ಭಾರತ ತಂಡದ ಈ ಸರ್ವ ಶ್ರೇಷ್ಠ ಆಟಗಾರ ಮುಂಬರುವ ಪಂದ್ಯಗಳಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವುದು ಅನುಮಾನ? ಯಾರಿವರು ಏನಿದರ ಹಿಂದಿನ ಕಾರಣ?
ಭಾರತ ತಂಡ 2021 ರ ಕ್ಯಾಲೆಂಡರ್ ವರ್ಷದಲ್ಲಿ ಅತ್ಯಂತ ಶ್ರೇಷ್ಠ ಮಟ್ಟದ ಕ್ರಿಕೆಟ್ ಆಟದ ಪ್ರದರ್ಶನ ನೀಡಿದೆ. ಹಿಂದೆಂದೂ ಕಾಣದ ಸಾಧನೆಯನ್ನು ಈ ವರ್ಷದ ಟೆಸ್ಟ್ ಕ್ರಿಕೆಟ್ ನಲ್ಲಿ ಭಾರತ ಕಂಡಿದೆ. ಐಸಿಸಿ ಟ್ರೋಫಿ ವಿಚಾರ ಬಿಟ್ಟರೆ ಮಿಕ್ಕುಳಿದ ಎಲ್ಲಾ ಸರಣಿಯಲ್ಲೂ ವಿರಾಟ್ ಕೊಹ್ಲಿ ನೇತೃತ್ವದ ಭಾರತ ತಂಡ ಯಶಸ್ವಿ ಪ್ರದರ್ಶನ ನೀಡುತ್ತಿದೆ. ಇತ್ತೀಚೆಗೆ ನಡೆದ ದಕ್ಷಿಣ ಆಫ್ರಿಕಾ ವಿರುದ್ಧ ಪಂದ್ಯದಲ್ಲಿ ಉತ್ತಮ ಸಾಧನೆ ತೋರುವ ಮೂಲಕ ಟೆಸ್ಟ್ ರಾಂಕಿಂಗ್ ನಲ್ಲು ಪ್ರಥಮ ಸ್ಥಾನ ಪಡೆದುಕೊಂಡಿದೆ. ಇಂತಹ ಸಾಧನೆಯ ಮದ್ಯೆ ಒಬ್ಬ ಆಟಗಾರ ಆಯ್ಕೆ ಸಮಿತಿಯನ್ನು ಮತ್ತೆ ಮತ್ತೆ ನಿರಾಶೆ ಮೂಡಿಸುತ್ತಿದ್ದಾರೆ.ಒಂದು ಸಮಯದಲ್ಲಿ ಅತೀ ಯಶಸ್ಸು ಕಂಡ ಈ ಕ್ರಿಕೆಟಿಗನ ಬ್ಯಾಟ್ ಯಾಕೋ ಮಂಕಾದ ಹಾಗೆ ಕಾಣುತ್ತಿದೆ.
ವಿದೇಶಿ ನೆಲದಲ್ಲಿ ತನ್ನ ಪಾರುಪತ್ಯ ಸ್ಥಾಪಿಸಿದ್ದ ಈ ಅದ್ಭುತ ಆಟಗಾರನ ಲಯ ಕಳೆದು ಹೋಗಿದೆ. ಇದೀಗ ತಂಡದಲ್ಲಿ ಅವರ ಸ್ಥಾನಕ್ಕೆ ಕುತ್ತು ಬಂದ ಹಾಗಿದೆ. ಆ ಆಟಗಾರ ಮತ್ಯಾರು ಅಲ್ಲ ಚೇತೇಶ್ವರ್ ಪೂಜಾರಾ. ಹೌದು ಒಂದು ಸಮಯದಲ್ಲಿ ಭಾರತದ ಮಧ್ಯ ಕ್ರಮಾಂಕವನ್ನು ಗಟ್ಟಿಯಾಗಿ ಭದ್ರ ಪಡಿಸಿದ ಬ್ಯಾಟ್ಸ್ಮನ್. ಪೂಜಾರಾ ಬ್ಯಾಟಿಂಗ್ ಮಾಡುತ್ತಿದ್ದಾರೆ ಎಂದರೆ ಎದುರಾಳಿ ಬೌಲರ್ ಗಳು ಸುಸ್ತು ಬೇಸತ್ತು ಹೋಗುತ್ತಿದ್ದರು. ರಾಹುಲ್ ದ್ರಾವಿಡ್ ನಂತರ ಅತೀ ಹೆಚ್ಚು ಬಾಲ್ ಫೇಸ್ ಮಾಡಿದ ಆಟಗಾರ ಎಂದರೂ ತಪ್ಪಾಗದು. ಆದರೆ 2021 ಯಾಕೋ ಅವರ ಪಾಲಿಗೆ ಸರಿ ಇಲ್ಲ ಎನ್ನಲಾಗುತ್ತಿದೆ. ತಾವು ಆಡಿದ ಎಲ್ಲಾ ಪಂದ್ಯಗಳಲ್ಲೂ ನೀರಸ ಪ್ರದರ್ಶನ ನೀಡಿದ್ದು.
ಕ್ರೀಡಾಭಿಮಾನಿಗಳು ಮತ್ತೆ ಮತ್ತೆ ಅವರ ವಿರುದ್ದವಾಗಿ ಮಾತನಾಡುವ ಹಾಗೆ ಆಗಿದೆ. ಆಯ್ಕೆ ಸಮಿತಿಯು ಕೂಡ ಅಷ್ಟೇ ಅದೆಷ್ಟೋ ಅವಕಾಶ ಕೊಟ್ಟಿದೆ ಆದರೂ ಪೂಜಾರಾ ತಮ್ಮ ಲಯಕ್ಕೆ ಮರಳುವಲ್ಲಿ ಎಡವುತ್ತಿದ್ದಾರೆ. ಅದೇನೇ ಆಗಲಿ ಮುಂದಿನ ಪಂದ್ಯದಲ್ಲಿ ಸ್ಥಾನ ಗಿತ್ತಿಸುತ್ತಾರೋ ಅಥವಾ ಬೆಂಚ್ ಕಾಯುವ ಪರಿಸ್ಥಿತಿ ಬರುತ್ತದೋ ಎಂದು ಕಾದು ನೋಡಬೇಕು. ಹಿಂದೆ ಮಾಡಿದ ಸಾಧನೆಯನ್ನು ಮತ್ತಷ್ಟು ಭಾರಿ ಮಾಡಲಿ ದೇಶದ ಕೀರ್ತಿ ಪತಾಕೆ ಬಾನೆತ್ತರಕ್ಕೆ ಹಾರಿಸಲಿ ಎಂದು ಕ್ರೀಡಾಭಿಮಾನಿಗಳಾದ ನಾವೆಲ್ಲರೂ ಆಶಿಸೋಣ.