ಭಾರತದ ಈ ರಾಜ್ಯ ವಿಶ್ವಕ್ಕೆ ಮಾದರಿ ಎಂದ ವಿಶ್ವಸಂಸ್ಥೆ. ಯಾವುದೇ ಈ ರಾಜ್ಯ? ಮಾದರಿ ಆಗುವಂತಹ ಬದಲಾವಣೆ ಏನಾಗಿದೆ ಗೊತ್ತೇ?
ಭಾರತ ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಸಾಲಿನಲ್ಲಿ ಮುಂಚೂಣಿಯಲ್ಲಿ ಸಾಗುತ್ತಿದೆ. ದೇಶ ಇಂದು ವಿಶ್ವ ಮಟ್ಟದಲ್ಲಿ ತನ್ನ ಹೆಸರನ್ನು ಮಾಡಿದೆ. ಎಲ್ಲಾ ವಿಚಾರಗಳಿಗೂ ಭಾರತವನ್ನು ಮುಂದಿಟ್ಟು ನಿರ್ಧಾರ ಮಾಡುವ ಹಂತಕ್ಕೆ ದೇಶ ಬಂದಿರುವುದು ಬಹಳ ಸಂತಸದ ವಿಷಯ. ಆದರೆ ನಾವು ಇಂದು ನಮ್ಮ ದೇಶದ ಒಂದು ರಾಜ್ಯದ ಬಗೆಗೆ ತಿಳಿಯಲು ಹೊರಟಿದ್ದೇವೆ. ಈ ರಾಜ್ಯ ವನ್ನು ಮಾದರಿ ರಾಜ್ಯ ಎಂದು ಹೇಳಲಾಗುತ್ತಿದೆ. ಹಾಗಾದರೆ ಯಾವರೀತಿ ಬದಲಾವಣೆ ಸಾಧ್ಯ ಆಯಿತು ಬನ್ನಿ ತಿಳಿಯೋಣ.
ಆ ರಾಜ್ಯ ಒಡಿಶಾ ,ಹೌದು 1999 ರಲ್ಲಿ ಬಂದ ಸೈಕ್ಲೋನ್ ಈ ರಾಜ್ಯವನ್ನು ಸಂಪೂರ್ಣವಾಗಿ ನಾಶ ಮಾಡಿತ್ತು , 10000 ಜನ ಪ್ರಾಣ ಕಳೆದು ಕೊಂಡಿದ್ದರು.ಎಲ್ಲಿಯ ಮಟ್ಟಿಗೆ ಎಂದರೆ ಮತ್ತೆ 0 ದಿಂದ ಆರಂಭ ಮಾಡಬೇಕಿತ್ತು. ಸದಾ ಜಪಾನ್ ದೇಶವನ್ನು ಹೊಗಳುವ ಜನರು ನಮ್ಮದೇ ದೇಶದ ಈ ರಾಜ್ಯದ ಬಗ್ಗೆ ತಿಳಿಯಬೇಕು. ಹೌದು ಇಂದು ಇದೆ ರಾಜ್ಯದಲ್ಲಿ ಪ್ರತಿಯೊಬ್ಬರಿಗೂ 5 ರೂಪಾಯಿಯಲ್ಲಿ ಹೊಟ್ಟೆ ತುಂಬಾ ಊಟ ಸಿಗುತ್ತದೆ. ರೈತ ದೇಶದ ಬೆನ್ನೆಲುಬು ಎನ್ನುತ್ತಾರೆ ಆದ್ದರಿಂದ ರೈತರಿಗೆ ಇಲ್ಲಿ ಉಚಿತ ಆರೋಗ್ಯ ಸೇವೆ ಸಿಗುತ್ತದೆ.
ಇಲ್ಲಿಯ ಮುಖ್ಯಮಂತ್ರಿ ಎಷ್ಟರ ಮಟ್ಟಿಗೆ ಸ್ಟ್ರಿಕ್ಟ್ ಎಂದರೆ ತನ್ನದೇ ಕ್ಯಾಬಿನೆಟ್ ನ ಮೂರು ಮಂತ್ರಿಗಳನ್ನು ವಜಾ ಮಾಡಿದ್ದಾರೆ ಬ್ರಷ್ಟಾಚಾರದ ಆರೋಪಕ್ಕೆ. ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಿರುವ ಇಲ್ಲಿ 5 ಲಕ್ಷಕ್ಕೂ ಹೆಚ್ಚು ಸ್ವಸಹಾಯ ಸಂಘಗಳು ಇದೆ. ಮಹಿಳೆಯರಿಗೆ 1% ಬಡ್ಡಿ ದರದಲ್ಲಿ ಸಾಲ ನೀಡಲಾಗುತ್ತದೆ ಇದರ ಉಪಯೋಗ 50ಲಕ್ಷಕ್ಕೂ ಹೆಚ್ಚು ಮಹಿಳೆಯರು ಪಡೆದಿದ್ದಾರೆ.
ಇನ್ನು ಕ್ರೀಡೆಯ ಬಗೆಗೆ ನೋಡುವುದಾದರೆ ಹಾಕಿ ಭಾರತದ ರಾಷ್ಟ್ರೀಯ ಕ್ರೀಡೆ ಆದರೆ ಅದಕ್ಕೆ ಸರಿಯಾದ ಸಪೋರ್ಟ್ ಇಲ್ಲ, ಹೀಗಿರುವಾಗ ಒಡಿಶಾ ಭಾರತ ಹಾಕಿ ತಂಡಕ್ಕೆ ಸ್ಪಾನ್ಸರ್ ಮಾಡುತ್ತದೆ. ಹೌದು ಈಗಲೂ ಇಲ್ಲಿ ಸೈಕ್ಲೋನ್ ಬರುತ್ತದೆ ಆದರೆ ಇಲ್ಲಿನ ಡಿಸಾಸ್ಟರ್ ಮ್ಯಾನೇಜ್ ಮೆಂಟ್ ಅಷ್ಟು ಮುಂದುವರಿದು ಕೆಲಸ ಮಾಡುತ್ತದೆ. ಈ ಎಲ್ಲಾ ಮಾದರಿ ಕೆಲಸಗಳಿಗೆ ಒಡಿಶಾ ವನ್ನು ವಿಶ್ವಸಂಸ್ಥೆ ಹೋಗಳಿದೆ.