ಮಕ್ಕಳ ಶಿಕ್ಷಣಕ್ಕೆ ಮಹತ್ವ ಕೊಟ್ಟ ಈ ಶಿಕ್ಷಕಿ ಕೋರೋಣ ಸಂಧರ್ಭದಲ್ಲಿ ಮಾಡಿದ ಕೆಲಸವೇನು ಗೊತ್ತೇ? ನಿಜಕ್ಕೂ ಗ್ರೇಟ್.
ಜೀವನದಲ್ಲಿ ಶಾಲೆಯ ಮಹತ್ವ ಬಹು ಮುಖ್ಯ. ಯಾಕೆಂದರೆ ಮಕ್ಕಳು ಸಂಪೂರ್ಣವಾಗಿ ರೂಪು ಗೊಳ್ಳುವುದು ಶಾಲೆಯಲ್ಲಿ. ಆದರೆ ಈ ಕೊರೋನ ಸಾಂಕ್ರಾಮಿಕ ರೋಗದಿಂದಾಗಿ ಶಾಲೆಗಳು ಅಸ್ತ ವ್ಯಸ್ತ ವಾಗಿ ಹೋಗಿದೆ. ಒಂದು ವರ್ಷಕ್ಕಿಂತಲೂ ಹೆಚ್ಚು ಕಾಲ ಶಾಲಾ ಕಾಲೇಜು ಗಳಿಗೆ ಬೀಗ ಜಡಿಯಲಾಗಿತ್ತು. ಮಕ್ಕಳು ಶಿಕ್ಷಣ ಇಲಾಖೆ ಆನ್ಲೈನ್ class ಮೊರೆ ಹೋಗುವ ಪರಿಸ್ಥಿತಿಗೆ ಬಂದಿತ್ತು. ಶಾಲೆಯಲ್ಲಿ ಬಂದು ಕಲಿಯುವುದಕ್ಕೆ ಮತ್ತು ಸಣ್ಣ ಸ್ಕ್ರೀನ್ ಮೇಲೆ ನೋಡಿ ಕಲಿಯುವುದಕ್ಕೆ ತುಂಬಾ ವ್ಯತ್ಯಾಸ ಇದೆ. ಶಾಲೆಯಲ್ಲಿ ಟೀಚರ್ ಹರಸಾಹಸ ಪಟ್ಟು ಕಲಿಸುತ್ತಾರೆ. ಆದರೆ ಈ ಆನ್ಲೈನ್ ಕ್ಲಾಸ್ ನಲ್ಲಿ ಮಕ್ಕಳಿಗೆ ಎಷ್ಟು ಅರ್ಥ ಆಗುತ್ತದೋ ಬಿಡುತ್ತದೋ ದೇವರೇ ಬಲ್ಲ. ಇಂತಹ ವಿಷಮ ಪರಿಸ್ಥಿತಿಯಲ್ಲಿ ಇಲ್ಲೊಬ್ಬರು ಶಿಕ್ಷಕಿ ಎಲ್ಲರಿಗಿಂತ ವಿಭಿನ್ನವಾಗಿ ಕೆಲಸ ಮಾಡಿದ್ದಾರೆ. ಏನಿದು ತಿಳಿಯೋಣ ಬನ್ನಿ.
