ಮತ್ತೊಮ್ಮೆ ಮೈದಾನಕ್ಕಿಳಿಯಲಿದ್ದಾರೆ ಲೆಜೆಂಡ್ ಆಟಗಾರರಾದ ಯುವಿ, ವೀರೂ, ಭಜ್ಜಿ. ಅಭಿಮಾನಿಗಳಿಗೆ ಮನರಂಜನೆ ೧೦೦% ಗ್ಯಾರಂಟಿ.

382

ಅಂತರಾಷ್ಟ್ರೀಯ ಮಟ್ಟದಲ್ಲಿ ಅತ್ಯಾಕರ್ಷಕ ಪ್ರದರ್ಶನ ತೋರಿ ಘಟಾನುಘಟಿಗಳ ದಾಖಲೆ ಸರಿಸಿ ಅದರಲ್ಲಿ ತಮ್ಮ ಹೆಸರನ್ನು ಬರೆಸಿ ಮಿಂಚಿದ್ದ ನಮ್ಮ ಕಾಲದ ಕ್ರಿಕೆಟ್ ಲೆಜೆಂಡ್ಸ್ ಯುವರಾಜ್ ಸಿಂಗ್, ಹರ್ಭಜನ್ ಸಿಂಗ್ ಹಾಗು ವೀರೇಂದ್ರ ಸೆಹವಾಗ್ ಅವರನ್ನು ಮತ್ತೊಮ್ಮೆ ಆಟದ ಮೈದಾನದಲ್ಲಿ ನೋಡುವ ಕಾಲ ಹತ್ತಿರ ಬಂದಿದೆ. ಲೆಜೆಂಡ್ ಲೀಗ್ ಎನ್ನುವ ಟೂರ್ನಮೆಂಟ್ ಬರುತ್ತಿದ್ದು ಇದರಲ್ಲಿ ನಾವು ಬಾಲ್ಯದಲ್ಲಿ ನೋಡುತ್ತಿದ್ದ ಕ್ರಿಕೆಟ್ ಆಟಗಾರರು ಮಗದೊಮ್ಮೆ ಬ್ಯಾಟ್ ಹಿಡಿದು ಆಡಲು ಬರುತ್ತಿದ್ದಾರೆ. ಈ ವೃತ್ತಿಪರ ಲೀಗ್ ಅಲ್ಲಿ ವಿಶ್ವದ ಮೂರು ತಂಡಗಳು ಭಾಗವಹಿಸಲಿದೆ.

ಈ ಮೂರು ತಂಡಗಳಲ್ಲಿ ಏಷ್ಯಾದ ಒಂದು ತಂಡದಲ್ಲಿ ಭಾರತ, ಹಾಗು ಎರಡನೇ ತಂಡದಲ್ಲಿ ಶ್ರೀಲಂಕಾ ಹಾಗು ಪಾಕಿಸ್ಥಾನದ ಆಟಗಾರರು ಕಾಣಿಸಿಕೊಳ್ಳಲಿದ್ದಾರೆ. ಇನ್ನು ಮೂರನೇ ತಂಡದಲ್ಲಿ ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ವೆಸ್ಟ್ ಇಂಡೀಸ್ ಹಾಗು ಇಂಗ್ಲೆಂಡ್ ತಂಡದ ನಿವೃತ್ತ ಆಟಗಾರರು ಕಾಣಿಸಿಕೊಳ್ಳಲಿದ್ದಾರೆ. ಈ ಟೂರ್ನಮೆಂಟ್ ಒಂದು ಸದುದ್ದೇಶದ ನಿಮಿತ್ತ ಮಾಡಲಾಗುತ್ತಿದೆ. ಈ ಉದ್ದೇಶ ಏನು ಎಂಬುದು ಇನ್ನು ತಿಳಿಯಬೇಕಿದೆ.

ಈ ಟೂರ್ನಮೆಂಟ್ ಒಮನ್ ನಲ್ಲಿ ನಡೆಯುವುದು ಪಿಕ್ಸ್ ಆಗಿದೆ. ಅದಲ್ಲದೇ ನಮ್ಮ ಭಾರತ ತಂಡದಲ್ಲಿ ನಿವೃತ್ತ ಆಟಗಾರರಾದ ಯುವರಾಜ ಸಿಂಗ್, ವೀರೇಂದ್ರ ಸೆಹವಾಗ್, ಹರ್ಭಜನ್ ಸಿಂಗ್, ಇರ್ಫಾನ್ ಪಠಾನ್, ಯೂಸುಫ್ ಪಠಾನ್, ಬದ್ರಿನಾಥ್, ಆರ್.ಪಿ. ಸಿಂಗ್, ಪ್ರಗ್ಯಾನ್ ಓಜಾ, ನಮನ್ ಓಜಾ, ಮನ್‌ಪ್ರೀತ್ ಗೋನಿ, ಹೇಮಂಗ್ ಬದಾನಿ, ವೇಣುಗೋಪಾಲ್ ರಾವ್, ಮುನಾಪ್ ಪಟೇಲ್, ಸಂಜಯ್ ಬಂಗಾರ್, ನಯನ್ ಮೋಂಗಿಯಾ ಹಾಗು ಅಮಿತ್ ಬಂಡಾರಿ ಆಡಲಿದ್ದಾರೆ. ಈ ತಂಡಕ್ಕೆ ಮಹರಾಜ್ ಎನ್ನುವ ಹೆಸರಿಡಲಾಗಿದೆ. ಈ ಟೂರ್ನಮೆಂಟ್ ಮುಖ್ಯಸ್ಥರಾಗಿ ರವಿಶಾಸ್ತ್ರಿ ಅವರನ್ನು ಆಯ್ಕೆ ಮಾಡಲಾಗಿದೆ.

Leave A Reply

Your email address will not be published.