ಭಾರತ ತಂಡದಲ್ಲಿ ಸ್ಥಾನ ಪಡೆಯುತ್ತಿದ್ದಂತೆ, ಆರ್ಸಿಬಿ ತಂಡದ ಕುರಿತು ರಜತ್ ಪಾಟೀದಾರ್ ಹೇಳಿದ್ದೇನು ಗೊತ್ತೇ??
ಭಾರತ ವರ್ಸಸ್ ಸೌತ್ ಆಫ್ರಿಕಾ ಓಡಿಐ ಪಂದ್ಯಗಳು ಇಂದಿನಿಂದ ಶುರುವಾಗಿವೆ. ಈ ಪಂದ್ಯಕ್ಕೆ ನಮ್ಮ ಆರ್.ಸಿ.ಬಿ ತಂಡದ ಆಟಗಾರ ರಜತ್ ಪಟಿದಾರ್ ಮತ್ತು ಮುಖೇಶ್ ಕುಮಾರ್ ಅವರು ಆಯ್ಕೆಯಾಗಿದ್ದಾರೆ. ಈ ಮೂಲಕ ಆರ್.ಸಿ.ಬಿ ತಂಡದ ನಾಲ್ವರು ಆಟಗಾರರು ಭಾರತ ತಂಡದಲ್ಲಿ ಇರುವುದು ಆರ್.ಸಿ.ಬಿ ಅಭಿಮಾನಿಗಳಿಗೆ ಬಹಳ ಸಂತೋಷದ ವಿಚಾರ. ಆರ್.ಸಿ.ಬಿ ತಂಡದ ಎಲ್ಲಾ ಆಟಗಾರರು ಭಾರತದ ಪರವಾಗಿ ಅದ್ಭುತವಾದ ಪ್ರದರ್ಶನ ನೀಡುತ್ತಿದ್ದಾರೆ. ಇದೀಗ ರಜತ್ ಅವರು ಭಾರತ ತಂಡಕ್ಕೆ ಆಯ್ಕೆಯಾದ ಬಳಿಕ ಆರ್.ಸಿ.ಬಿ ಬಗ್ಗೆ ಹೇಳಿದ್ದೇನು ಗೊತ್ತಾ?
ಸಂದರ್ಶನದಲ್ಲಿ ಮಾತನಾಡಿದ ರಜತ್ ಪಟಿದಾರ್ ಅವರು, “ಐಪಿಎಲ್ ನಲ್ಲಿ ಆರ್.ಸಿ.ಬಿ ಪರವಾಗಿ ಆಡಿದ ಅದೊಂದು ಇನ್ನಿಂಗ್ಸ್ ಇಂದ ನನ್ನ ವೃತ್ತಿ ಜೀವನಕ್ಕೆ ದೊಡ್ಡ ತಿರುವು ಸಿಕ್ಕಿದೆ. ಭಾರತ ತಂಡದ ಪರವಾಗಿ ಆಡಲು ಬಹಳ ಸಂತೋಷವಾಗಿದೆ. ಇದು ನನ್ನ ಕನಸಾಗಿತ್ತು..” ಎಂದಿದ್ದಾರೆ ರಜತ್. ಹಾಗೂ ದಿನೇಶ್ ಕಾರ್ತಿಕ್ ಅವರು ಇತ್ತೀಚೆಗೆ ರಜತ್ ಪಟಿದಾರ್ ಅವರು ಭಾರತ ತಂಡಕ್ಕೆ ಆಯ್ಕೆಯಾಗಿದ್ದರ ಬಗ್ಗೆ ಟ್ವೀಟ್ ಮಾಡಿ ಶುಭ ಹಾರೈಸಿದ್ದರು. “ರಜತ್ ಪಟಿದಾರ್ ಅವರನ್ನು ಭಾರತ ತಂಡದಲ್ಲಿ ನೋಡಲು ಬಹಳ ಸಂತೋಷವಾಗಿದೆ, ನ್ಯಾಷನಲ್ ಟೀಮ್ ನಲ್ಲಿರಲು ಅವರು ಅರ್ಹರಾಗಿದ್ದಾರೆ. ವೆಲ್ ಡನ್ ಮುಖೇಶ್ ಕುಮಾರ್, ಸರ್ಫಾರಾಜ್ ಖಾನ್ ಮತ್ತು ಬಾಬಾ ಇಂದ್ರಜಿತ್ ಈಗ ನಮ್ಮ ತಂಡದಲ್ಲಿದ್ದಾರೆ, ಇವರು ಅಸಾಧಾರಣರು, ಇವರ ಅದ್ಭುತ ಪ್ರದರ್ಶನವನ್ನು ಮರೆಯಲು ಸಾಧ್ಯವಿಲ್ಲ .”ಎಂದು ಡಿಕೆ ಟ್ವೀಟ್ ಮಾಡಿದ್ದರು.
ಇದರ ಬಗ್ಗೆ ಮಾತನಾಡಿದ ರಜತ್, “ದಿನೇಶ್ ಕಾರ್ತಿಕ್ ಅವರ ನನ್ನ ಬಗ್ಗೆ ಟ್ವೀಟ್ ಮಾಡಿದ್ದನ್ನು ನೋಡಿದ್ದೇನೆ, ತುಂಬಾ ಸಂತೋಷ ಆಗಿತ್ತು, ಅವರು ನನಗೆ ಸ್ಫೂರ್ತಿ, ಹಲವು ವರ್ಷಗಳಿಂದ ಭಾರತ ತಂಡದ ಪರವಾಗಿ ಆಡುತ್ತಿದ್ದಾರೆ, ಅವರು ನನ್ನ ಬಗ್ಗೆ ಟ್ವೀಟ್ ಮಾಡಿದ್ದು ನಿಜಕ್ಕೂ ಹೆಮ್ಮೆಯಾಗಿತ್ತು..”ಎಂದಿದ್ದಾರೆ. ಜೊತೆಗೆ ಅರ್.ಸಿ.ಬಿ ತಂಡದಲ್ಲಿ ಮೊದಲ ಬಾರಿಗೆ ವಿರಾಟ್ ಕೋಹ್ಲಿ ಮತ್ತು ಎಬಿಡಿ ಅವರನ್ನು ನೋಡಿದ ಕ್ಷಣವನ್ನು ಮೆಲುಕು ಹಾಕಿದ್ದಾರೆ. “ವಿರಾಟ್ ಮತ್ತು ಎಬಿಡಿ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ಲೆಜೆಂಡ್ಸ್, ಅವರಿಬ್ಬರನ್ನು ಮೊದಲ ಬಾರಿಗೆ ನೋಡಿದಾದ ತುಂಬಾ ನರ್ವಸ್ ಆಗಿದ್ದೆ, ಅವರೇ ಬಂದು ನನ್ನ ಜೊತೆ ಮಾತನಾಡಿಸಿದಾಗ ತುಂಬಾ ಖುಷಿಯಾಗಿತ್ತು..”ಎಂದಿದ್ದಾರೆ ರಜತ್.