ಮಾರ್ಕಂಡೇಯ ಮಹರ್ಷಿಗಳು ಪಾಂಡವರಿಗೆ ತಿಳಿಸಿದ ಕಲಿಯುಗದ ಸ್ವರೂಪ. ಮಹರ್ಷಿಗಳ ಪ್ರಕಾರ ಹೇಗಿರಲಿದೆ ಕಲಿಯುಗ?

1,756

ಮಹಾಭಾರತದ ಅರಣ್ಯಪರ್ವದಲ್ಲಿ ಪಾಂಡವರು ಅರಣ್ಯವಾಸದ ಒಂದು ದಿನ ಶ್ರೀ ಮಾರ್ಕಂಡೇಯ ಮಹರ್ಷಿಗಳು ಪಾಂಡವರನ್ನು, ಬೇಟಿಯಾಗು ತ್ತಾರೆ ಆ ಸಮಯದಲ್ಲಿ ಶ್ರೀಕೃಷ್ಣನು ಸತ್ಯಭಾಮಾ ಸಮೇತನಾಗಿ ಪಾಂಡವರನ್ನು ನೋಡಲಿಕ್ಕೆಂದು ಅಲ್ಲಿಗೆ ಬಂದಿರುತ್ತಾರೆ ದರ್ಮರಾಯನು ಮಾರ್ಕಂಡೇಯ ಮಹರ್ಷಿಗಳನ್ನು ಮುಂದೆ ಬರಲಿರುವ ಕಾಲದ ಬಗ್ಗೆ ಕೇಳಿದಾಗ ಮಹರ್ಷಿಗಳು ಕಲಿಗಾಲದ ಸ್ವರೂಪವನ್ನು, ಈ ರೀತಿಯಾಗಿ ಹೇಳುತ್ತಾರೆ. ಮಾರ್ಕಂಡೇಯರು ಚಿರಂಜೀವಿಯಲ್ಲವೇ?ಅರಣ್ಯವಾಸದಲ್ಲಿರುವ ಪಾಂಡವರ ಹತ್ತಿರ ಬರುವ ಸಮಯಕ್ಕೆ ಶ್ರೀ ಮಾರ್ಕಂಡೇಯರಿಗೆ ಸಾವಿರಾರು ವರ್ಷಗಳ ವಯಸ್ಸಾಗಿರುತ್ತದೆ. ಆಗ ಅವರು ಅತ್ಯಂತ ವಯೋವೃದ್ಧರಾಗಿದ್ದರು.

ಯುಗಯುಗಕ್ಕೂ ಧರ್ಮಗಳಲ್ಲಿ ಆಚಾರಗಳಲ್ಲಿ ಆಲೋಚನೆಗಳಲ್ಲಿ ವಿಚಾರ ವಿನಿಮಯಗಳಲ್ಲಿ ಅಂತರವಿರುತ್ತದೆ. ಚತುರ್ಯುಗಗಳಲ್ಲಿ ಕೊನೆಯದಾಗಿರುವ ಕಲಿಯುಗದ ದಾರಿಯೇ ವಿಶಿಷ್ಟವಾಗಿದೆ. ಕಲಿಯುಗದ ವರ್ಷಗಳು ಒಟ್ಟು ನಾಲ್ಕು ಲಕ್ಷ ಮುವ್ವತ್ತೆರಡು ಸಾವಿರ ವರ್ಷಗಳು. ಈಗ ಐದು ಸಾವಿರ ವರ್ಷಗಳ ಮೇಲ್ಪಟ್ಟು (5 .112) ವರ್ಷಗಳು) ಕಲಿಯುಗದಲ್ಲಿ ಮುಗಿದು ಹೋಗಿವೆ. ಒಂದು ಯುಗದ ಧರ್ಮವು ಇನ್ನೊಂದು ಯುಗಕ್ಕೆ ಅಧರ್ಮವಾಗಿ ಕಾಣುತ್ತದೆ ಇದು ಧರ್ಮದ ವಿಶೇಷತೆ. ಕಲಿಯುಗದ ಅಂತ್ಯಕ್ಕೆ ಹದಿನಾರು ವರ್ಷಗಳಿಗೆ ಮಾನವನ ಆಯಸ್ಸು ನಿಲ್ಲುವುದು ಕಲಿಯುಗದ ಅಂತ್ಯದಿ ಮಾನವರಿಗೆ ಏಳೆಂಟು ವರ್ಷಗಳ ಪ್ರಾಯದೊಳು ಮಹಿಳೆಯರು ತಾಯಿಯರಾಗುವರು ಕಾಲ ಮಹಿಮೆ ದಾನಧರ್ಮಗಳೆಲ್ಲ ಸರ್ವ ಶೂನ್ಯತೆಯಿಂದ ಧರ್ಮ ಪಾಲಕರು ಯಾಚಕರು ಕ’ಳ್ಳತನದಲ್ಲಿ ತೊಡುವರು.

