ಬೇರೆ ಏನು ಬೇಡವೇ ಬೇಡ, ಮನೆಯಲ್ಲಿಯೇ ಗ್ಯಾಸ್ಟಿಕ್ ಸಮಸ್ಯೆ ನಿವಾರಣೆಗೆ ವೀಳ್ಯದೆಲೆ ಯಿಂದ ಈ ಚಿಕ್ಕ ಕೆಲಸ ಮಾಡಿ ಸಾಕು. ಜನ್ಮದಲ್ಲಿ ಗ್ಯಾಸ್ಟಿಕ್ ಬರಲ್ಲ.
ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರ ಆಹಾರ ಕ್ರಮ ಎನ್ನುವುದು ನಿಜಕ್ಕೂ ಬದಲಾಗಿಬಿಟ್ಟಿದೆ. ಕೆಲವರು ಸಮಯಕ್ಕೆ ಸರಿಯಾಗಿ ಆಹಾರವನ್ನು ಮಾಡದೆ ಇನ್ನು ಕೆಲವರು ಜಂಕ್ ಫುಡ್ ಗಳನ್ನು ಹೆಚ್ಚಾಗಿ ತಿನ್ನುವ ಮೂಲಕ ಜಠರದಲ್ಲಿ ಬೇಡದ ಆಮ್ಲಗಳು ಉಂಟಾಗುವಂತೆ ಮಾಡಿಕೊಳ್ಳುತ್ತಾರೆ. ಇದರಿಂದಾಗಿ ಗ್ಯಾಸ್ಟಿಕ್ ಹೆಚ್ಚಾಗುತ್ತದೆ. ಔಷಧಿಗಳನ್ನು ತೆಗೆದುಕೊಂಡರೂ ಕೂಡ ಅದು ಕ್ಷಣಿಕವಾಗಿರುತ್ತದೆ. ಹೀಗಾಗಿ ಗ್ಯಾಸ್ಟಿಕ್ ಕಡಿಮೆಯಾಗಲು ಅದರಲ್ಲೂ ವಿಶೇಷವಾಗಿ ದೀರ್ಘಕಾಲದ ಮುಕ್ತಿ ಸಿಗಲು ನೈಸರ್ಗಿಕ ಪರಿಹಾರ ಏನೆಂಬುದನ್ನು ತಿಳಿದುಕೊಳ್ಳೋಣ ಬನ್ನಿ.
ಗ್ಯಾಸ್ಟಿಕ್ ಸಮಸ್ಯೆಯಿಂದ ಪರಿಹಾರವನ್ನು ಪಡೆಯಲು ಇರುವಂತಹ ನೈಸರ್ಗಿಕ ವಿಧಾನಗಳಲ್ಲಿ ವೀಳ್ಯದೆಲೆ ಸೇವನೆ ಕೂಡ ಒಂದಾಗಿದೆ. ನೀವು ಗಮನಿಸಿರಬಹುದು ಸಾಮಾನ್ಯವಾಗಿ ನಮ್ಮ ಕಡೆಗಳಲ್ಲಿ ಮನೆಯಲ್ಲಿ ಊಟವಾದ ನಂತರ ಪಾನ್ ಅಥವಾ ವೀಳ್ಯದೆಲೆಯನ್ನು ಸುಣ್ಣ ಹಾಗೂ ಅಡಿಕೆಯ ಜೊತೆಗೆ ಹಾಗೂ ಇತರ ಸಂಬಂಧಿತ ಸಾಮಗ್ರಿಗಳ ಜೊತೆಗೆ ಊಟ ಆದನಂತರ ಸೇವಿಸುತ್ತಾರೆ. ಇದೊಂದು ಆಯುರ್ವೇದ ನೈಸರ್ಗಿಕ ಆಹಾರ ವಸ್ತುವಾಗಿದ್ದು ಊಟ ಆದ ನಂತರ ಇದರ ಸೇವನೆ ನಮ್ಮ ಜಠರದಲ್ಲಿ ಜೀರ್ಣಕ್ರಿಯೆಯನ್ನು ಚುರುಕುಗೊಳಿಸುತ್ತದೆ ಎಂಬುದಾಗಿ ಸಾಬೀತಾಗಿದೆ. ಕೇವಲ ಇಷ್ಟು ಮಾತ್ರವಲ್ಲದೆ ಇವುಗಳನ್ನು ಅಗಿಯುವುದರಿಂದ ಇದರಿಂದ ಹೊರಬರುವ ರಸ ಎನ್ನುವುದು ಜಠರದ ಸಮಸ್ಯೆಗಳನ್ನು ಕೂಡ ದೂರ ಮಾಡುತ್ತದೆ ಎಂಬುದಾಗಿ ಸಾಬೀತಾಗಿದೆ.
ಹೊಟ್ಟೆಯ ಉಬ್ಬರಿಸುವಿಕೆ ಸೇರಿದಂತೆ ಹಲವಾರು ಸಮಸ್ಯೆಗಳನ್ನು ನಿವಾರಿಸುತ್ತದೆ. ವೀಳ್ಯದೆಲೆಯಲ್ಲಿ ಇರುವ ಕಾರ್ಮುನೇಟಿವ್ ಹಾಗೂ ಗ್ಯಾಸ್ಟ್ರೊ ಪ್ರೊಟೆಕ್ಟಿವ್ ಅಂಶಗಳು ಜೀರ್ಣಕ್ರಿಯೆ ವೇಗವಾಗುವಂತೆ ಸಹಕರಿಸಿ ಲಾಲಾರಸದ ಬಿಡುಗಡೆಯನ್ನು ಉತ್ತೇಜಿಸುತ್ತದೆ. ವೀಳ್ಯದೆಲೆಯ ತೈಲವನ್ನು ತಯಾರಿಸಿ ಹೊಟ್ಟೆಯ ಮೇಲೆ ಮಸಾಜ್ ಮಾಡುವುದರಿಂದ ಕೂಡ ಜೀರ್ಣಕಾರಿ ಆಮ್ಲಗಳ ಸ್ರವಿಸುವುದಕ್ಕೆ ಸಹಾಯ ಮಾಡಿದಂತಾಗುತ್ತದೆ. ವೀಳ್ಯದೆಲೆಯಲ್ಲಿ ವಿಟಮಿನ್ ಸಿ, ಥಯಾಮಿನ್, ನಿಯಾಸಿನ್ ಸೇರಿದಂತೆ ಹಲವಾರು ಪೋಷಕಾಂಶಗಳು ಇರುವ ಕಾರಣದಿಂದಾಗಿ ಇವುಗಳನ್ನು ಪ್ರತಿನಿತ್ಯ ರಾತ್ರಿ ನೀರಿನಲ್ಲಿ ನೆನೆಸಿ ಬೆಳಗ್ಗೆ ಎದ್ದು ಆ ನೀರನ್ನು ಅಥವಾ ಆ ವೀಳ್ಯದೆಲೆಯನ್ನು ಜಗಿದು ತಿಂದರೆ ಗ್ಯಾಸ್ಟಿಕ್ ಸಮಸ್ಯೆ ನಿವಾರಣೆ ಆಗೋದ್ರಲ್ಲಿ ಯಾವುದೇ ಅನುಮಾನವಿಲ್ಲ.