಕ್ಕೆ ಅಂಗೀಕಾರ ಕೊಟ್ಟಿದೆ.

ಕರ್ನಾಟಕದ ಮರಾಠಿ ವಿರೋಧಿ ಧೋರಣೆಯನ್ನು ನಾವು ವಿರೋಧಿಸುತ್ತೇವೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂದೆ ಅಲ್ಲಿನ ವಿಧಾನಸಭೆಯಲ್ಲಿ ಹೇಳಿದ್ದಾರೆ. ಕಾರಂತಕದಲ್ಲಿ ಮರಾಠಿ ಮಾತಾಡುವ 865 ಗ್ರಾಮಗಳಿವೆ. ಈ ಗ್ರಾಮಗಳನ್ನು ಸಂಪೂರ್ಣವಾಗಿ ಮಹಾರಾಷ್ಟ್ರಕ್ಕೆ ಸೇರಿಸಿಕೊಳ್ಳುತ್ತೇವೆ. ಸುಪ್ರೀಂ ಕೋರ್ಟ್ ಹೇಳುವುದನ್ನು ನಾವು ಪಾಲನೆ ಮಾಡುತ್ತೇವೆ. ಕರ್ನಾಟಕದ ಸರಕಾರ ಕೂಡ ಕಳೆದ ವಾರ ಇದೆ ರೀತಿ ನಿರ್ಣಯ ವಿಧಾನಸಭೆಯಲ್ಲಿ ಅಂಗೀಕರಿಸಿದೆ. ಇದೀಗ ಮಹಾರಾಷ್ಟ್ರ ಕರ್ನಾಟಕದ ಬೆಳಗಾವಿ, ಕಾರವಾರ, ಬಾಲ್ಕಿ ಹಾಗು ನಿಪ್ಪಾಣಿ ಮಹಾರಾಷ್ಟ್ರಕ್ಕೆ ಸೇರಿಸುತ್ತೇವೆ ಅಂತ ಹೇಳಿದೆ.

Leave A Reply

Your email address will not be published.