ರಕ್ತಬಾಂಧವರೆಲ್ಲ ರಾ’ಕ್ಷಸ’ತ್ವವ ಹೊಂದಿ ಪಾಪ ಕಾರ್ಯಗಳಲ್ಲಿ ಮನಸು ಮಾಡುವರು. ನೀಚ ನಿಕೃಷ್ಟಕಾಲವಿದು ಕಲಿಪುರುಷ ಮಾಯೆ. ಮುಖ್ಯವಾಗಿ ಕಲಿಯುಗದಲ್ಲಿ ಧರ್ಮದೇವತೆ ಒಂದು ಕಾಲಿನ ಮೇಲೆ ನಡೆಯುತಾ ಕಲಿಯುಗಾಂತ್ಯಕ್ಕೆ ಧರ್ಮವೇ ಇರುವುದಿಲ್ಲ ಅಧರ್ಮವೇ ಅಧಿಕಾರಕ್ಕೆ ಬರುತ್ತದೆ. ಪ್ರಭುಗಳೇ ಕ’ಳ್ಳರಾಗುತ್ತಾರೆ ಪ್ರಜೆಗಳು ಶೂರರಾಗುತ್ತಾರೆ. ಮನುಷ್ಯರು ಕ್ಷಣಿಕ ಸುಖಗಳಿಗೆ ದಾಸರಾಗುತ್ತಾರೆ ಆಚಾರ ವಿಚಾರಗಳು ಸ’ಮಾಧಿ ಯಾಗುತ್ತವೆ. ದೇವರನ್ನು ದೈವತ್ವವನ್ನು ನಂಬುವುದಿಲ್ಲ, ದೇವಸ್ಥಾನಗಳು ಶಿಥಿಲವಾಗುತ್ತವೆ. ವೇದವಿದ್ಯಗಳು ಅಪಹಾಸ್ಯ ಗೊಳ್ಳುತ್ತವೆ. ಧಾರ್ಮಿಕ ವ್ಯಕ್ತಿಗಳನ್ನು ಗೇಲಿ ಮಾಡುತ್ತಾರೆ.

