ಭಾರತೀಯ ಹುಡುಗನ ಮೇಲಿನ ಪ್ರೀತಿಯಿಂದ ಮದುವೆಗಾಗಿ 5000 ಕಿಮೀ ಹಾರಿ ಬಂದಳು ಈ ವಿದೇಶಿ ಹುಡುಗಿ. ಯಾರಿದು ಜೋಡಿ?

710

ಪ್ರೀತಿ ಎಂದರೆ ಹಾಗೆ ನೋಡಿ ಎಂತಹವರನ್ನೂ ಕೂಡ ಅದು ಮರುಳು ಮಾಡುತ್ತದೆ. ಪ್ರೀತಿಗೆ ಕಣ್ಣಿಲ್ಲ ಅದು ಕುರುಡು ಎಂದು ಹೇಳುವ ವಾಡಿಕೆ ಉಂಟು. ಅದೇ ರೀತಿ ಹಲವಾರು ನಿದರ್ಶನ ನಮ್ಮ ಮುಂದೆ ಇದೆ. ಫೇಸ್ಬುಕ್ ಲವ್, ಬಸ್ ನಲ್ಲಿ ಲವ್, ಕಾಲೇಜು ಲವ್, ಆಫಿಸ್ ಲವ್ ಹೀಗೆ ಎಲ್ಲಾ ಕಡೆ ಲವ್ ಲವ್ ಎಲ್ಲಾ ಕಡೆಯಲ್ಲೂ ಈ ಪ್ರೀತಿ ಪ್ರೇಮದ ಕಥೆ ಮಾಮೂಲಿ ಆಗಿದೆ.

ಪ್ರೀತಿ ಪ್ರೇಮಕ್ಕೆ ಜಾತಿ ಇಲ್ಲ, ದೇಶ ಇಲ್ಲ ಧರ್ಮ ಇಲ್ಲ ಇದು ಎಲ್ಲಾ ಎಲೆಗಳ ಮೀರಿ ಮನಸು ಮನಸಿನೊಳಗೆ ಆಗುವ ಭಾವನೆಗಳ ಆಟ. ಇದೀಗ ನಾವು ತಿಳಿಯಲು ಹೊರಟ ಈ ಸುದ್ದಿ ಅಂತಹದೇ ಒಂದು ಎಲೆಗಳ ಮೀರಿದ ಪ್ರೀತಿಯ ಕಥೆ. ಟರ್ಕಿಶ್ ದೇಶದ ಮಹಿಳೆ ಒಬ್ಬಳು ಭಾರತೀಯ ಹುಡುಗನ ಪ್ರೀತಿಗೆ ಬಿದ್ದು ಭಾರತೀಯ ಸಂಸ್ಕೃತಿ ಪ್ರಕಾರ ಮದುವೆ ಆದ ಕಥೆ ಇದು.

2016 ರಲ್ಲಿ ಟರ್ಕಿಶ್ ದೇಶದ ಹುಡುಗಿ ಗಿಜೆಮ್ ಮತ್ತು ಭಾರತ ದೇಶದ ಆಂಧ್ರ ಮೂಲದ ಹುಡುಗ ಮಧು ಒಂದು ಪ್ರೊಜೆಕ್ಟ್ ವಿಚಾರವಾಗಿ ಭೇಟಿ ಆಗಿದ್ದರು , ಆಗಲೇ ಇಬ್ಬರು ಸ್ನೇಹಿತರಾಗಿದ್ದರು. ನಂತರ ಮಧು ಅವರು ಕೆಲಸ ನಿಮಿತ್ತ ಟರ್ಕಿ ದೇಶಕ್ಕೆ ಹೋದಾಗ ಈ ಸ್ನೇಹ ಮತ್ತಷ್ಟು ಗಾಢವಾಗಿ ಬೆಳೆಯಿತು ಮತ್ತು ಇದು ಪ್ರೀತಿಯಾಗಿ ಪರಿವರ್ತನೆ ಹೊಂದಿತ್ತು. ಆದರೆ ಮಧು ಬೇರೆ ಹುಡುಗರ ತರ ಆಕೆಯನ್ನು ಬಳಸಿಕೊಂಡು ಹಾಗೆ ಬಿಟ್ಟು ಬರಲಿಲ್ಲ. ಇಬ್ಬರು ಕೂಡ ಒಟ್ಟಾಗಿ ತಮ್ಮ ಈ ಸಂಬಂಧವನ್ನು ಮುಂದಿನ ಹಂತಕ್ಕೆ ಕೊಂಡಯ್ಯಲು ನಿರ್ಧಾರ ಮಾಡುತ್ತಾರೆ. ಮಧು ಭಾರತಕ್ಕೆ ಬಂದು ತನ್ನ ಮನೆಯವರಲ್ಲಿ ವಿಚಾರ ತಿಳಿಸಿ ಇದೀಗ ಆಂಧ್ರ ಪ್ರದೇಶದಲ್ಲಿ ಭಾರತೀಯ ಸಂಸ್ಕೃತಿ ಪ್ರಕಾರವಾಗಿ ಮದುವೆ ಸಮಾರಂಭ ನಡೆದಿದೆ. ಇಬ್ಬರ ಮುಂದಿನ ಜೀವನ ಸುಖಮಯ ಆಗಿರಲಿ ಎಂದು ಎಲ್ಲರೂ ಆಶಿಸೋಣ.

Leave A Reply

Your email address will not be published.