ಭಾರತ ತಂಡದಲ್ಲಿ ಜಡೇಜಾ ಸ್ಥಾನ ತುಂಬುವುದು ಈತ ಮಾತ್ರ: ಭರವಸೆಯ ಮಾತು ಆಡಿ ರೋಹಿತ್ ಆಯ್ಕೆ ಮಾಡಿದ್ದು ಯಾರನ್ನು ಗೊತ್ತೇ??

116

ಟಿ20 ವಿಶ್ವಕಪ್ ಪಂದ್ಯಗಳು ಶುರುವಾಗಲು ಇನ್ನು ಒಂದು ತಿಂಗಳು ಸಮಯ ಸಹ ಇಲ್ಲ. ಈಗಾಗಲೇ ವಿಶ್ವಕಪ್ ತಂಡದಲ್ಲಿ ಯಾರೆಲ್ಲಾ ಸದಸ್ಯರು ತಂಡದಲ್ಲಿದ್ದಾರೆ ಎಂದು ಬಿಸಿಸಿಐ ಪ್ರಕಟಣೆ ಮಾಡಿದೆ. ಏಷ್ಯಾಕಪ್ ಪಂದ್ಯಗಲ್ಲಿ ಆಕ್ರಮಣಕಾರಿ ಬೌಲರ್ ಗಳ ಸಮಸ್ಯೆ ಭಾರತ ತಂಡಕ್ಕೆ ಇತ್ತು, ವಿಶ್ವಕಪ್ ನಲ್ಲಿ ಆ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವ ಹಾಗೆ ಭಾರತ ತಂಡ ಪ್ಲಾನ್ ಮಾಡಿಕೊಂಡಿದೆ. ಭಾರತ ತಂಡಕ್ಕೆ ಆಲ್ ರೌಂಡರ್ ಆಗಿ ಉತ್ತಮವಾದ ಪ್ರದರ್ಶನ ನೀಡುತ್ತಿದ್ದವರು ರವೀಂದ್ರ ಜಡೇಜಾ.

ಬೌಲಿಂಗ್ ಹಾಗೂ ಬ್ಯಾಟಿಂಗ್ ಎರಡರಲ್ಲು ಅಪಾಯಕಾರಿ ಪ್ರದರ್ಶನ ನೀಡುತ್ತಿದ್ದ ರವೀಂದ್ರ ಜಡೇಜಾ ಅವರು ಇದೀಗ ಭಾರತ ತಂಡದಿಂದ ಹೊರಗುಳಿದಿದ್ದಾರೆ ಎನ್ನುವ ವಿಚಾರ ನಮಗೆ ಗೊತ್ತಿದೆ. ಇಂಜುರಿ ಆದ ಕಾರಣ ರವೀಂದ್ರ ಜಡೇಜಾ ಅವರಿಗೆ ಶಸ್ತ್ರಚಿಕಿತ್ಸೆ ಮಾಡಿಸಲಾಗಿದೆ. ಶಸ್ತ್ರಚಿಕಿತ್ಸೆ ಮುಗಿದಿದ್ದರು ಸಹ, ಜಡೇಜಾ ಅವರಿಗೆ ವಿಶ್ರಾಂತಿ ಅಗತ್ಯ ಇರುವುದರಿಂದ ಅವರನ್ನು ವಿಶ್ವಕಪ್ ತಂಡದಿಂದ ಕೈಬಿಡಲಾಗಿದೆ. ಇವರ ಅಲಭ್ಯತೆ ಭಾರತ ತಂಡಕ್ಕೆ ತೊಂದರೆಯೇ ಆಗಿದೆ ಎಂದರೆ ತಪ್ಪಾಗುವುದಿಲ್ಲ.

ಇದೀಗ ಕ್ಯಾಪ್ಟನ್ ರೋಹಿತ್ ಶರ್ಮಾ ಅವರು ರವೀಂದ್ರ ಜಡೇಜಾ ಅವರಂತೆಯೇ ಪ್ರದರ್ಶನ ನೀಡಬಲ್ಲ ಉತ್ತಮ ಆಟಗಾರನನ್ನು ಹೆಸರಿಸಿದ್ದಾರೆ. ರೋಹಿತ್ ಅವರು ಹೇಳಿರುವ ಪ್ರಕಾರ, ಅಕ್ಷರ್ ಪಟೇಲ್ ಅವರು ರವೀಂದ್ರ ಜಡೇಜಾ ಅವರಷ್ಟೇ ಸಾಮರ್ಥ್ಯ ಹೊಂದಿದ್ದಾರೆ ಎಂದು ಹೇಳಿದ್ದಾರೆ. “ಟಿ20 ವಿಶ್ವಕಪ್ ನಲ್ಲಿ ಜಡೇಜಾ ಅವರ ಅಲಭ್ಯತೆ ಕಾಡುತ್ತದೆ, ಆದರೆ ಅಕ್ಷರ್ ಜಡೇಜಾ ಅವರ ಹಾಗೆ ಅದ್ಭುತವಾದ ಮನರಂಜನೆ ನೀಡುವ ಭರವಸ್ ಇದೆ. ಅಕ್ಷರ್ ವಿಶ್ವಕಪ್ ತಂಡದ ಯೋಜನೆಯ ಭಾಗವಾಗಿದ್ದರು..” ಎಂದಿದ್ದಾರೆ ಕ್ಯಾಪ್ಟನ್ ರೋಹಿತ್ ಶರ್ಮಾ.

Leave A Reply

Your email address will not be published.