ಪುರಾಣಗಳನ್ನು ಧಾರ್ಮಿಕ ಗ್ರಂಥಗಳನು ಸುಟ್ಟು ಬೂದಿ ಮಾಡುತ್ತಾರೆ. ಮದ್ಯಪಾನವು ಸರ್ವರಲ್ಲಿ ಸರ್ವೇಸಾಧಾರಣ ವಾಗುತ್ತದೆ ಸ್ತ್ರೀ ಪುರುಷರು ಮದ್ಯಪಾನಕ್ಕೆ ದಾಸರಾಗುತ್ತಾರೆ. ಕಾ’ಮ ಸುಖಗಳಿಗೆ ಗುಲಾಮರಾಗುತ್ತಾರೆ ಅಣ್ಣತಂಗಿಯರ ಪವಿತ್ರತೆ ಕಾಣುವುದಿಲ್ಲ ಮೂಕ ಪ್ರಾಣಿಗಳ ಜೊತೆ ಕಾಮ ದಾಟ ವಾಡುತ್ತಾರೆ ಯಂತ್ರ ಪರಿಕರಗಳನ್ನು ಸಂ’ಭೋಗ ಕ್ರಿಯೆಗೆ ಉಪಯೋಗಿಸುತ್ತಾರೆ ಹಣ ಗಳಿಕೆಯೊಂದೇ ಎಲ್ಲರ ಗುರಿಯಾಗಿರುತ್ತದೆ. ಯಾರೂ ವಯೋಧರ್ಮವನ್ನು ಪಾಲಿಸುವುದಿಲ್ಲ. ವಯಸ್ಸಾದ ಹೆಂಗಸರು ಸಣ್ಣವಯಸ್ಸಿನ ಹುಡುಗರನ್ನು ಮದುವೆಯಾಗುತ್ತಾರೆ ಪತಿತೆಯರಿಗೂ ಪತಿವ್ರತೆಯರಿಗೂ ವ್ಯತ್ಯಾಸ ಕಾಣುವುದಿಲ್ಲ ಸ್ತ್ರೀಯರೆ ಲ್ಲರೂ ಅರೆಬೆತ್ತಲೆಯಾಗಿ ತಿರುಗುತ್ತಾರೆ.

ಭಾರತೀಯ ಭಾಷೆಗಳು, ಭಾರತೀಯ ನಾಡು ನುಡಿ ಸಂಸ್ಕಾರಕಗಳು ಮಣ್ಣು ಪಾಲಾಗುತ್ತವೆ. ಒಂದು ಹೆಣ್ಣಿಗೆ ಹತ್ತಾರು ಗಂಡಂದಿರಿರುತ್ತಾರೆ. ಪುರುಷರಿಗೆ ಹತ್ತಾರು ಹೆಂಗಸರು ಕಾ’ಮ ಸುಖಗಳನ್ನು ನೀಡುತ್ತಿರುತ್ತಾರೆ. ಗಂಡ ಹೆಂಡತಿಯರ ಬಂಧನಕ್ಕೆ ಬೆಲೆ ಇರುವುದಿಲ್ಲ ಮದುವೆಗಳಿಗೆ ಮಂತ್ರಗಳಿಗೆ ನೆಲೆ ಇರುವದಿಲ್ಲ ತಂದೆತಾಯಿಯರ ಅನುಮತಿ ಮದುವೆಗಳಿಗೆ ಇರುವುದಿಲ್ಲ, ಪಶುಗಳಂತೆ ಮಾನವರು ಜೀವಿಸುತ್ತಾರೆ ಹದಿನಾರು ವರ್ಷಗಳಿಗೆ ಮರಣ ಬರುತ್ತದೆ ಆರು ಏಳು ವಯಸ್ಸಿನ ಅಂತರದಲ್ಲೇ ಮಕ್ಕಳನ್ನು ಹಡೆಯುತ್ತಾರೆ-ಕಲಿಯುಗದ ಅಂತ್ಯಕಾಲಕ್ಕೆ ಮಾನವರ ಎತ್ತರ ಕೇವಲ ಎರಡುವರೆ ಅಡಿಗಳಷ್ಟಿರುತ್ತದೆ. ಸಹಜ ವಾತಾವರಣ – ಸಹಜ ಆಹಾರ, ಸಹಜ ಗಾಳಿ, ಸಹಜ ನೀರು ಇರುವುದಿಲ್ಲ-ಪ್ರತಿಮನೆಯು ಒಂದು ನಾಟಕ ರಂಗ ಮಂಟಪ ವಾಗಿರುತ್ತದೆ.

