ಭಾರತದ ಅತ್ಯಂತ ಶ್ರೀಮಂತ ಹಳ್ಳಿ. ಇಲ್ಲಿನ 17 ಬ್ಯಾಂಕ್ಗಳಲ್ಲಿ 5000 ಕೋಟಿ ಗೂ ಹೆಚ್ಚು ಹಣ ಠೇವಣಿ ಇದೆ. ಯಾವುದು ಈ ಹಳ್ಳಿ?

2,000

ನಮಸ್ಕಾರ ಸ್ನೇಹಿತರೆ ಹಳ್ಳಿ ಎಂದಾಕ್ಷಣ ನಮಗೆ ಕೆಟ್ಟುಹೋಗಿರುವ ರಸ್ತೆಗಳು ಮೂಲಭೂತ ಸೌಕರ್ಯಗಳ ಕೊರತೆ ಹೀಗೆ ಹಲವಾರು ಸಮಸ್ಯೆಗಳು ನೆನಪಾಗುತ್ತದೆ. ಇಂದು ಹೇಳಹೊರಟಿರುವ ವಿಚಾರದಲ್ಲಿ ಈ ಹಳ್ಳಿಯ ಕುರಿತಂತೆ ನೀವು ತಿಳಿದರೆ ಖಂಡಿತವಾಗಿ ನಿಮ್ಮ ಹಳ್ಳಿಯ ಕುರಿತಂತೆ ಇರುವ ಇಂತಹ ಭಾವನೆ ಸಂಪೂರ್ಣವಾಗಿ ದೂರವಾಗುತ್ತದೆ. ಈ ಹಳ್ಳಿ ಬೇರೆಲ್ಲೂ ಅಲ್ಲ ನಮ್ಮ ಭಾರತದಲ್ಲಿ ಇರುವುದು ಇದರ ಹೆಸರು ಮಾದಾಪರ್ ಎನ್ನುವುದಾಗಿ. ಹೆಸರಿಗೆ ಹಳ್ಳಿ ಅಂತ ಕರೆಸಿಕೊಂಡರು ಕೂಡ ಇಲ್ಲಿರುವ ಜನರು ಕೋಟ್ಯಾಂತರ ರೂಪಾಯಿ ಶ್ರೀಮಂತರು. ಗುಜರಾತ್ ರಾಜ್ಯದ ಕಚ್ ಜಿಲ್ಲೆಯಲ್ಲಿರುವ ಈ ಹಳ್ಳಿ ಸಾಕಷ್ಟು ಸಮೃದ್ಧ ಹಾಗೂ ಆರ್ಥಿಕವಾಗಿ ಕೂಡ ಸದೃಢವಾಗಿದೆ. ಈ ಹಳ್ಳಿಯ ವಾಸಿಗಳು ಪ್ರತಿಯೊಂದು ಸುಖಭೋಗಗಳನ್ನು ಅನುಭವಿಸುತ್ತಾರೆ. ಇಷ್ಟು ಮಾತ್ರವಲ್ಲದೆ ದೊಡ್ಡ ಮೊತ್ತದ ಹಣವನ್ನು ಕೂಡ ಬ್ಯಾಂಕಿಗೆ ಜಮಾ ಮಾಡುತ್ತಾರೆ.

