ಮಹಾಶಿವರಾತ್ರಿ ಬಗ್ಗೆ ಸಣ್ಣ ವಿವರಣೆ. ಇಂದು ಏಕೆ ಮಹಾಶಿವರಾತ್ರಿ ಎನ್ನುತ್ತಾರೆ?

480

ಪಂಚಾಕ್ಷರಿ ಮಂತ್ರದಲ್ಲಿ ಪ್ರಸನ್ನನಾಗುತ್ತನೆ ಪರ ಶಿವ. ಹೌದು ಇದನ್ನು ಹಿಂದಿನಿಂದಲೂ ಹೇಳಿಕೊಂಡು ಬರುವುದನ್ನು ಕೇಳಿದ್ದೇವೆ. ಓಂ ನಮಃ ಶಿವಾಯ ಎಂಬ ಪಂಚಾಕ್ಷರಿ ಮಂತ್ರದಿಂದ ಎಲ್ಲವೂ ದೂರವಾಗಿ ಶಾಂತಿ ನೆಲೆಸುತ್ತದೆ ಎಂಬುದನ್ನು ಮನಗಂಡಿದ್ದೇವೆ. ಇಂದಿನ ದಿನವನ್ನು ದೇಶದೆಲ್ಲೆಡೆ ಮಹಾ ಶಿವರಾತ್ರಿಯ ಹೆಸರಿನಲ್ಲಿ ಆಚರಿಸಲಾಗುತ್ತದೆ. ಜಾತಿ ಮತಗಳ ಎಲ್ಲೆಯ ಮೀರಿ ಇದನ್ನು ಜನರು ಆಚರಿಸುತ್ತಾರೆ. ಹಾಗಾದರೆ ಯಾಕೆ ಈ ಹಬ್ಬವನ್ನು ಆಚರಿಸುತ್ತಾರೆ. ಏನಿದರ ಮಹತ್ವ ಬನ್ನಿ ತಿಳಿಯೋಣ.

ಓಂ ಎಂಬ ಸ್ವರದಿಂದಲೆ ಈ ಭೂಮಂಡಲದ ರಚನೆ ಆಯಿತು ಎಂದು ಪುರಾಣದಲ್ಲಿ ಉಲ್ಲೇಖ ಇದೆ. ಶಿವ ಮತ್ತು ಶಕ್ತಿ ಒಂದಾಗಿ ಪರಿಪೂರ್ಣ ಜಗತ್ತು ಆಯಿತು ಎಂಬುವುದು ಗೊತ್ತಿರುವ ವಿಚಾರ. ಶಿವ ಮತ್ತು ಪಾರ್ವತಿಯ ಮದುವೆ ಇದೆ ದಿನದಂದು ನಡೆಯಿತು ಎಂಬುವುದು ಶಿವ ಪುರಾಣದಲ್ಲಿ ಇದೆ. ಪರಶಿವನ ಒಲಿಸಿ ಕೊಳ್ಳಲು ಪುನರ್ಜನ್ಮ ತಾಳಿದ್ದ ಪಾರ್ವತಿಯು ಘೋರ ತಪಸ್ಸಿನಿಂದ ಪರಶಿವನ ಒಲಿಸಿಕೊಂಡು ಪಾರ್ವತಿ ಪರಶಿವ ಒಂದಾದ ದಿನ ಇದು. ಲೋಕ ಕಲ್ಯಾಣ ಹೇತು ಮತ್ತೊಮ್ಮೆ ಕಂಕಣ ಭಾಗ್ಯದಲ್ಲಿ ಸೇರಿದ ಪುಣ್ಯ ಸಮಯವನ್ನು ಮಹಾ ಶಿವರಾತ್ರಿ ಎಂದು ಆಚರಿಸಲಾಗುತ್ತದೆ. ಈ ದಿನಂದಂದು ಮದುವೆಯ ಹರಕೆ ಹೊತ್ತು ಉಪವಾಸ ವೃತ ಮಾಡಿದಲ್ಲಿ ಪರಶಿವನ ಹಾಗೆ ಪತಿ ಸಿಗುತ್ತಾರೆ ಎಂಬ ಉಲ್ಲೇಖ ಇದೆ . ಅದೇನೇ ಆಗಲಿ ನಂಬಿಕೆಗಳ ಮೇಲೆ ನಿಂತಿರುವ ಪ್ರಪಂಚದಲ್ಲಿ ನಂಬಿಕೆ ಒಂದೇ ಜೀವನ ಅದನ್ನು ಬಿಟ್ಟು ಬೇರೇನೂ ಕೂಡ ನಡೆಯುವುದಿಲ್ಲ. ಇಂದಿನ ಈ ಶುಭ ದಿನವೂ ಎಲ್ಲರಿಗೂ ಮಂಗಳಮಯವಾಗಲಿ ಎಂದು ಹಾರೈಸುತ್ತೇವೆ.

Leave A Reply

Your email address will not be published.