ಭಾರತಕ್ಕೆ ಬರದೇ ಇಂಡೋನೇಷ್ಯಾ ಕಡೆ ಮುಖ ಮಾಡಿದ ಎಲಾನ್ ಮುಸ್ಕ್. ಮುಸ್ಕ್ ಹಾಗು ಭಾರತ ಇಬ್ಬರು ತಲೆ ಬಾಗುತ್ತಿಲ್ಲ. ಹೊಸ ಭಾರತ ಇದೆ ಅಲ್ವ?

ಭಾರತ ೧೩೫ ಬಿಲಿಯನ್ ಜನಸಂಖ್ಯೆ ಹೊಂದಿರುವ ದೊಡ್ಡ ದೇಶ. ಎಲ್ಲ ವಿದೇಶಿ ಕಂಪನಿಗಳಿಗೆ ಒಂದು ಹೊತ್ತು ಊಟ ಮಾಡಲು ಭಾರತ ದಂತಹ ದೇಶ ಬೇಕೇ ಬೇಕು. ಭಾರತ ದೇಶದಲ್ಲಿ ಆಹಾರದ ಸಮಸ್ಯೆ ಇಲ್ಲ ಕಾರಣ ಭಾರತ ಇಂದಿಗೂ ಕೃಷಿ ಪ್ರಧಾನ ದೇಶವಾಗಿದೆ. ಆದರೆ ಅದು ಬಿಟ್ಟರೆ ಭಾರತಕ್ಕೆ ದೊಡ್ಡ ಪೆಟ್ಟು ಈ ಪೆಟ್ರೋಲ್ ಡೀಸೆಲ್. ತೈಲ ಉತ್ಪಾದನೆ ಭಾರತದಲ್ಲಿ ಇಲ್ಲ. ಭಾರತ ತನ್ನ ೮೦% ತೈಲಕ್ಕೆ ಹೊರ ದೇಶಗಳನ್ನೇ ಅವಲಂಬಿಸಿದೆ. ಇದೆ ಕಾರಣಕ್ಕೆ ಇದು ಅಭಿವೃದ್ಧಿ ಹೊಂದುವ ದೇಶವಾಗಿ ಇಂದು ಕೂಡ ಮುಂದುವರೆದಿದೆ.

ಈ ಎಲ್ಲ ಸಮಸ್ಯೆಗೆ ಪರಿಹಾರ ಬೇಕಾಗಿದೆ. ಅದಕ್ಕೆ ಭಾರತ ಸರಕಾರ ಮೊದಲಿಂದಲೂ ಹೆಚ್ಚಾಗಿ ಪರ್ಯಾಯ ವ್ಯವಸ್ಥೆ ಮಾಡುವತ್ತ ಚಿಂತನೆ ನಡೆಸಿದೆ. ಅದಕ್ಕಾಗಿಯೇ ಎಥನಾಲ್, ಹೈಡ್ರೋಜನ್ ಹಾಗೇನೇ ಎಲೆಕ್ಟ್ರಿಕ್ ವಾಹನಗಳನ್ನು ಅಭಿವೃದ್ಧಿ ಮಾಡಲು ತಯಾರಿ ನಡೆಸುತ್ತಿದೆ. ಇದಕ್ಕೆ ಪೂರಕವೆಂಬಂತೆ ಅಮೇರಿಕಾದ ಹಾಗೇನೇ ವಿಶ್ವದ ಶ್ರೀಮಂತ ವ್ಯಕ್ತಿ ಎಲಾನ್ ಮುಸ್ಕ್ ಭಾರತದಲ್ಲಿ ತನ್ನ ಎಲೆಕ್ಟ್ರಿಕ್ ಕಾರು ಮಾರಾಟ ಮಾಡಲು ನಿರ್ಧಾರ ಕೂಡ ಮಾಡಿದ್ದರು. ಆದರೆ ಇದಕ್ಕೆ ಭಾರತ ಸರಕಾರ ಒಂದು ಸ್ಪೀಡ್ ಬ್ರೇಕರ್ ಹಾಕಿದೆ. ಅದಕ್ಕೆ ಎಲಾನ್ ಮುಸ್ಕ್ ಹಾಗು ಸರಕಾರದ ನಡುವೆ ಜಟಾಪಟಿ ನಡೆಯುತ್ತಿದೆ.

