ಭಾರತದಲ್ಲಿ ಪುಷ್ಪ ಸಿನೆಮಾಗೆ ಠಕ್ಕರ್ ಕೊಟ್ಟ ಸ್ಪೈಡರ್ ಮ್ಯಾನ್ ೩ ಸಿನಿಮಾ. ಭಾರತದಲ್ಲಿ ಒಂದೇ ದಿನಕ್ಕೆ ಮಾಡಿದ ಕಲೆಕ್ಷನ್ ಎಷ್ಟು ಗೊತ್ತೇ?
ಸ್ಪೈಡರ್ ಮ್ಯಾನ್ – ನೋ ವೆ ಹೋಂ ಎನ್ನುವುದು ಮಾರ್ವೆಲ್ ಅವರ ಹೊಸ ಚಲನಚಿತ್ರ. ವಿಶ್ವದಾದ್ಯಂತ ಅತ್ಯಂತ ಹೆಚ್ಚು ಸುದ್ದಿ ಮಾಡಿದ ಸಿನೆಮಾ ಎಂದರು ತಪ್ಪಾಗಲಾರದು. ಅಲ್ಲದೆ ಮಾರ್ವೆಲ್ ಫ್ರಾಂಚೈಸ್ ನ ಅತ್ಯಂತ ಯಶಸ್ವೀ ಪಾತ್ರಗಳಲ್ಲಿ ಒಂದು ಸ್ಪೈಡರ್ ಮ್ಯಾನ್. ಮೊದಲನೇ ದಿನ ಈ ಚಲನಚಿತ್ರ ನೋಡಿ ಬಂದವರು ಇಲ್ಲಿ ವರೆಗೆ ಮಾರ್ವೆಲ್ ತಂದ ಎಲ್ಲ ಸಿನಿಮಾಗಳಿಗಿಂತ ಇದು ಅತ್ಯಂತ ಒಳ್ಳೆಯ ಸಿನಿಮಾ ಎಂದು ಹೇಳಿದ್ದಾರೆ. ಇದರ ಬಾಕ್ಸ್ ಆಫೀಸ್ ಕಲೆಕ್ಷನ್ ಎಷ್ಟು?
ಯಾವುದೇ ಹಾಲಿವುಡ್ ಸಿನಿಮಾ ಇರಲಿ ಬಹು ಮುಖ್ಯವಾಗಿ ಮಾರ್ವೆಲ್ ಹಾಗು DC ನಡುವಿನ ಸೂಪರ್ ನ್ಯಾಚುರಲ್ ಪಾತ್ರಗಳ ಸಿನಿಮಾ ಬಿಡುಗಡೆ ಮೊದಲೇ ಎಷ್ಟು ಕಲೆಕ್ಷನ್ ಮಾಡಬಹುದು ಎನ್ನುವ ಲೆಕ್ಕಾಚಾರ ಶುರು ಆಗುತ್ತದೆ. ಇತ್ತೀಚಿಗೆ ಭಾರತದಲ್ಲಿ ಈ ತರಹದ ಸಿನಿಮಾಗಳಿಗೆ ಜನರು ಹೆಚ್ಚಿನ ಉತ್ಸಾಹ ತೋರಿಸತೊಡಗಿದ್ದರೆ. ಅದರಿಂದಲೇ ಭಾರತ ಇಂತಹ ಫ್ರಾಂಚೈಸಿಗಳಿಗೆ ನೆಚ್ಚಿನದಾಗಿದೆ. ಸ್ಪೈಡರ್ ಮ್ಯಾನ್ ಗೆ ಠಕ್ಕರ್ ನೀಡಲು ತೆಲುಗಿನ ಪಾನ್ ಇಂಡಿಯಾ ಮೂವಿ ಅಲ್ಲೂ ಅರ್ಜುನ್ ನಟನೆಯ ಪುಷ್ಪ ರೆಡಿ ಆಗಿತ್ತು. ಒಂದು ದಿನ ಲೇಟ್ ಆಗಿ ಬಿಡುಗಡೆ ಆಗಿತ್ತು.
ಪುಷ್ಪ ಚಿತ್ರ ಮೊದಲ ದಿನ ೪೦ ಕೋಟಿ ಗಳಿಸಿತು ಎನ್ನುವ ವರದಿ ಬಿಡುಗಡೆ ಆಗಿತ್ತು. ಅದಲ್ಲದೆ ಚಿತ್ರ ನೋಡಿ ಬಂದ ಪ್ರೇಕ್ಷಕರು ಪುಷ್ಪ ಹೇಳಿಕೊಳ್ಳುವಷ್ಟು ಒಳ್ಳೆದಿಲ್ಲ ಎನ್ನುವ ಮಾತು ಕೇಳಿಬಂದಿತ್ತು. ಆದರೆ ಸ್ಪೈಡರ್ ಮ್ಯಾನ್ ಮೊದಲ ದಿನವೇ ಒಟ್ಟು ೩೩ ಕೋಟಿ ಗಳಷ್ಟು ಗಳಿಕೆ ಮಾಡಿದೆ ಎಂದು ಮಾಧ್ಯಮಗಳಲ್ಲಿ ಕೇಳಿ ಬರುತ್ತಿದೆ. ಅಷ್ಟು ಮಾತ್ರ ಅಲ್ಲದೆ ಸಿನಿಮಾ ನೋಡಿ ಹೊರ ಬಂದ ಜನರು ಸ್ಪೈಡರ್ ಮ್ಯಾನ್ ೩ ನೋ ವೆ ಹೋಂ ಗೆ ೧೦/೧೦ ಅಂಕ ನೀಡಿದ್ದಾರೆ. ಇದೆ ಕಾರಣಕ್ಕೆ ಈ ಚಿತ್ರ ಭಾರತದಲ್ಲಿ ಮುಂಬರುವ ದಿನಗಳಲ್ಲಿ ಉತ್ತಮ ಪ್ರದರ್ಶನ ನೀಡುವ ಭರವಸೆ ಇದೆ ಎಂದು ಸಿನಿಮಾ ತಜ್ಞರು ಹಾಗು ಈಗಾಗಲೇ ಚಿತ್ರ ನೋಡಿ ಬಂದ ಪ್ರೇಕ್ಷಕರು ಹೇಳುತ್ತಿದ್ದಾರೆ.