ಮುಂದಿನ ಟಿ 20 ವಿಶ್ವಕಪ್ ನಲ್ಲಿ ಮತ್ತೊಮ್ಮೆ ಎದುರಾಳಿಗಲಿರುವ ಬದ್ದವೈರಿಗಳು: ಗುಂಪುಗಳನ್ನು ಮರು ವಿಂಗಡಿಸಿದ ಐಸಿಸಿ.

130

ನಮಸ್ಕಾರ ಸ್ನೇಹಿತರೇ ಈ ವರ್ಷದ ಅಕ್ಟೋಬರ್ ಹಾಗೂ ನವೆಂಬರ್ ತಿಂಗಳಲ್ಲಿ ಐಸಿಸಿ ಟಿ 20 ವಿಶ್ವಕಪ್ ಕ್ರಿಕೆಟ್ ಹಬ್ಬದ ಜ್ವರ ಜೋರಾಗಲಿದೆ. ಈಗಾಗಲೇ ಎಲ್ಲಾ ತಂಡಗಳು ಈ ಬಾರಿ ಚಾಂಪಿಯನ್ ಆಗಲು ಸಿದ್ದತೆ ನಡೆಸಿವೆ. ಐಸಿಸಿ ಸಹ ಎಲ್ಲಾ 8 ತಂಡಗಳನ್ನು ಗುಂಪುಗಳನ್ನಾಗಿ ವಿಂಗಡಿಸಿದ್ದು, ಅರ್ಹತಾ ಸುತ್ತಿನಲ್ಲಿ ಎಂಟು ತಂಡಗಳು ಪರಸ್ಪರ ಸೆಣಸಲಿದ್ದು, ಆ ಸುತ್ತಿನ ಟಾಪ್ 2 ತಂಡಗಳು ಮುಖ್ಯ ಸುತ್ತಿಗೆ ಅರ್ಹತೆ ಪಡೆಯಲಿವೆ. ಅರ್ಹತಾ ಸುತ್ತಿನ ಗ್ರೂಪ್ ಎ ನಲ್ಲಿ ಶ್ರೀಲಂಕಾ,ನಮೀಬಿಯಾ,ಯು.ಎ.ಇ ಹಾಗೂ ನೆದರ್ಲೆಂಡ್ ತಂಡಗಳು ಸ್ಥಾನ ಪಡೆದಿವೆ.

ಈ ಸುತ್ತಿನಲ್ಲಿ ಟಾಪ್ 2 ಸ್ಥಾನ ಗಳಿಸುವ ತಂಡಗಳು ಮುಂದಿನ ಹಂತಕ್ಕೆ ತೇರ್ಗಡೆಯಾಗಲಿವೆ. ಅರ್ಹತಾ ಸುತ್ತಿನ ಬಿ ಗುಂಪಿನಲ್ಲಿ ವೆಸ್ಟ್ ಇಂಡೀಸ್, ಸ್ಕಾಟ್ಲೆಂಡ್, ಐರ್ಲೆಂಡ್ ಮತ್ತು ಜಿಂಬಾಬ್ವೆ ತಂಡಗಳು ಸ್ಥಾನ ಪಡೆದಿವೆ. ಈ ಸುತ್ತಿನಲ್ಲಿ ಟಾಪ್ 2 ತಂಡಗಳು ಮುಂದಿನ ಹಂತಕ್ಕೆ ತೇರ್ಗಡೆಯಾಗಲಿವೆ. ಇನ್ನು ಸೂಪರ್ 12 ಹಂತದಲ್ಲಿ ಎರಡು ಗುಂಪುಗಳಿದ್ದು ಗ್ರೂಪ್ 1 ರಲ್ಲಿ ಆಸ್ಟ್ರೇಲಿಯಾ, ಇಂಗ್ಲೆಂಡ್, ನ್ಯೂಜಿಲೆಂಡ್ ಹಾಗೂ ಅಫ್ಘಾನಿಸ್ತಾನ ತಂಡಗಳು ಸ್ಥಾನ ಪಡೆದಿವೆ.

ಇದರ ಜೊತೆ ಅರ್ಹತಾ ಸುತ್ತಿನಲ್ಲಿ ಎ ಗುಂಪಿನ ಅಗ್ರಸ್ಥಾನಿ ಮತ್ತು ಬಿ ಗುಂಪಿನ ದ್ವೀತಿಯ ಸ್ಥಾನಿ ಅರ್ಹತೆ ಪಡೆಯಲಿವೆ. ಇನ್ನು ಸೂಪರ್ 12 ಹಂತದ ಗ್ರೂಪ್ 2ರಲ್ಲಿ ಭಾರತ, ಪಾಕಿಸ್ತಾನ, ದಕ್ಷಿಣ ಆಫ್ರಿಕಾ ಹಾಗೂ ಬಾಂಗ್ಲಾದೇಶ ಸ್ಥಾನ ಪಡೆದಿವೆ. ಇದರ ಜೊತೆ ಬಿ ಗುಂಪಿನ ಅಗ್ರಸ್ಥಾನಿ ಮತ್ತು ಎ ಗುಂಪಿನ ದ್ವೀತಿಯ ಸ್ಥಾನಿಗಳು ಇರುತ್ತಾರೆ. ಕಳೆದ ಬಾರಿ ಲೀಗ್ ಹಂತದಲ್ಲಿ ಮುಖಾಮುಖಿಯಾಗಿದ್ದ ಭಾರತ ಮತ್ತು ಪಾಕಿಸ್ತಾನ ಈ ಬಾರಿ ಸಹ ಮುಖಾಮುಖಿಯಾಗಲಿವೆ. ಈ ಬಾರಿ ಭಾರತಕ್ಕೆ ಸೇಡು ತೀರಿಸಿಕೊಳ್ಳುವ ಅವಕಾಶ ಲಭಿಸಿದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ.

Leave A Reply

Your email address will not be published.