ಮುಸ್ಕ್ ಹಾಗು ಭಾರತದ ನಡುವಿನ ಜಟಾಪಟಿ ಏನು? ಎಲಾನ್ ಮುಸ್ಕ್ ತನ್ನ ಕಾರನ್ನು ಉತ್ಪಾದನೆ ಮಾಡುವುದು ಚೀನಾದಲ್ಲಿ. ಎಲಾನ್ ಮುಸ್ಕ್ ಚೀನಾದಲ್ಲಿ ಉತ್ಪಾದನೆ ಮಾಡಿ ಭಾರತದಲ್ಲಿ ಮಾರಾಟ ಮಾಡಲು ಚಿಂತನೆ ನಡೆಸಿದ್ದರು. ಇದಕ್ಕೆ ಅನೇಕ ಪ್ರಭಾವ ಕೂಡ ಹಾಕಿದ್ದರು. ಮೊದಲ ಸರಕಾರವಾಗಿದ್ದರೆ ಮುಸ್ಕ್ ಅವರ ಟೆಸ್ಲಾ ಕಾರನ್ನು ಭಾರತದಲ್ಲಿ ಮಾರಾಟ ಮಾಡಲು ಬಿಡುತ್ತಿದ್ದರೋ ಏನೋ ಆದರೆ ಈಗ ಇರುವುದು ಮೋದಿ ಸರಕಾರ ಹಾಗು ಇದು ಹೊಸ ಭಾರತ. ಎಲಾನ್ ಮುಸ್ಕ್ ಗೆ ಭಾರತದಲ್ಲಿ ಮಾರಾಟ ಮಾಡುವುದು ಬೇಡ ಎನ್ನುತಿಲ್ಲ ಆದರೆ ಒಂದು ಷರತ್ತು ಹಾಕಿದೆ ಅಷ್ಟೇ.

ಭಾರತ ಹಾಗು ಚೀನಾದ ನಡುವೆ ಏನೆನ್ನು ಸರಿ ಇಲ್ಲ ಎನ್ನುವುದು ಇದೀಗ ಜಗಜ್ಜಾಹಿರವಾಗಿದೆ. ಇದರ ನಡುವೆ ಅನೇಕ ಚೀನಾದ ಮೊಬೈಲ್ ಆಪ್ ಗಳನ್ನೂ ಸರಕಾರ ತೆಗೆದುಹಾಕುತ್ತಿದೆ. ಇದರ ಮದ್ಯೆ ಎಲಾನ್ ಮುಸ್ಕ್ ತನ್ನ ಎಲೆಕ್ಟ್ರಿಕ್ ಕಾರ್ ಗಳ ಉತ್ಪಾದನೆ ಚೀನಾದಲ್ಲಿ ಮಾಡಿ ಭಾರತದಲ್ಲಿ ಮಾರಾಟ ಮಾಡಲು ಸರಕಾರ ತಡೆಯುತ್ತಿಲ್ಲ ಆದರೆ ಅಂತಹ ಕಾರುಗಳಿಗೆ ೧೦೦% ತೆರಿಗೆ ವಿದಿಸುತ್ತಿದೆ. ಅಥವಾ ಭಾರತದಲ್ಲಿಯೇ ಉತ್ಪಾದನೆ ಮಾಡಲು ಹೇಳಿದೆ ಭಾರತದಲ್ಲಿ ಉತ್ಪಾದನೆ ಮಾಡುವ ಕಾರುಗಳಿಗೆ ಆಮದು ಸುಂಕ ಇರುವುದೇ ಇಲ್ಲ. ಈ ಭಾರತ ಸರಕಾರದ ಆಫರ್ ಗೆ ಮುಸ್ಕ್ ಒಪ್ಪುತ್ತಿಲ್ಲ ಹಾಗೇನೇ ಮುಸ್ಕ್ ಹಾಕುತ್ತಿರುವ ಪ್ರೆಷರ್ ಗೆ ಭಾರತ ಕೂಡ ಬಗ್ಗುತ್ತಿಲ್ಲ. ಇದೆ ಕಾರಣಕ್ಕೆ ಮುಸ್ಕ್ ಇಂಡೋನೇಷ್ಯಾ ದಲ್ಲಿ ತನ್ನ ಉತ್ಪಾದನಾ ಫ್ಯಾಕ್ಟರಿ ಹಾಕಲು ತೆರಳಿದ್ದಾರೆ ಎನ್ನುತ್ತಿದ್ದಾರೆ ಕೆಲವರು.

Comments (0)
Add Comment