ಈ ಹಳ್ಳಿಯಲ್ಲಿ 7600 ಮನೆಗಳು ಹಾಗೂ 92000 ಜನರಿದ್ದಾರೆ. ಈ ಹಳ್ಳಿಯ ಇನ್ನೊಂದು ಪ್ರಮುಖವಾದ ವಿಶೇಷತೆಯೆಂದರೆ ಇಲ್ಲಿ ಬರೋಬ್ಬರಿ 17 ಬ್ಯಾಂಕುಗಳಿದ್ದು ಜನರು ಇಲ್ಲಿಯವರೆಗೆ 5 ಸಾವಿರ ಕೋಟಿ ರೂಪಾಯಿಗಳನ್ನು ಜಮಾ ಮಾಡಿದ್ದಾರೆ. ಇದಕ್ಕೆ ಮತ್ತೊಂದು ಪ್ರಮುಖ ಕಾರಣವೆಂದರೆ ಈ ಪ್ರದೇಶವನ್ನು ನೋಡಲು ದೇಶ-ವಿದೇಶಗಳಿಂದ ಪರ್ಯಟಕರು ಆಗಮಿಸುತ್ತಾರೆ. ಹೀಗಾಗಿ ಈ ಪ್ರದೇಶ ಸದಾಕಾಲ ಚರ್ಚೆಯಲ್ಲಿ ಇರುತ್ತದೆ. ಇಲ್ಲಿನ ಜನರು ಹೇಗೆ ಜೀವನ ಮಾಡುತ್ತಾರೆ ಎಂಬುದನ್ನು ಕುತೂಹಲ ನೇತ್ರ ರಾಗಿ ನೋಡಲು ದೇಶ-ವಿದೇಶಗಳಿಂದ ಯಾತ್ರಿಗಳು ಬರುತ್ತಾರೆ. ಯಾತ್ರಿಕರಿಗಾಗಿ ಕೂಡ ಸಾಕಷ್ಟು ವಸ್ತುಗಳನ್ನು ಇಲ್ಲಿನ ಸ್ಥಳೀಯರು ನಿರ್ಮಿಸಿದ್ದಾರೆ. ಒಂದು ಲೆಕ್ಕದಲ್ಲಿ ಹೇಳುವುದಾದರೆ ಜನಪ್ರಿಯ ಪ್ರವಾಸಿ ಸ್ಥಳ ಎಂದರೂ ಕೂಡ ತಪ್ಪಾಗಲಾರದು. ಇಲ್ಲಿನ ಸ್ಥಳೀಯರು ಜನರ ಆರೋಗ್ಯ ಚೆನ್ನಾಗಿರಬೇಕೆಂಬ ಕಾರಣಕ್ಕಾಗಿ ಕೆರೆ ಸರೋವರ ಅಣೆಕಟ್ಟುಗಳನ್ನು ಕೂಡ ಚೆನ್ನಾಗಿ ನಿರ್ಮಿಸಿದ್ದಾರೆ. ಇದರ ಸೌಂದರ್ಯವನ್ನು ನೋಡಲು ಕೂಡ ಪ್ರವಾಸಿಗರು ಆಗಮಿಸುತ್ತಾರೆ.

ಐದು ಸಾವಿರ ಕೋಟಿ ರೂಪಾಯಿ ಬ್ಯಾಂಕಿನಲ್ಲಿ ಜಮೆಯಾಗಿದೆ ಎಂದರೆ ಇಷ್ಟೊಂದು ಹಣ ಎಲ್ಲಿಂದ ಬಂತು ಎಂಬ ಕುತೂಹಲ ನಿಮ್ಮಲ್ಲಿರಬಹುದು. ಇಲ್ಲಿರುವ ಜನರ ಬಹುತೇಕ ಪರಿವಾರದವರು ಲಂಡನ್ ಗೆ ಶಿಫ್ಟ್ ಆಗುತ್ತಾರೆ. ಅಲ್ಲಿ ಹೋದ ನಂತರ ಇಲ್ಲಿ ಮಾಧಾಪರ್ ಅಸೋಸಿಯೇಷನ್ ಎಂಬ ಸಂಘ ಸಂಸ್ಥೆಯನ್ನು ಕಟ್ಟಿ ಬಳಸುತ್ತಾರೆ. ಇವರ ಜೊತೆಗೆ ಇನ್ನಷ್ಟು ಜನರು ಕೂಡಿಕೊಳ್ಳುತ್ತಾರೆ. ಈ ಸಂದರ್ಭದಲ್ಲಿ ಅಲ್ಲಿನ ಜನರು ಕಷ್ಟಪಟ್ಟು ದುಡಿದ ಹಣವನ್ನು ಇಲ್ಲಿರುವ ಬ್ಯಾಂಕುಗಳಲ್ಲಿ ಜಮೆ ಮಾಡಲು ಪ್ರಾರಂಭಿಸುತ್ತಾರೆ. ಬೇಡಿಕೆ ಹೆಚ್ಚಾದಂತೆ ಬ್ಯಾಂಕುಗಳ ಸಂಖ್ಯೆ ಕೂಡ ಈ ಹಳ್ಳಿಯಲ್ಲಿ ಜಾಸ್ತಿಯಾಗುತ್ತದೆ. ಈ ಹಣದಿಂದ ಹಳ್ಳಿಯ ಅವಶ್ಯಕತೆಗಳನ್ನು ಪೂರೈಸಲು ಪ್ರಾರಂಭಿಸುತ್ತಾರೆ.

