ಮಕ್ಕಳಲ್ಲಿರುವ ಸುಪ್ತ ಪ್ರತಿಭೆಯನ್ನು ಅನಾವರಣಗೊಳಿಸಲು ಸೂಕ್ತ ವೇದಿಕೆ- ಜನಾರ್ಧನ್ ಕೊಡವೂರು.

ಪ್ರತಿ ಮಕ್ಕಳಲ್ಲೂ ಒಂದೊಂದು ಪ್ರತಿಭೆ ಅಡಗಿರುತ್ತದೆ. ಅದನ್ನು ಕಂಡು ಹಿಡಿದು ಹೊರಹಾಕಲು ಪುನರೂರ್ ಪ್ರತಿಷ್ಠಾನ ಕಳೆದ ೫ ವರ್ಷಗಳಿಂದ ಸತತವಾಗಿ ಪ್ರತಿಭಾ ಸೌರಭದ ಮೂಲಕ ಪ್ರೌಢಶಾಲಾ ಮಕ್ಕಳಿಗೆ ಅವಕಾಶ ನೀಡುತ್ತಿದೆ. ಗ್ರಾಮೀಣ ಭಾಗದಲ್ಲಿರುವ ಮಕ್ಕಳಿಗೆ ಇದೊಂದು ವಾರಾಧನವಾಗಿದೆ ಎಂದು ಉಡುಪಿ ವಲಯದ ಸೌತ್ ಕೆನರಾ ಫೋಟೋಗ್ರಾಫರ್ ಅಸೋಸಿಯೇಷನ್ ಅಧ್ಯಕ್ಷರಾದ ಜನಾರ್ಧನ್ ಕೊಡವೂರ್ ಅವರು ಪುನರೂರ್ ಪ್ರತಿಷ್ಠಾನ (ರಿ) ಇದರ ಆಶ್ರಯದಲ್ಲಿ ಹಾಗು ಜನ ವಿಕಾಸ ಸಮಿತಿ ಮುಲ್ಕಿ ಇದರ ಇದರ ಸಹಕಾರದಲ್ಲಿ ಮಕ್ಕಳ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಸಲುವಾಗಿ ಕಟೀಲು ಶ್ರೀ ಗೋಪಾಲಕೃಷ್ಣ ಸಭಾಂಗಣದಲ್ಲಿ ನಡೆದ ಪ್ರತಿಭಾ ಸೌರಭವನ್ನು -2021 ಉದ್ಘಾಟಿಸಿ ಮಾತನಾಡಿದರು.

ಪುನರೂರು ಪ್ರತಿಷ್ಠಾನ(ರಿ) ಇದರ ಗೌರವ ಅಧ್ಯಕ್ಷರಾದ ಧರ್ಮದರ್ಶಿ ಶ್ರೀ ಹರಿಕೃಷ್ಣ ಪುನರೂರು ಇವರು ಅಧಕ್ಷತೆ ವಹಿಸಿದ್ದರು. ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದ ಅನುವಂಶಿಕ ಅರ್ಚಕರಾದ ಗೋಪಾಲಕೃಷ್ಣ ಆಸ್ರಣ್ಣರು ಕಾರ್ಯಕ್ರಮಕ್ಕೆ ಶುಭವನ್ನಾರೈಸಿದರು, ದಕ್ಷಿಣ ಕನ್ನಡ ಜಿಲ್ಲಾ ಧಾರ್ಮಿಕ ಪರಿಷತ್ ನ ಸದಸ್ಯರಾದ ಕೊಡೆತ್ತೂರು ಭುವನಾಭಿರಾಮ ಉಡುಪ, ಕರ್ನಾಟಕ ಬ್ಯಾಂಕ್ ಕಟೀಲು ಶಾಖೆಯ ಶಾಖಾ ಪ್ರಬಂದಕರಾದ ಮಿಥುನ್ ಆಚಾರ್ಯ, ಪುನರೂರು ಪ್ರತಿಷ್ಠಾನ(ರಿ) ಇದರ ಗೌರವ ಅಧ್ಯಕ್ಷರಾದ ಎಚ್.ಕೆ ಉಷಾರಾಣಿ, ಪ್ರಧಾನ ಕಾರ್ಯದರ್ಶಿ ಶ್ರೇಯಾ ಪುನರೂರು, ಜನ ವಿಕಾಸ ಸಮಿತಿ ಮುಲ್ಕಿಯ ಅಧ್ಯಕ್ಷರಾದ ಪ್ರಾಣೇಶ್ ಭಟ್ ದೇಂದಡ್ಕ ಹಾಗೂ ಸರ್ವ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಪುನರೂರು ಪ್ರತಿಷ್ಠಾನ(ರಿ) ಇದರ ಅಧ್ಯಕ್ಷರಾದ ದೇವಪ್ರಸಾದ್ ಪುನರೂರು ಪ್ರಾಸ್ತಾವಿಸಿ, ಸ್ವಾಗತಿಸಿದರು. ಜನವಿಕಾಸ ಸಮಿತಿ ಮೂಲ್ಕಿಯ ಪ್ರಧಾನ ಕಾರ್ಯದರ್ಶಿ ದಾಮೋದರ ಶೆಟ್ಟಿ ಕೊಡೆತ್ತೂರು ವಂದಿಸಿದರು ಹಾಗೂ ಜಿತೇಂದ್ರ ವಿ.ರಾವ್ ಹೆಜಮಾಡಿ ನಿರೂಪಿಸಿದರು. ಮುಲ್ಕಿ ಹೋಬಳಿಯ ಒಟ್ಟು 25 ಪ್ರೌಢಶಾಲೆಯ 486 ವಿದ್ಯಾರ್ಥಿಗಳು ಭಾಷಣ, ಪ್ರಬಂಧ, ಚಿತ್ರಕಲೆ ಹಾಗೂ ಕಸದಿಂದರಸ ಸ್ಪರ್ಧೆಯಲ್ಲಿ ಭಾಗವಹಿಸಿದರು.

Comments (0)
Add Comment