ಆತ್ಮೀಯತೆ ಅನುಬಂಧಗಳು ಹುಡುಕಿದರೂ ಕಾಣುವುದಿಲ್ಲ. ಮಕ್ಕಳ ಮಾನಹೀನ ಕಾರ್ಯಗಳಿಗೆ ಹಿರಿಯರು ಸಹಕರಿಸುತ್ತಾರೆ ನೀತಿ ಸೂತ್ರಗಳು ಸಮಾಜ ಧರ್ಮಗಳು, ಬದಲಾವಣೆ ಯಾಗುತ್ತವೆ ಸ್ತ್ರೀಪುರುಷರಿಗಂತೂ ವ್ಯತ್ಯಾಸಗಳಿರುವುದಿಲ್ಲ ಹಗಲು ರಾತ್ರಿಗಳ ಅಂತರವಿರುವುದಿಲ್ಲ. ಹಡೆದ ಮಕ್ಕಳಿಗೆ ತಂದೆತಾಯಂದಿರೇ ಸಂ’ಭೋಗ ಭಂಗಿಗಳನ್ನು ಹೇಳುತ್ತಾರೆ ಮದ್ಯಪಾನವೂ ರತಿ ಸುಖವೂ ಸಾಮಾನ್ಯ ಕ್ರಿಯೆಗಳಾಗಿರುತ್ತವೆ. ಮಕ್ಕಳು ತಂದೆತಾಯಂದಿರನ್ನು ಮನೆ ಹಿರಿಯರನ್ನು ಗೌರವಿಸುವುದಿಲ್ಲ – ಹೆಂಡತಿ ಗಂಡನನ್ನು ಅನುಸರಿಸಿ ನಡೆಯುವುದಿಲ್ಲ ಶಾರೀರಿಕ ಶಕ್ತಿ ಕಡಿಮೆಯಾಗುತ್ತದೆ ಯಾಂತ್ರಿಕ ಶಕ್ತಿಯ ಮೇಲೆ ಎಲ್ಲರ ಜೀವನವು ನಡೆಯುತ್ತದೆ ಚಿತ್ರ ವಿಚಿತ್ರ ರೋಗಗಳು ಬರುತ್ತವೆ ಔಷಧಗಳಿಗೆ ಬರುವ ರೋಗಗಳಿಗೆ ಮನುಷ್ಯರು ತಳಮಳಗೊಳ್ಳುತ್ತಾರೆ.

ಭೂಮಿ ಫಸಲು ಕೊಡುವುದಿಲ್ಲ ಮಳೆ ಕಡಿಮೆಯಾಗುತ್ತದೆ ಭೂಗೋಳವು ಬಿಸಿಯಾಗುತ್ತದೆ-ಅತಿವೃಷ್ಟಿ ಅನಾವೃಷ್ಟಿಗಳಿಂದ ಮನುಕುಲವು ತತ್ತರಿಸುತ್ತದೆ ವೃಕಗಳು ಔಷಧಬಳ್ಳಿಗಳು ನಾಶವಾಗಿ ಬಿಡುತ್ತವೆ – ಸಮುದ್ರಗಳು ಭೂಪರಿಣಾಮಗಳಿಗೆ ಸ್ಪಂದಿಸಿ ಉಕ್ಕಿಬಂದು ಭೂಮಿಯನ್ನು ಆಕ್ರಮಿಸುತ್ತವೆ. ನದಿ ಕೆರೆಗಳು ಉಪ್ಪಾಗಿಬಿಡುತ್ತವೆ ಸಹಜ ಉತ್ಪನ್ನಗಳು ಹೋಗಿಬಿಡುತ್ತವೆ ಎಲ್ಲಿಯೂ ಬ್ರಹ್ಮ ದೇವನ ಸೃಷ್ಟಿಗೆ ಬೆಲೆ ಇರುವುದಿಲ್ಲ-ಬ್ರಹ್ಮಸೃಷ್ಟಿ ಅಪಹಾಸ್ಯ ಕ್ಕೀಡಾಗುತ್ತದೆ – ಮಾನವರ ಮೇಧೋ ಶಕ್ತಿಗೆ ಬ್ರಹ್ಮಾದಿ ದೇವತೆಯರು ನಿಬ್ಬೆರಗಾಗಿ ಬಿಡುತ್ತಾರೆ. ಪುರುಷ ಸಂಪರ್ಕ ರಹಿತವಾಗಿಯೇ ಸ್ತ್ರೀಯರು ಗರ್ಭವತಿ ಯರಾ ಗುತ್ತಾರೆ ದೇವರ ಇಚ್ಛೆಯಂತೆ ಯಾರಿಗೂ ಮಕ್ಕಳಾಗುವುದಿಲ್ಲ ಮಾನವರ ಇಚ್ಛೆಯಂತೆ ಮಕ್ಕಳು ಹುಟ್ಟುತ್ತಾರೆ-ಈಗಿನ ಪಶುಪಕ್ಷಿ ಜಾತಿಗಳು ನಿರ್ನಾಮವಾಗಿಬಿಡುತ್ತವೆ- ಭಾರತೀಯ ಭಾಷೆ ಗಳೆಲ್ಲವೂ ಭೂಗತ ವಾಗಿಬಿಡುತ್ತವೆ ಭಾರತೀಯ ಸಮಾಧಿಯಾಗಿ ವೇದ ಮಂತ್ರ ಗಳನ್ನು ಶೃಂಗಾರ ಗೀತೆಗಳಲ್ಲಿ ಸೇರಿಸಿ ಹಾಡುತ್ತಾರೆ.

