ಭಾರತ ತಂಡದ ಮಾಧ್ಯಮ ಕ್ರಮಾಂಕಕ್ಕೆ ಮತ್ತಷ್ಟು ಬಲ. ಭಾರತದ ಈ ಆಟಗಾರ ವಿಶ್ವಕಪ್ ಗೆ ಲಭ್ಯ.

162

ವಿಶ್ವಕಪ್ ಟಿ-೨೦ ಪಂದ್ಯಗಳು ಇನ್ನೇನು ಶುರುವಾಗಲಿದೆ. ಈಗಾಗಲೇ ಅಭ್ಯಾಸ ಪಂದ್ಯಗಳು ನಡೆಯುತ್ತಿದೆ. ಹಾಗೇನೇ ಯಾವ ತಂಡಗಳು ಆಸ್ಟ್ರೇಲಿಯಾ ನೆಲದಲ್ಲಿ ಹೇಗೆ ಪ್ರದರ್ಶನ ನೀಡುತ್ತಿದೆ ಎನ್ನುವುದು ನಿಮಗೆ ಈಗಾಗಲೇ ಗೊತ್ತಾಗಿದೆ. ಭಾರತ ಈ ಬಾರಿ ಗೆಲ್ಲಲೇ ಬೇಕು ಎನ್ನುವ ಚಲದಲ್ಲಿದೆ. ಆದರೆ ಭಾರತಕ್ಕೆ ಆಟಗಾರರ ಗಾಯದ ಸಮಸ್ಯೆಯೇ ದೊಡ್ಡದಿದೆ. ಬುಮ್ರಾ ಗಾಯಾಳುವಾಗಿ ಇರುವದರಿಂದ ಶಮಿ ಅವರನ್ನು ತಂಡಕ್ಕೆ ಬದಲಿ ಆಟಗಾರರಾಗಿನ್ ಸೇರಿಸಿಕೊಳ್ಳಲೇ ಬೇಕಾಯಿತು.

ಇದೀಗ ಬೌಲಿಂಗ್ ಹಾಗು ಮಧ್ಯಮ ಬ್ಯಾಟಿಂಗ್ ಗೆ ಬಲ ತುಂಬಲು ಅಲ್ಲ್ರೌಂಡರ್ ಆಗಿರುವ ರವಿಂದ ಜಡೇಜಾ ಅವರು ತಂಡಕ್ಕೆ ವಾಪಸಾಗುತ್ತಿದ್ದರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಜಡೇಜಾ ಕಳೆದ ಏಷ್ಯಾ ಕಪ್ ಸಮಯದಲ್ಲಿ ಗಾಯದ ಸಮಸ್ಯೆ ಇಂದ ತಂಡದಿಂದ ಹೊರಗೆ ಹೋಗಬೇಕಾಯಿತು. ಅದಾದ ನಂತರ ಸೌತ್ ಆಫ್ರಿಕಾ ಸರಣಿಗೂ ಕೂಡ ಇರಲಿಲ್ಲ. ಇದೀಗ ವಿಶ್ವಕಪ್ ಗೆ ತಂಡಕ್ಕೆ ವಾಪಸಾಗಲಿದ್ದಾರಂತೆ. ಬೌಲಿಂಗ್ ಅಲ್ಲಿ ಉತ್ತಮ ಬೌಲರ್ ಇಲ್ಲದೆ ಇರುವ ಭಾರತ ತಂಡಕ್ಕೆ ಅನುಭವಿ ಸ್ಪಿನ್ನರ್ ಹಾಗೇನೇ ಅಲ್ಲ್ರೌಂಡರ್ ಜಡೇಜಾ ಬರುವಿಕೆ ತಂಡಕ್ಕೆ ಮತ್ತಷ್ಟು ಉತ್ತೇಜನ ನೀಡಿದೆ.

ಜಡೇಜಾ ಅವರು ಬೆಂಗಳೂರಿನ ಏನ್ ಸಿ ಏ ಅಲ್ಲಿದ್ದು ಫಿಟ್ನೆಸ್ ತರಬೇತಿ ಪಡೆಯುತ್ತಿದ್ದಾರೆ.ಈ ಸಮಯದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಒಂದು ವಿಡಿಯೋ ಪೋಸ್ಟ್ ಮಾಡುವ ಮೂಲಕ ಹಂಚಿ ಕೊಂಡಿದ್ದಾರೆ. ರನ್ನಿಂಗ್ ಮಾಡುತ್ತಿರುವ ವಿಡಿಯೋ ಜಡೇಜಾ ಅವರ ಸರ್ಜರಿ ನಂತರದ್ದು ಎಂದು ಹೇಳಲಾಗುತ್ತಿದೆ. ಹಾಗೇನೇ ಅವರನ್ನು ಪ್ರೋತ್ಸಾಹಿಸಿದ ವೈದ್ಯರು,ತರಬೇತು ದಾರರಿಗೆ ಬಿಸಿಸಿಐ ಸದಸ್ಯರಿಗೆ ಮತ್ತು ಅಭಿಮಾನಿಗಳಿಗೆ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ. ಹಾಗೇನೇ ತಂಡಕ್ಕೆ ಇದು ರವೀಂದ್ರ ಜಡೇಜಾ ಅವರ ಕಂಬ್ಯಾಕ್ ಎಂದು ಎಲ್ಲರು ಹೇಳುತ್ತಿದ್ದಾರೆ.

Leave A Reply

Your email address will not be published.