ಭಾರತೀಯ ಕ್ರಿಕೆಟ್ ತಂಡಕ್ಕೆ ರೋಹಿತ್ ಶರ್ಮ ಸೂಕ್ತ ಆಯ್ಕೆ. ಇದಕ್ಕೆ ಕಾರಣ ನೀಡಿದ ಗಂಗೂಲಿ. ಏನಿದು ಕಾರಣ?

416

ಬಿಸಿಸಿಐ ಹಾಗು ಭಾರತೀಯ ಕ್ರಿಕೆಟ್ ತಂಡದಲ್ಲಿ ಹಲವಾರು ಬದಲಾವಣೆ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿದೆ. ಒಳ ಜಗಳ ಹಿಂದೆಂದೂ ಹೊರಗೆ ಬರುತ್ತಿರಲಿಲ್ಲ. ಈಗ ವಿರಾಟ್ ಕೊಹ್ಲಿ ಪ್ರೆಸ್ ಮೀಟ್ ನಡೆಸಿ ಒಳ ಜಗಳದ ಬಗ್ಗೆ ಜಗಜ್ಜಾಹಿರಾ ಮಾಡಿದ್ದಾರೆ. ಆಯ್ಕೆ ಸಮಿತಿ ಪ್ರಕಾರ ವಿರಾಟ್ ಕೊಹ್ಲಿ ನಿಯಮಿತ ಫಾರ್ಮ್ಯಾಟ್ ಗಳಾದ ಏಕದಿನ ಹಾಗು ಟಿ-೨೦ ಗೆ ಒಬ್ಬರೇ ನಾಯಕರಿರಬೇಕೆನ್ನುವುದು. ಅದಕ್ಕಾಗಿ ವಿರಾಟ್ ಕೊಹ್ಲಿ ಗೆ ಏಕದಿನ ನಾಯಕ ಸ್ಥಾನದಿಂದ ಕೆಳಗೆ ಇಳಿಯುವಂತೆ ೨ ದಿನಗಳ ಕಾಲಾವಕಾಶ ನೀಡಿಯೂ ಕೆಳಗಿಳಿಯದ ಕಾರಣ ಬಿಸಿಸಿಐ ವಿರಾಟ್ ಕೊಹ್ಲಿ ಅವರನ್ನು ಬಲವಂತವಾಗಿ ಕೆಳಗಿಳಿಸಿತು.

ಟೆಸ್ಟ್ ಕ್ರಿಕೆಟ್ ಅಲ್ಲಿ ನಾಯಕನಾಗಿ ಮುಂದುವರೆಯುವಂತೆ ಕೊಹ್ಲಿಗೆ ಹೇಳಿದರು ಕೂಡ ಏಕದಿನ ಹಾಗು ಟಿ-೨೦ ಗೆ ನಾಯಕನನ್ನಾಗಿ ರೋಹಿತ್ ಶರ್ಮ ಅವರನ್ನು ಆಯ್ಕೆ ಮಾಡಿದೆ ಬಿಸಿಸಿಐ. ಸಾಮಾಜಿಕ ಜಾಲತಾಣ ಹಾಗು ಮಾಧ್ಯಮಗಳಲ್ಲಿ ರೋಹಿತ್ ಶರ್ಮ ಹಾಗು ವಿರಾಟ್ ಕೊಹ್ಲಿ ಅವರ ಅಭಿಮಾನಿಗಳ ನಡುವೆ ಪೈಪೋಟಿ ನಡೆಯುತ್ತಿರುವುದರ ನಡುವೆ ವಿರಾಟ್ ಕೊಹ್ಲಿ ಪ್ರೆಸ್ ಮೀಟ್ ಮುಕಾಂತರ ರೋಹಿತ್ ಶರ್ಮ ಹಾಗು ತಮ್ಮ ನಡುವೆ ಯಾವ ಮನಸ್ತಾಪ ಇಲ್ಲ ಎಂದು ಹೇಳಿಕೆ ನೀಡಿದ್ದಾರೆ. ಇದರ ಮದ್ಯೆ ಬಿಸಿಸಿಐ ಅಧ್ಯಕ್ಷ ಗಂಗೂಲಿ ರೋಹಿತ್ ಶರ್ಮ ಅವರನ್ನು ನಾಯಕ ಮಾಡಿದ್ದಕ್ಕೆ ಕಾರಣ ಕೂಡ ಕೊಟ್ಟಿದ್ದಾರೆ.

ಐಪಿಎಲ್ ಅಲ್ಲಿ ಮುಂಬೈ ಇಂಡಿಯನ್ಸ್ ಪರ ಐದು ಬಾರಿ ಟ್ರೋಫಿ ಗೆದ್ದು ತಮ್ಮ ನಾಯಕ್ತ್ವವನ್ನು ಸಾಬೀತು ಮಾಡಿದ್ದಾರೆ. ಡೆಕ್ಕನ್ ಚಾರ್ಜರ್ಸ್ ನಾಯಕನಾಗಿದ್ದಾಗ ಕೂಡ ಒಂದು ಪ್ರಶಸ್ತಿ ಗೆದ್ದಿದ್ದಾರೆ. ಒತ್ತಡದಲ್ಲಿ ಟಿ-೨೦ ನಾಯಕತ್ವವನ್ನು ಉತ್ತಮವಾಗಿ ನಿಭಾಯಿಸುತ್ತಾರೆ. ಈಗಾಗಲೇ ನೋಡಿದಂತೆ ನ್ಯೂಜಿಲ್ಯಾಂಡ್ ವಿರುದ್ಧ ೩-೦ ಅಂತರದಲ್ಲಿ ಗೆಲ್ಲುವುದರ ಮೂಲಕ ತಮ್ಮ ನಾಯಕತ್ವವನ್ನು ಸಾಬೀತು ಪಡಿಸಿದ್ದಾರೆ ಎಂದು ಗಂಗೂಲಿ ಹೇಳಿದ್ದಾರೆ. ೨೦೧೭ ರ ಚಾಂಪಿಯನ್ಸ್ ಟ್ರೋಫಿ ಹಾಗು ೨೦೧೯ ರ ವಿಶ್ವಕಪ್ ಸಮಯದಲ್ಲಿ ನಮ್ಮ ತಂಡ ಉತ್ತಮವಾಗಿತ್ತು. ಒಂದು ಕೆಟ್ಟ ದಿನ ೨ ತಿಂಗಳ ಸಂಪೂರ್ಣ ಶ್ರಮವನ್ನು ಅಳಿಸಿಹಾಕಿತು. ನಂತರದ ೪-೫ ವರ್ಷದ ನಮ್ಮ ತಂಡ ಆಡಿದ ಆಟ ಬಹಳ ಕಳಪೆಯಾಗಿತ್ತು ಎಂದು ಗಂಗೂಲಿ ಹೇಳಿದ್ದಾರೆ.

Leave A Reply

Your email address will not be published.