ಭಾರತ ತಂಡದಲ್ಲಿ ಖಾಯಂ ಸ್ಥಾನ ಪಡೆಯಲು ಒದ್ದಾಡುತ್ತಿರುವ ಶಮಿ ರವರ ಹೊಸ ಕಾರಿನ ಬೆಲೆ ಕೇಳಿದರೆ ನಿಜಕ್ಕೂ ಒಂದು ಕ್ಷಣ ಶಾಕ್ ಆಗ್ತೀರಾ. ಎಷ್ಟು ಗೊತ್ತೇ??
ನಮಸ್ಕಾರ ಸ್ನೇಹಿತರೇ ಭಾರತೀಯ ಕ್ರಿಕೆಟ್ ತಂಡದ ಅತ್ಯಂತ ಯಶಸ್ವಿ ಬೌಲರ್ ಗಳಲ್ಲಿ ಹಲವಾರು ಜನರ ಹೆಸರು ಬರುತ್ತದೆ ಆದರೆ ಇಂದು ನಾವು ಮಾತನಾಡಲು ಹೊರಟಿರುವುದು ತಮ್ಮ ಸ್ವಿಂಗ್ ಹಾಗೂ ವೇಗದ ಬೌಲಿಂಗ್ ಮೂಲಕ ತಮ್ಮ ಗುರುತನ್ನು ಸ್ಥಾಪಿಸಿಕೊಂಡಿರುವ ಮೊಹಮ್ಮದ್ ಶಮಿ ಅವರ ಕುರಿತಂತೆ.
ನೋಡಲು ತುಂಬಾನೇ ಸಿಂಪಲ್ ಆಗಿರುವ ಶಮಿ ಅವರು ಐಷಾರಾಮಿ ಜೀವನಕ್ಕೆ ಹೆಸರುವಾಸಿಯಾಗಿರುವ ಕ್ರಿಕೆಟಿಗ ಆಗಿದ್ದಾರೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಇನ್ನು ಸದ್ಯಕ್ಕೆ ತಂಡದಲ್ಲಿ ಕಾಣಿಸಿಕೊಳ್ಳದಿರುವ ಮೊಹಮ್ಮದ್ ಶಮಿ ಅವರು ವಿಶ್ರಾಂತಿಯಲ್ಲಿದ್ದಾರೆ. ಈಗ ಮೊಹಮ್ಮದ್ ಶಮಿ ಅವರು ಸುದ್ದಿ ಆಗುತ್ತಿರುವುದು ತಮ್ಮ ಕ್ರಿಕೆಟ್ ಅಥವಾ ವೈಯಕ್ತಿಕ ಜೀವನದ ಬಗ್ಗೆ ಅಲ್ಲ ಬದಲಾಗಿ ಅವರು ಖರೀದಿಸಿರುವ ಹೊಸ ಕಾರಿನ ಕುರಿತಾಗಿ. ಹೌದು ಮೊಹಮ್ಮದ್ ಶಮಿ ಅವರು ಖರೀದಿಸಿರುವ ಹೊಸ ಕಾರ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡುತ್ತಿದ್ದು ಸ್ವತಹ ಶಮಿ ಅವರ ತಮ್ಮ instagram ಖಾತೆಯಲ್ಲಿ ಈ ಕಾರ್ ಖರೀದಿಸಿರುವ ಬಗ್ಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಮೊಹಮ್ಮದ್ ಶಮಿ ಖರೀದಿಸಿರುವ ಹೊಸ ಕಾರು ಜಾಗ್ವಾರ್ ಎಫ್ ಸೀರೀಸ್ ಆಗಿದೆ.
ಈ ಕಾರಿಗೆ ನೂರು ಕಿಲೋಮೀಟರ್ ವೇಗವನ್ನು 3.7 ಸೆಕೆಂಡುಗಳಲ್ಲಿ ಕ್ರಮಿಸುವ ಸಾಮರ್ಥ್ಯ ಇದೆ. ಈ ಕಾರಿನಲ್ಲಿ ಕೇವಲ ಇಬ್ಬರೂ ಮಾತ್ರ ಕುಳಿತುಕೊಳ್ಳುವ ಸೀಟಿಂಗ್ ವ್ಯವಸ್ಥೆ ಇದೆ. ಇದರ ಗರಿಷ್ಠ ವೇಗದ ಮಿತಿ 250 ಕಿಲೋ ಮೀಟರ್ ಆಗಿದೆ. 1997 ಸಿಸಿ ಹಾಗೂ 5000 ಸಿಸಿಯ 2 ಇಂಜಿನ್ ಗಳನ್ನು ಈ ಕಾರು ಹೊಂದಿದೆ. ಇನ್ನು ಈ ಕಾರಿನ ಬೆಲೆ ಬರೋಬ್ಬರಿ 98.5 ಲಕ್ಷ ರೂಪಾಯಿಗಳಾಗಿವೆ. ಅಂದರೆ ಒಟ್ಟಾರೆಯಾಗಿ ಮಹಮ್ಮದ್ ಶಮಿ ಈ ಕಾರನ್ನು ಖರೀದಿಸುವಾಗ ಒಂದು ಕೋಟಿ ರೂಪಾಯಿಗೂ ಅಧಿಕ ಮೊತ್ತವನ್ನು ಖರ್ಚು ಮಾಡಿದ್ದಾರೆ ಎಂದು ಹೇಳಬಹುದಾಗಿದೆ. ಕಾರಿನ ಕುರಿತಂತೆ ಸುದ್ದಿ ಆಗುತ್ತಿರುವ ಮೊಹಮ್ಮದ್ ಶಮಿ ಮುಂದಿನ ದಿನಗಳಲ್ಲಿ ಟಿ ಟ್ವೆಂಟಿ ವಿಶ್ವಕಪ್ ಗೆ ಆಯ್ಕೆಯಾಗುತ್ತಾರೋ ಇಲ್ಲವೇ ಎಂಬುದನ್ನು ಕಾದು ನೋಡಬೇಕಾಗಿದೆ.