ಇವರ ಹೆಸರು ಕಮಲ ಟೀಚರ್ ಮಧ್ಯಪ್ರದೇಶದ ಶಾಲೆಯೊಂದರಲ್ಲಿ ಶಿಕ್ಷಕಿ ಆಗಿ ಕೆಲಸ ಮಾಡುತ್ತಾರೆ. ಕೊರೋನ ಸಂದರ್ಭದಲ್ಲಿ ಶಿಕ್ಷಣ ವ್ಯವಸ್ಥೆ ಅಸ್ತವ್ಯಸ್ತ ವಾದ ಕಾರಣ ಅದೆಷ್ಟೋ ಗ್ರಾಮೀಣ ಪ್ರದೇಶದ ಮಕ್ಕಳು ಶಿಕ್ಷಣವನ್ನು ಪಡೆಯುವಲ್ಲಿ ವಂಚಿತರಾಗಿದ್ದರು. ಮೊಬೈಲ್ ಖರಿದಿಸುವಷ್ಟು ಹಣ ಇಲ್ಲ, ಆದರೂ ಅವರ ಭವಿಷ್ಯ ಹಾಳಾಗಬಾರದು ಎಂಬ ನೆಲೆಯಲ್ಲಿ ಟೀಚರ್ ಹಲವಾರು ಯೋಚನೆ ಮಾಡಿದರು. ಆದರೆ ಕೊನೆಗೆ ಒಂದು ಉಪಾಯ ಹೊಳೆಯಿತು. ಅವರು ಹೇಳುವ ಪ್ರಕಾರ ಅವರ ಶಾಲೆಯಲ್ಲಿ ಕೇವಲ ಇಬ್ಬರೇ ಶಿಕ್ಷಕರು ಅದರಲ್ಲಿ ಒಬ್ಬರು ಕೊರೋನ ಗೆ ತುತ್ತಾಗಿದ್ದರು ಆದರೂ ಮಕ್ಕಳ ಭವಿಷ್ಯ ಹಿತ ದೃಷ್ಟಿಯಿಂದ ನಾನು ಎತ್ತಿನಗಾಡಿ ಒಂದನ್ನು ಬಾಡಿಗೆಗೆ ಪಡೆದೇ ಅದರಲ್ಲಿ ಪುಸ್ತಕಗಳನ್ನು ಹೇರಿಕೊಂಡು ಹಳ್ಳಿಗಳಿಗೆ ಹೋದೆ ಮನೆ ಮನೆಗೆ ಪುಸ್ತಕಗಳನ್ನು ಕೊಟ್ಟು ಓದಿಕೊಳ್ಳುವಲ್ಲಿ ಪ್ರೋತ್ಸಾಹಿಸಿದೆ.
ಮೊದಲಿಗೆ ಎರಡು ದಿನಗಳ ಪ್ರಯೋಗ ನಡೆಸಿದಾಗ ಇದು ಎಣಿಸಿದ್ದಕ್ಕಿಂತ ಹೆಚ್ಚು ಯಶಸ್ಸು ಕಂಡಿತು ಅದಕ್ಕೆ ಇದನ್ನೇ ಮುಂದುವರೆಸಿದೆ. ಕೇವಲ ಮಕ್ಕಳು ಅಲ್ಲದೇ ಪೋಷಕರು ಇದಕ್ಕೆ ಸಹಕಾರ ಇತ್ತರು. ಪ್ರತಿ ದಿನ ಬಾಡಿಗೆ ರೂಪದಲ್ಲಿ 50 ರೂಪಾಯಿ ನೀಡುತ್ತಿದ್ದೆ. ನನಗೆ ಹಣ ಖರ್ಚಾಗುವ ತಲೆಬಿಸಿ ಇಲ್ಲ ಮಕ್ಕಳು ಒಳ್ಳೆಯ ರೀತಿಯಲ್ಲಿ ಓದಿ ಒಳ್ಳೆಯ ಪ್ರಜೆಗಳಾಗಬೇಕು ಎಂಬುವುದು ನನ್ನ ಆಶಯ ಎನ್ನುತ್ತಾರೆ ಇವರು. ಅದೆಷ್ಟೋ ಹಣ ಮಾಡುವ ನಿಟ್ಟಿನಲ್ಲಿ ಶಾಲಾ ಕಾಲೇಜು ತೆರೆದಿರುವ ಜನಗಳ ಮದ್ಯೆ ತಮ್ಮ ಪ್ರಾಣವನ್ನು ಲೆಕ್ಕಿಸದೆ ಮಕ್ಕಳ ಭವಿಷ್ಯಕ್ಕೆ ಹಾನಿ ಆಗದಂತೆ ಒಂದು ರೂಪಾಯಿ ಲಾಭ ಇಲ್ಲದೆ ಪಣತೊಟ್ಟು ದುಡಿಯುವ ಇಂತಹ ಶಿಕ್ಷಕರು ಮಾದರಿ ಆಗಿದ್ದಾರೆ.