ಮಕ್ಕಳು ತಂದೆತಾಯಿಗಳಿಗೆ ಅನ್ನ ನೀಡುವುದಿಲ್ಲ. ಆತ್ಮೀಯತೆ ತೋರುವ ತಂದೆ ತಾಯಿಯರು ಕಾ’ಮಕ್ಕಾಗಿಯೇ ತಮ್ಮನ್ನು ಹಡೆದಿದ್ದಾರೆ ‘ದೇವರು ‘ ಅನ್ನುವವನು ಇರುವುದೇ ಇಲ್ಲ ಯಾರಲ್ಲೂ ಭಾವನೆಗಳಿರುವುದಿಲ್ಲ ಎಲ್ಲರೂ ಹಣಕ್ಕಾಗಿ ಬದುಕುತ್ತಾರೆ ಇದೇ ಕಲಿಯುಗದ ಸ್ವರೂಪ ಆದರೆ ಬ್ರಹ್ಮ ದೇವನ ಸೃಷ್ಟಿಯನ್ನು ನಾಚಿಸುವಂತಹ ಮಾನವಸೃಷ್ಟಿ ನಡೆಯುತ್ತದೆ. ಮಾನವರ ಮೇಧೋ ಶಕ್ತಿಗೆ ದೇವತೆಗಳು ವಿಸ್ಮಯರಾಗುತ್ತಾರೆ ಯಂತ್ರ ಮಾನವರನ್ನು ಮನುಷ್ಯರೇ ತಯಾರಿಸುತ್ತಾರೆ. ಬ್ರಹ್ಮಸೃಷ್ಟಿಗೆ ವಿಶ್ವಾಮಿತ್ರಮಹರ್ಷಿ ಪ್ರತಿಸೃಷ್ಟಿ ಮಾಡಿದ ಹಾಗೆ, ವಿಶ್ವಾ ಮಿತ್ರನ ಸೃಷ್ಟಿಗೆ ಮಾನವರು ಪ್ರತಿಸೃಷ್ಟಿ ಮಾಡುತ್ತಾರೆ ನೀರಿನಿಂದ ಬೆಂ’ಕಿ ಹುಟ್ಟಿಸುತ್ತಾರೆ ಚಾಲಕರಿಲ್ಲದೇ ವಾಹನಗಳನ್ನು ನಡೆಸುತ್ತಾರೆ. ಹೂಗಳಿಲ್ಲದ ಕಾಯಿಗಳಾಗುವಂತೆ ಮಾಡುತ್ತಾರೆ. ಗಂಡಸರಿಲ್ಲದೇ ಮಕ್ಕಳಾಗುವಂತೆ ಮಾಡುತ್ತಾರೆ ಚಿತ್ರವಿಚಿತ್ರ ಕಾರ್ಯಕಲಾಪಗಳು ಜರುಗುತ್ತವೆ. –ಕೃಷ್ಣಸಖ

Leave A Reply

Your email address will not be published.