ಮುಂದಿನ ವಾರ ಭಾರತ ಕೂಡ ವಿಶ್ವಕಪ್ ನಿಂದ ಹೊರಬೀಳಲಿದೆ ಎಂದ ಪಾಕಿಸ್ತಾನ ಮಾಜಿ ಆಟಗಾರ. ಜಿಂಬಾಬ್ವೆ ವಿರುದ್ಧ ಸೋತು ಕಂಗಾಲಾಗಿರುವ ಪಾಕಿಸ್ತಾನ.
ಜಿಂಬಾಬ್ವೆ ವಿರುದ್ಧ ಪಂದ್ಯದಲ್ಲಿ ಕೇವಲ ಒಂದು ರನ್ ನಿಂದ ಸೋತ ಪಾಕಿಸ್ತಾನ ಈಗಾಗಲೇ ಎಲ್ಲರಿಂದ ಚೀಮಾರಿ ಹಾಗು ತಮಾಷೆಗೆ ಒಳಪಟ್ಟಿದೆ. ಭಾರತ ವಿರುದ್ಧ ಕೂಡ ಗೆಲ್ಲುವ ಪಂದ್ಯವನ್ನು ಬಿಟ್ಟುಕೊಟ್ಟ ಪಾಕಿಸ್ತಾನ ಜಿಂಬಾಬ್ವೆ ವಿರುದ್ಧ ಸೋತು ಇದೀಗ ತಲೆಕೊಟ್ಟು ಹೋಗಿದೆ. ನೋಡಲು ಹೋದರೆ ಪಾಕಿಸ್ತಾನ ಅತ್ಯಧಿಕವಾಗಿ ಗ್ರೂಪ್ ಹಂತದಲ್ಲಿಯೇ ವಿಶ್ವಕಪ್ ಇಂದ ಹೊರಬಿದ್ದಿದೆ. ಮುಂದೆ ಏನೆಲ್ಲಾ ಲೆಕ್ಕಾಚಾರ ಇದ್ದರು ಕೂಡ ಪಾಕಿಸ್ತಾನ ಸೆಮಿಫೈನಲ್ ಏರುವುದು ಅನುಮಾನ. ಇದೀಗ ಪಾಕಿಸ್ತಾನ ಭಾರತದ ವಿರುದ್ಧ ಹೇಳಿಕೆ ನೀಡಲು ಶುರು ಮಾಡಿದೆ.
ಮಾಜಿ ಪಾಕಿಸ್ತಾನ ಆಟಗಾರ ಶೋಯೆಬ್ ಮಲ್ಲಿಕ್ ತನ್ನ ಯೌಟ್ಯೂಬ್ ಚಾನೆಲ್ ಒಂದರಲ್ಲಿ ಪಾಕಿಸ್ತಾನ ಜಿಂಬಾಬ್ವೆ ವಿರುದ್ಧ ಸೋತ ಬಳಿಕ ಮಾತಾಡುತ್ತ “ನಾನು ಪಾಕಿಸ್ತಾನ ಮೊದಲ ವಾರವೇ ತನ್ನ ದೇಶಕ್ಕೆ ಮರಳುತ್ತದೆ ಎಂದು ಮೊದಲೇ ಹೇಳಿದ್ದೆ. ಆದರೆ ಭಾರತ ಸೆಮಿಫೈನಲ್ ತನಕ ಹೋಗಬಹುದು ಅಲ್ಲಿ ಸೋತು ಅದು ಕೂಡ ಮನೆಗೆ ತೆರಳುತ್ತದೆ. ಏಕೆಂದರೆ ಅದು ಅಂತಹ ಉತ್ತಮ ತಂಡವಲ್ಲ” ಎಂದು ಶೋಯೆಬ್ ಮಲ್ಲಿಕ್ ಹೇಳಿದ್ದಾನೆ.ಇದರಿಂದ ಗೊತ್ತಾಗುತ್ತದೆ ಪಾಕಿಸ್ತಾನ ಭಾರತ ಸೋಲಲಿ ಎಂದು ಎಷ್ಟು ಪ್ರಾರ್ಥಿಸುತ್ತಿದೆ ಎಂದು.
ಅಕ್ತರ್ ಇನ್ನು ಮುಂದೆ ಹೋಗುತ್ತಾ ಪಾಕಿಸ್ತಾನದ ನಾಯಕ ಬಾಬರ್ ಅಜಮ್ ಹಾಗು ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಅನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಪಾಕ್ ಪ್ರದರ್ಶನ ಸರಸರಿಯಾಗಿದೆ, ಅನರ್ಹ ಆಟಗಾರರನ್ನು ಆಯ್ಕೆ ಮಾಡಿದ್ದಾರೆ, ಒಳ್ಳೆಯ ಆಟಗಾರರನ್ನು ತಂಡಕ್ಕೆ ಸೇರಿಸಬೇಡಿ, ಅಶಿಸ್ತು ಹೊಂದಿರುವ ಆಟಗಾರರನ್ನು ಆಯ್ಕೆ ಮಾಡಿ ಎಂದು ತಮ್ಮ ಅಸಮಾಧಾನ ಹೇಳಿಕೊಂಡಿದ್ದಾರೆ. ಜಿಂಬಾಬ್ವೆ ವಿರುದ್ಧ ಸೋತ ಬಳಿಕ ಪಾಕಿಸ್ತಾನ ಐದನೇ ಸ್ಥಾನದಲ್ಲಿದೆ. ಭಾರತ ಮೊದಲ ಸ್ಥಾನದಲ್ಲಿ ಇದ್ದರೆ, ಸೌತ್ ಆಫ್ರಿಕಾ ಎರಡನೇ ಸ್ಥಾನದಲ್ಲಿ ಇದೆ. ಆದ್ದರಿಂದ ಇವೆರಡು ಸೆಮಿಫೈನಲ್ ಪ್ರವೇಶಿಸುವ ತಂಡಗಳಾಗುವುದು ಬಹುತೇಕ ಖಚಿತ.