ಲಂಡನ್ ನಲ್ಲಿರುವ ಈ ಹಳ್ಳಿಯವರು ಅವರಿಗೆ ಎಷ್ಟೇ ಹಣವನ್ನು ಕೂಡ ನೀಡಿದರು ಈ ಹಳ್ಳಿಯಲ್ಲಿರುವ ತಮ್ಮ ಜಾಗವನ್ನು ಎಂದು ಕೂಡ ಮಾರುವುದಿಲ್ಲ. ಇದರಿಂದಾಗಿ ಹಳ್ಳಿಯವರು ಮುಂದೆ ಯಾವುದೇ ಕಾರಣಕ್ಕೂ ಕಷ್ಟಪಡಬಾರದು ಎಂಬ ಯೋಚನೆ ಅವರದ್ದು. ದೇಶದ ಅತ್ಯಂತ ಶ್ರೀಮಂತ ಹಳ್ಳಿ ಆಗಿರುವ ಕಾರಣದಿಂದಾಗಿ ಇಲ್ಲಿ ಪ್ರವಾಸಿಗಳ ಸಂಖ್ಯೆ ಕೂಡ ಜಾಸ್ತಿ ಇದೆ. ಸ್ಕೂಲ್ ಕಾಲೇಜ್ ಹೆಲ್ತ್ ಕೇರ್ ಸೆಂಟರ್ ಕಮ್ಯುನಿಟಿ ಹಾಲ್ ಪೋಸ್ಟ್ ಆಫೀಸ್ ಗೋಶಾಲೆ ಹೀಗೆ ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಹೊಂದಿರುವ ದೇಶದ ಏಕೈಕ ಶ್ರೀಮಂತ ಹಳ್ಳಿ ಆಗಿದೆ ಮಧಾಪರ್.

ಈ ಹಳ್ಳಿಯ ಜನರಿಗೆ ಉನ್ನತ ಶಿಕ್ಷಣಕ್ಕಾಗಿ ಹೊರಗಿನ ನಗರಗಳಿಗೆ ಹೋಗುವ ಅವಶ್ಯಕತೆಯಿಲ್ಲ ಆರೋಗ್ಯದ ಸಮಸ್ಯೆಯಿಂದಾಗಿ ಬಳಲುವ ಸಮಸ್ಯೆ ಕೂಡ ಇಲ್ಲ. ಲಂಡನ್ ನಲ್ಲಿರುವ ಈ ಹಳ್ಳಿಯ ಜನರ ವ್ಯವಸಾಯ ಕೃಷಿ ಭೂಮಿಯನ್ನು ನೋಡಿಕೊಂಡು ಇಲ್ಲಿನ ಜನರು ಇಲ್ಲೇ ತಮ್ಮ ದೈನಂದಿಕ ಖರ್ಚುವೆಚ್ಚಗಳನ್ನು ಪಡೆದುಕೊಳ್ಳುತ್ತಾರೆ. ಹೀಗಾಗಿ ಹೊರಗಡೆ ಹೋಗಿ ಕೆಲಸ ಮಾಡುವ ಅವಶ್ಯಕತೆ ಕೂಡ ಇಲ್ಲ ಅವರ ಎಲ್ಲಾ ಅವಶ್ಯಕತೆಗಳು ಕೂಡ ಪೂರ್ಣಗೊಳ್ಳುತ್ತದೆ.

ಇನ್ನು ಈ ಹಳ್ಳಿಯ ಜನರು ಕೃಷಿ ಕಾರ್ಯಗಳನ್ನು ಕೂಡ ಎಲ್ಲರಿಗಿಂತ ವಿಭಿನ್ನವಾಗಿ ಹಾಗೂ ಸುಂದರವಾಗಿ ಮಾಡುತ್ತಾರೆ. ಇಲ್ಲಿ ಬೆಳೆಯಲಾಗುವ ಅಂತಹ ಕೃಷಿ ಉತ್ಪನ್ನಗಳು ನೋಡಲು ಸುಂದರವಾಗಿ ಕೂಡ ಇರುತ್ತದೆ. ಇಲ್ಲಿನ ಮಣ್ಣು ಅಷ್ಟೊಂದು ಸಮೃದ್ಧವಾಗಿದೆ. ಕೃಷಿ ಬೆಳೆಗಳನ್ನು ಕೂಡ ಸಾಕಷ್ಟು ಉತ್ತಮ ರೀತಿಯಲ್ಲಿ ಬೆಳೆಯುತ್ತಾರೆ. ಇಂತಹ ಶ್ರೀಮಂತ ಹಳ್ಳಿ ನಮ್ಮ ಭಾರತ ದೇಶದಲ್ಲಿ ಇರುವುದು ನಮ್ಮ ಅದೃಷ್ಟವೆಂದು ಹೇಳಬಹುದಾಗಿದೆ. ಹಳ್ಳಿಯ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.

Leave A Reply

Your email address will not be published.