ಭಾರತ ಪಾಕಿಸ್ತಾನ ಪಂದ್ಯದಲ್ಲಿ ಕೊಹ್ಲಿ ವಿಶ್ವರೂಪ . ದಾಖಲೆಗಳೆಲ್ಲ ಉಡೀಸ್. ಕೊಹ್ಲಿ ಮಾಡಿದ ಹೊಸ ದಾಖಲೆಗಳ ಪೂರ್ಣ ಲಿಸ್ಟ್ ಇಲ್ಲಿದೆ.

1,079

ವಿರಾಟ್ ಕೊಹ್ಲಿ ಅದ್ಬುತ ಅರ್ಧಶತಕ ದ ಮೂಲಕ ಟಿ-೨೦ ವಿಶ್ವಕಪ್ ಗೆ ಭಾರತ ಗ್ರಾಂಡ್ ಎಂಟ್ರಿ ಕೊಟ್ಟಿದೆ. ತಮ್ಮ ಕ್ರಿಕೆಟ್ ವೃತ್ತಿ ಜೀವನದಲ್ಲೇ ಅತ್ಯದ್ಭುತ ಆಟವಾಡಿ ತಂಡದ ಗೆಲುವಿಗೆ ಪಾತ್ರರಾಗಿದ್ದಾರೆ ವಿರಾಟ್ ಕೊಹ್ಲಿ. ಕೇವಲ ೫೩ ಬಾಲ್ ಗಳಲ್ಲಿ ಅಜೇಯ ೮೨ ರನ್ ಗಳಿಸಿ ಭಾರತ ತಂಡವನ್ನು ಪಾಕಿಸ್ತಾನದ ವಿರುದ್ಧ ಗೆಲ್ಲಿಸುವಲ್ಲಿ ಕೊಹ್ಲಿ ಪಾತ್ರ ಬಹಳ ಮುಖ್ಯವಾದುದ್ದು. ಕೊನೆಯವರೆಗೂ ಕುತೂಹಲ ಹೆಚ್ಚಿಸಿದ ಪಂದ್ಯದಲ್ಲಿ ಕೊಹ್ಲಿ ಅನೇಕ ದಾಖಲೆಗಳನ್ನು ಮಾಡಿದ್ದಾರೆ.

ವಿರಾಟ್ ಕೊಹ್ಲಿ ನಾಲ್ಕು ಫೋರ್ ಹಾಗು ೪ ಸಿಕ್ಸ್ ಮಾಡುವ ಮೂಲಕ ಅನೇಕ ದಾಖಲೆಗಳಲ್ಲಿ ತಮ್ಮ ಹೆಸರು ನೋಂದಾಯಿಸಿಕೊಂಡಿದ್ದಾರೆ. ಅದರ ಎಲ್ಲ ಲಿಸ್ಟ್ ಇಲ್ಲಿದೆ. ಮೊದಲನೆಯದ್ದು ವಿರಾಟ್ ಕೊಹ್ಲಿ ಟಿ-೨೦ ಮಾದರಿ ಕ್ರಿಕೆಟ್ ಅಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ. ರೋಹಿತ್ ಶರ್ಮ ಇದಕ್ಕಿಂತ ಮೊದಲು ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದರು. ೧೧೦ ಪಂದ್ಯಗಳಲ್ಲಿ ೫೧.೯೭ ಆವರೇಜ್ ಹಾಗು ೧೩೮.೪೧ ಸ್ಟ್ರೈಕ್ ರೇಟ್ ಅಲ್ಲಿ ಒಟ್ಟು ೩೭೯೪ ರನ್ ಗಳಿಸಿದ್ದಾರೆ.

ಹಾಗೇನೇ ಕೊಹ್ಲಿ ಗೆ ಟಿ-೨೦ ವಿಶ್ವಕಪ್ ಅಲ್ಲಿ ಆರನೇ ಬಾರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ದೊರಕಿದೆ. ಇದು ಒಬ್ಬ ಆಟಗಾರನಿಗೆ ಅತಿ ಹೆಚ್ಚು ಬಾರಿ ಸಿಕ್ಕ ಪ್ರಶಸ್ತಿ ಆಗಿದೆ. ಟಿ-೨೦ ವಿಶ್ವಕಪ್ ಅಲ್ಲಿ ವಿರಾಟ್ ಕೊಹ್ಲಿ ಭಾರತದ ಪರ ಅತಿ ಹೆಚ್ಚು ೯೨೭ ರನ್ ಗಳಿಸಿದ್ದಾರೆ. ರೋಹಿತ್ ಶರ್ಮ 851 ರನ್ ಗಳಿಸಿ ಎರಡನೇ ಆಟಗರಾಗಿ ಹೊರಹೊಮ್ಮಿದ್ದಾರೆ. ಪಾಕಿಸ್ತಾನದ ವಿರುದ್ಧ ಕೊಹ್ಲಿ ಅವರ 5 ನೇ ಅರ್ಧಶತಕವಾಗಿದೆ. ಇದರಲ್ಲಿ ನಾಲ್ಕು ಅರ್ಧಶತಕ ವಿಶ್ವಕಪ್ ಪಂದ್ಯಗಳಲ್ಲೇ ದಾಖಲಾಗಿದ್ದು.

Leave A Reply

Your email address will not be published.