ಮಹಿಳೆಯರು ಯಾರಿಗೂ ಏನು ಕಡಿಮೆ ಇಲ್ಲ, ಈ ಮೂರು ವಿಚಾರಗಳಲ್ಲಿ ಪುರುಷರಿಗಿಂತ ಮುಂದಿರುತ್ತಾರೆ, ಯಾವ್ಯಾವು ಗೊತ್ತೇ??
ನಮಸ್ಕಾರ ಸ್ನೇಹಿತರೇ ಚಾಣಕ್ಯ ನೀತಿಗಳು ಜೀವನದ ತಾತ್ವಿಕ ತಳಹದಿಯ ಮೇಲೆ ರಚಿತವಾಗಿವೆ.ಚಾಣಕ್ಯನ ನೀತಿಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೇ ಖಂಡಿತ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದೇ ವಿಶ್ಲೇಷಿಸಲಾಗುತ್ತದೆ. ಪ್ರತಿಯೊಂದು ವಿಷಯದಲ್ಲಿಯೂ ಪರಿಣಿತಿ ಹೊಂದಿದ್ದ ಚಾಣಕ್ಯ ಸ್ತ್ರೀ ಹಾಗೂ ಪುರುಷರ ಬಗ್ಗೆಯೂ ಹಲವಾರು ವಿಷಯಗಳನ್ನು ಮಂಡಿಸಿದ್ದಾನೆ. ಚಾಣಕ್ಯ ಪ್ರಕಾರ ಮಹಿಳೆಯರು ಪುರುಷರಿಗಿಂತ ಈ ಮೂರು ವಿಷಯಗಳಲ್ಲಿ ಹೆಚ್ಚು ಮುಂದಿರುತ್ತಾರಂತೆ. ಬನ್ನಿ ಆ ವಿಚಾರಗಳು ಯಾವುವು ಎಂಬುದನ್ನು ತಿಳಿಯೋಣ.
1.ಹಸಿವು – ಚಾಣಕ್ಯನ ನೀತಿ ಪ್ರಕಾರ ಪುರುಷರಿಗಿಂತ ಮಹಿಳೆಯರಲ್ಲಿ ಹಸಿವು ಕಡಿಮೆಯಂತೆ. ಮಹಿಳೆಯರು ಪುರುಷರಿಗಿಂತ ಹಸಿವನ್ನು ತಡೆದುಕೊಳ್ಳುವ ಶಕ್ತಿ ಹೊಂದಿದ್ದಾರಂತೆ. ಪುರುಷರಿಗಿಂತ ಎರಡು ಪಟ್ಟು ಹೆಚ್ಚು ಹಸಿವನ್ನು ಸಹಿಸಿಕೊಳ್ಳುವ ಹಾಗೂ ತಡೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿರುತ್ತಾರೆ ಎಂಬುದನ್ನು ಚಾಣಕ್ಯ ಹೇಳಿದ್ದಾನೆ.
2.ಬುದ್ದಿವಂತಿಕೆ – ಬುದ್ದಿವಂತಿಕೆ ವಿಚಾರದಲ್ಲಿ ಪುರುಷರಿಗಿಂತ ಮಹಿಳೆಯರೇ ಹೆಚ್ಚು ಬುದ್ದಿವಂತರು ಎಂಬುದು ಚಾಣಕ್ಯನ ವಾದ. ಮಹಿಳೆಯರಲ್ಲಿ ಏಕಾಗ್ರತೆ ಹೆಚ್ಚು. ಹಾಗಾಗಿ ಅವರ ಕೆಲಸ ಪುರುಷರಿಗಿಂತ ಹೆಚ್ಚು ಪರಿಪಕ್ವವಾಗಿರುತ್ತದೆ. ಹಾಗಾಗಿ ಬುದ್ದಿವಂತಿಕೆ ವಿಚಾರದಲ್ಲಿ ಪುರುಷರಿಗಿಂತ ಮಹಿಳೆಯರು ಹೆಚ್ಚು ಬುದ್ದಿವಂತರು ಎಂಬುದು ಚಾಣಕ್ಯನ ಅಭಿಪ್ರಾಯ.
3.ಧೈರ್ಯ – ಚಾಣಕ್ಯ ನೀತಿ ಪ್ರಕಾರ ಪುರುಷರಿಗಿಂತ ಮಹಿಳೆಯರಿಗೆ ಹೆಚ್ಚು ಧೈರ್ಯವಂತೆ. ಅವರು ಸೋಲಿಗೆ ಕುಗ್ಗುವುದಿಲ್ಲ, ಧೈರ್ಯ,ಸಾಹಸಗಳನ್ನು ಮೈಗೂಡಿಸಿಕೊಂಡಿರುತ್ತಾರೆ. ಆಂತರ್ಯವಾಗಿ ಬಹಳಷ್ಟು ಧೈರ್ಯವನ್ನು ಹೊಂದಿರುತ್ತಾರೆ. ಹಾಗಾಗಿ ಪುರುಷರಿಗಿಂತ ಮಹಿಳೆಯರು ಹೆಚ್ಚು ಧೈರ್ಯವಂತರಾಗಿರುತ್ತಾರೆ ಎಂಬುದು ಚಾಣಕ್ಯನ ಅಭಿಪ್ರಾಯವಾಗಿದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ.